Last Updated:
ಹೌತಿಗಳು ಇನ್ನೂ ಅಧಿಕೃತವಾಗಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲವಾದರೂ, ಯೆಮೆನ್ ಸರ್ಕಾರ ಮತ್ತು ಸಾರಿಗೆ ಸಚಿವಾಲಯವು ದಾಳಿಗೆ ಹೌತಿಗಳೇ ಕಾರಣ ಎಂದು ಆರೋಪಿಸಿದೆ. ಹಡಗಿನ ಹಾನಿ, ಸಾವುಗಳು ಮತ್ತು ಗಾಯಗಳಿಗೆ ಹೌತಿ ಹೋರಾಟಗಾರರು ಕಾರಣ ಎಂದು ಯೆಮೆನ್ ಸಾರಿಗೆ ಸಚಿವಾಲಯ ಹೇಳಿದೆ.
Yemen’s Houthis Attack on Red Sea: ಯೆಮೆನ್‌ನ ದಕ್ಷಿಣ ಕರಾವಳಿಯ ಬಳಿ ದಾಳಿ ಮಾಡುವ ಮೂಲಕ ಹೌತಿ ಬಂಡುಕೋರರು ಮತ್ತೊಮ್ಮೆ ಸಂಚಲನ ಮೂಡಿಸಿದ್ದಾರೆ. ಬಾಬ್ ಅಲ್-ಮಂಡೇಬ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ಶಂಕಿತ ಹೌತಿ ಪಡೆಗಳು ದಾಳಿ ನಡೆಸಿ ಕನಿಷ್ಠ 6 ಜನರನ್ನು ಕೊಂದಿವೆ ಎಂದು ವರದಿಯಾಗಿದೆ.














