Last Updated:
ರಾಕಿಂಗ್ ಸ್ಟಾರ್ ಯಶ್ ಸಮುದ್ರ ತೀರದಲ್ಲಿ ಸೈಕ್ಲಿಂಗ್ ಮಾಡಿದ್ದಾರೆ. ಫ್ಯಾಮಿಲಿ ಜೊತೆಗಿನ ಈ ಚೆಂದದ ಕ್ಷಣದ ಬಗ್ಗೆ ರಾಧಿಕಾ ಪಂಡಿತ್ ಅದ್ಭುತ ಸಾಲುಗಳನ್ನ ಬರೆದಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ಪತ್ನಿ ರಾಧಿಕಾ (Radhika) ಹಾಗೂ ಮಕ್ಕಳು ಸದ್ಯ ಜಾಲಿ ಮೂಡ್ ಅಲ್ಲಿಯೇ ಇದ್ದಾರೆ. ಈ ಒಂದು ಜಾಲಿ ಟೈಮ್ ಅಲ್ಲಿ ಸಮುದ್ರ ತೀರದಲ್ಲಿ ಸೈಕ್ಲಿಂಗ್ (Cycling) ಕೂಡ ಮಾಡಿದ್ದಾರೆ. ಮಗನ ಜೊತೆಗೆ ರಾಧಿಕಾ ಪಂಡಿತ್ ಮುಂದೆ ಮುಂದೆ ಸಾಗುತ್ತಿದ್ದಾರೆ. ಮಗಳ ಹಿಂದೆ ಹಿಂದೆ ರಾಕಿ ಭಾಯ್ ಬರ್ತಿದ್ದಾರೆ. ಇವರ ಈ ಕ್ಷಣದ ಫೋಟೋವನ್ನ ಸ್ವತಃ ರಾಧಿಕಾ ಪಂಡಿತ್ (Radhika Pandith) ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರ ರಿಲೀಸ್ ಆದ್ಮೇಲೆ ಯಶ್ ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ. ವರ್ಷಾನುಗಟ್ಟಲೆ ಚಿತ್ರದ ಕೆಲಸದಲ್ಲಿಯೆ ಯಶ್ ಬ್ಯೂಸಿ ಇದ್ದರು.
ರಾಕಿ ಭಾಯ್ ಸೈಕ್ಲಿಂಗ್
(ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್)
ಸಮುದ್ರ ತೀರದಲ್ಲಿ ರಾಕಿ ಭಾಯ್ ಸೈಕ್ಲಿಂಗ್ ಮಾಡಿದ್ದಾರೆ. ಮಕ್ಕಳು ಮತ್ತು ರಾಧಿಕಾ ಪಂಡಿತ್ ಕೂಡ ಸಾಥ್ ಕೊಟ್ಟಿದ್ದಾರೆ. ಇವರ ಸೈಕ್ಲಿಂಗ್ ಸಮಯವನ್ನ ವಿವರಿಸೋದಾದ್ರೆ, ಮುಂದೆ ರಾಧಿಕಾ ಪಂಡಿತ್ ಇದ್ದಾರೆ. ಪಕ್ಕದಲ್ಲಿ ಪುಟ್ಟ ಸೈಕಲ್ ಅಲ್ಲಿ ಮಗ ಯಥರ್ವ್ ಇದ್ದಾನೆ.
ರಾಧಿಕಾ ಪಂಡಿತ್ ಈ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಅಲ್ಲಿ ಇವುಗಳನ್ನ ಹಂಚಿಕೊಂಡಿದ್ದಾರೆ.
ರಾಧಿಕಾ ಹ್ಯಾಪಿನೆಸ್
(ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್)
ಈ ಮೂಲಕ ತಮ್ಮ ಜಾಲಿ ಟೈಮ್ ಹೇಗಿತ್ತು ಅನ್ನೋದನ್ನು ಶೇರ್ ಮಾಡಿಕೊಂಡಿದ್ದಾರೆ. ಸಮುದ್ರ ತೀರದಲ್ಲಿ ನಿಂತು ತೆಗೆದುಕೊಂಡ ಫೋಟೋಗಳನ್ನು ಇವರು ಇಲ್ಲಿ ಶೇರ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ತಮ್ಮ ಈ ಫೋಟೋಗಳ ಜೊತೆಗೆ ಚೆಂದದ ಎರಡು ಸಾಲು ಬರೆದಿದ್ದಾರೆ. ಅದು ಇಂಗ್ಲಿಷ್ ಅಲ್ಲಿಯೇ ಇದೆ. ಅದು ಈ ರೀತಿ ಇದೆ.“Quiet enough to hear the waves. Loud enough to remember each moment” ಈ ಸಾಲಿನ ಕನ್ನಡದ ಅರ್ಥ ತುಂಬಾನೆ ಚೆನ್ನಾಗಿದೆ. ಅದು ಹೀಗೆ ಬರುತ್ತದೆ.
ಸಮುದ್ರದ ಅಲೆಗಳು ಕೇಳುವಷ್ಟು ನಿಶ್ಯಬ್ದ ಇದೆ. ಪ್ರತಿ ಕ್ಷಣವೂ ಮನದಲ್ಲಿ ಉಳಿಯುವಷ್ಟು ಗದ್ದಲ ಇದೆ ಅನ್ನುವ ಅರ್ಥವನ್ನೆ ಈ ಸಾಲುಗಳು ಕೊಡುತ್ತವೆ.
ರಾಧಿಕಾ ಪಂಡಿತ್ ಹ್ಯಾಪಿ ಆಗಿದ್ದಾರೆ. ಅದು ಈ ಫೋಟೋಗಳಲ್ಲೂ ಕಾಣಿಸುತ್ತದೆ. ಆದರೆ, ಯಶ್ ಅವರ ಕ್ಲೋಸ್ ಅಪ್ ಫೋಟೋಗಳು ಇಲ್ಲಿ ಇಲ್ಲ. ಆದರೆ, ದೂರದಲ್ಲಿ ಬರ್ತಿರೋದ್ರಿಂದ ಕ್ಲೀಯರ್ ಆಗಿ ಏನೂ ಗೊತ್ತಾಗಲ್ಲ ಅಂತ ಹೇಳಬಹುದು.














