Yogi Adithyanath: ‘500 ವರ್ಷ ಕಾದಿದ್ದೀರಿ, ಇನ್ನೂ 15 ದಿನ ಕಾಯಿರಿ’, ರಾಮಮಂದಿರ ದೇಣಿಗೆ ಹಗರಣದ ಬಗ್ಗೆ ವಿರೋಧಿಗಳಿಗೆ ಯೋಗಿ ಟಾಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Ayodhya Ram Mandir Donation Scam: ಎಸ್‌ಐಟಿ ತನ್ನ ಕೆಲಸವನ್ನು ಮಾಡುತ್ತಿದೆ. ಎಸ್‌ಐಟಿ ವಿರುದ್ಧ ಯಾರಿಗಾದರೂ ಯಾವುದೇ ದೂರುಗಳಿದ್ದರೆ, ಅವರನ್ನು ಕೇಳಲು ಅವರಿಗೆ ಅವಕಾಶ ನೀಡಲಾಗುವುದು ಎಂದ ಯೋಗಿ ಆದಿತ್ಯನಾಥ್, ತನಿಖೆಯ ಸಮಯದಲ್ಲಿ ಹೇಳಿಕೆಗಳನ್ನು ನೀಡುವುದನ್ನು ತಡೆಯಿರಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡಲಾಗುವುದಿಲ್ಲ ಎಂದು ಹೇಳಿದರು.

News18
News18

Ayodhya Ram Temple Donation Scam: ಅಯೋಧ್ಯಾ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯಲ್ಲಿ ಭಾರೀ ಕೋಟಿ ಕೋಟಿ ಗೋಲ್‌ಮಾಲ್ ಆಗಿದೆ ಎಂಬ ಆರೋಪ ಇಡೀ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಗಂಭೀರ ಆರೋಪದ ಮಧ್ಯೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಶುಕ್ರವಾರ) ಅಯೋಧ್ಯೆಗೆ ನೀಡಿದರು.

ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಮಮಂದಿರದಲ್ಲಿ ದೇಣಿಗೆ ಹಗರಣದ ಗಂಭೀರ ಆರೋಪದ ಕುರಿತು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ‘ಅಯೋಧ್ಯೆಯ ಮಾನಹಾನಿ ಮಾಡಬೇಡಿ’ ಎಂದು ಹೇಳಿದ ಯೋಗಿ ಆದಿತ್ಯನಾಥ್, ಕೆಲವರಿಗೆ ಅಯೋಧ್ಯೆಯ ಅಭಿವೃದ್ಧಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು 500 ವರ್ಷಗಳ ಕಾಲ ಕಾಯುತ್ತಿದ್ದಿರಿ. ಈಗ ಎಸ್‌ಐಟಿ ವರದಿಗಾಗಿ ಇನ್ನೂ 15 ದಿನ ಕಾಯಿರಿ ಎಂದು ಹೇಳಿದರು.

ಇದನ್ನೂ ಓದಿ: Wedding: ಚಹಾ ಅಂಗಡಿಯಲ್ಲಿ ಅರಳಿದ ಪ್ರೀತಿ.. ಕೇವಲ 15 ದಿನಕ್ಕೆ ಹೊಸ ಬದುಕಿಗೆ ಕಾಲಿಟ್ಟ 60ರ ಹರೆಯದ ಜೋಡಿ

ರುಡೌಲಿಯಲ್ಲಿ ಕಾಮಾಕ್ಯ ದೇವಸ್ಥಾನದ ಉದ್ಘಾಟನೆಯ ಸಂದರ್ಭದಲ್ಲಿ, ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕಾಗಿ ರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಜನರು ನಮಗೆ ಧರ್ಮೋಪದೇಶ ಮಾಡುತ್ತಿದ್ದಾರೆ ಎಂದು ಹೇಳಿದ ಆದಿತ್ಯನಾಥ್, ರಾಮಮಂದಿರ ನಿರ್ಮಾಣವನ್ನು ತಡೆಯಲು ನ್ಯಾಯಾಲಯದಲ್ಲಿ ವಕೀಲರ ಸೈನ್ಯವನ್ನು ನಿಯೋಜಿಸಿದ ಜನರು ಧರ್ಮೋಪದೇಶ ಮಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಅನ್ನು ಟೀಕಿಸಿ ಹೇಳಿದರು.

ಎಸ್‌ಐಟಿ ತನಿಖೆ ನಡೆಸುತ್ತಿದೆ, ಸತ್ಯ ಬಹಿರಂಗಗೊಳ್ಳಲಿದೆ ಎಂದ ಮುಖ್ಯಮಂತ್ರಿ ಆದಿತ್ಯನಾಥ್, ಅಪರಾಧಿಗಳಿಗೆ ಇತಿಹಾಸ ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಶಿಕ್ಷೆ ವಿಧಿಸಲಾಗುವುದು. ಯಾರ ಬಳಿಯಾದರೂ ಪುರಾವೆಗಳಿದ್ದರೆ, ಅವರು ಅದನ್ನು ಎಸ್‌ಐಟಿಗೆ ಒದಗಿಸಬೇಕು. ದಾರಿ ತಪ್ಪಬೇಡಿ. ಈ ಜನರು ಅಯೋಧ್ಯೆಯನ್ನು ಕಿರಿದಾದ ಬೀದಿಗಳಿಗೆ ತಳ್ಳಿದ್ದರು, ಇಂದು ಅಯೋಧ್ಯೆಯನ್ನು ಕಳಂಕಿತಗೊಳಿಸಲಾಗುತ್ತಿದೆ ಎಂದರು.

ಎಸ್‌ಐಟಿ ತನ್ನ ಕೆಲಸವನ್ನು ಮಾಡುತ್ತಿದೆ. ಎಸ್‌ಐಟಿ ವಿರುದ್ಧ ಯಾರಿಗಾದರೂ ಯಾವುದೇ ದೂರುಗಳಿದ್ದರೆ, ಅವರನ್ನು ಕೇಳಲು ಅವರಿಗೆ ಅವಕಾಶ ನೀಡಲಾಗುವುದು ಎಂದ ಯೋಗಿ ಆದಿತ್ಯನಾಥ್, ತನಿಖೆಯ ಸಮಯದಲ್ಲಿ ಹೇಳಿಕೆಗಳನ್ನು ನೀಡುವುದನ್ನು ತಡೆಯಿರಿ. ಯಾರ ಪಾತ್ರಕ್ಕೂ ಮಸಿ ಬಳಿಯಬಾರದು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡಲಾಗುವುದಿಲ್ಲ ಎಂದು ಹೇಳಿದರು.

‘ವಿರೋಧ ಪಕ್ಷಗಳು ರಾಮ ಭಕ್ತರನ್ನು ಗೌರವಿಸುವ ಬಗ್ಗೆ ಮಾತನಾಡುತ್ತಿವೆ’

ಕಾಂಗ್ರೆಸ್ ಪಕ್ಷವು ರಾಮ ಮಂದಿರ ನಿರ್ಮಾಣವನ್ನು ವರ್ಷಗಳ ಕಾಲ ವಿರೋಧಿಸಿ, ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿತ್ತು ಎಂದ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಸರ್ಕಾರದ ಅವಧಿಯಲ್ಲಿ, ರಾಮ ಭಕ್ತರು ಮತ್ತು ಕರಸೇವಕರ ಮೇಲೆ ಗುಂಡು ಹಾರಿಸಲಾಯಿತು. ಇದಲ್ಲದೆ, ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದ ಮೇಲೆ ಲಾಠಿಚಾರ್ಜ್ ಮಾಡಲಾಯಿತು. ಇಂದು ಇದೇ ಜನರು ರಾಮ ಭಕ್ತರನ್ನು ಗೌರವಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಮ ಮಂದಿರ ಟ್ರಸ್ಟ್‌ನ ಕೋರಿಕೆಯ ಮೇರೆಗೆ ಸರ್ಕಾರ ಎಸ್‌ಐಟಿಯನ್ನು ರಚಿಸಿದೆ ಮತ್ತು ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲಾಗುವುದು ಎಂದ ಯೋಗಿ ಆದಿತ್ಯನಾಥ್, ರಾಮ ಭಕ್ತರು ಘನತೆ ಮತ್ತು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ನಮ್ಮ ಪೂರ್ವಜರು ಭಗವಾನ್ ಶ್ರೀರಾಮನ ಜನ್ಮಸ್ಥಳಕ್ಕಾಗಿ 500 ವರ್ಷಗಳ ಕಾಲ ಘನತೆಯಿಂದ ಹೋರಾಡಿ ಕಾದಿದ್ದೀರಿ. ದಯವಿಟ್ಟು ಇನ್ನೂ 15 ದಿನಗಳವರೆಗೆ ತಾಳ್ಮೆಯಿಂದಿರಿ ಎಂದು ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed