Asian Games 2026: ಮೀರಾಬಾಯಿ ಚಾನು ಅಪರೂಪದ ದಾಖಲೆ! 28 ವರ್ಷಗಳ ನಂತರ ಭಾರತಕ್ಕೆ ವೇಟ್‌ಲಿಫ್ಟಿಂಗ್ ಪದಕ | ಕ್ರೀಡಾ ಸುದ್ದಿ | ACTPnews

ಮೀರಾಬಾಯಿ ಚಾನು


Last Updated:

ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಏಷ್ಯನ್ ಗೇಮ್ಸ್​​​ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಹಿಂದಿನ ಸಲ ನಿರಾಸೆಯಾದರೂ, ಈ ಬಾರಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.

ಮೀರಾಬಾಯಿ ಚಾನು
ಮೀರಾಬಾಯಿ ಚಾನು

ಭಾರತದ ಹೆಸರಾಂತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮತ್ತೊಂದು ದೊಡ್ಡ ಸಾಧನೆ ಮಾಡಿದ್ದಾರೆ. ಬುಧವಾರ ನಗೋಯಾದಲ್ಲಿ ನಡೆದ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಅವರಿಗೆ ಪದಕ ಬಂದದ್ದು ಇದೇ ಮೊದಲು. ಹಿಂದಿನ ಬಾರಿ ನಾಲ್ಕನೇ ಸ್ಥಾನಕ್ಕೆ ಸೀಮಿತರಾಗಿದ್ದ ಅವರು ಈ ಬಾರಿ ಅದ್ಭುತ ಪ್ರದರ್ಶನ ನೀಡಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

32 ವರ್ಷದ ಮೀರಾಬಾಯಿ ಒಟ್ಟು 198 ಕೆಜಿ ಎತ್ತಿದರು. ಉತ್ತರ ಕೊರಿಯಾದ ರಿ ಸಾಂಗ್ ಗಮ್ 210 ಕೆಜಿ ಎತ್ತಿ ಚಿನ್ನ ಗೆದ್ದರು. ಈ ಗೆಲುವಿನಿಂದ ಮೀರಾಬಾಯಿ ಚಾನು ಹೊಸ ಸಾಧನೆ ಮಾಡಿದ್ದಾರೆ. ಕರ್ಣಂ ಮಲ್ಲೇಶ್ವರಿ ನಂತರ ಎಲ್ಲಾ ದೊಡ್ಡ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಪದಕ ಗೆದ್ದ ಎರಡನೇ ಭಾರತೀಯ ವೇಟ್‌ಲಿಫ್ಟರ್ ಆಗಿದ್ದಾರೆ.

ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್, ಏಷ್ಯನ್ ಮತ್ತು ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದ ಅಪರೂಪದ ಆಟಗಾರರ ಪಟ್ಟಿಗೆ ಮೀರಾಬಾಯಿ ಚಾನು ಅವರು ಸೇರಿದ್ದಾರೆ. ಹಿಂದಿನ ಸೋಲು ಮತ್ತು ನಿರಾಶೆಗಳನ್ನು ಮೀರಿ ಈ ಹಂತಕ್ಕೆ ಬಂದಿರುವುದು ಭಾರೀ ಮೆಚ್ಚುಗೆ ಕಾರಣವಾಗಿದೆ.

28 ವರ್ಷಗಳ ನಂತರ ಭಾರತಕ್ಕೆ ಪದಕ

ಮೀರಾಬಾಯಿ ಚಾನು ಅವರ ಗೆಲುವು ಇತಿಹಾಸ ಸೃಷ್ಟಿಸಿದೆ. ಏಕೆಂದರೆ 28 ವರ್ಷಗಳ ನಂತರ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ವೇಟ್‌ಲಿಫ್ಟಿಂಗ್ ಪದಕ ಗೆದ್ದಿದೆ. 1998ರಲ್ಲಿ ಕರ್ಣಂ ಮಲ್ಲೇಶ್ವರಿ 63 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅದೇ ಕೊನೆಯ ಪದಕವಾಗಿತ್ತು. ಈ ದೀರ್ಘ ಕಾಲದ ನಂತರ ಮೀರಾಬಾಯಿ ಪದಕ ಗೆದ್ದು, ತಾವು ದೇಶದ ಉತ್ತಮ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ತೋರಿಸಿದ್ದಾರೆ. ಇಡೀ ದೇಶ ಅವರ ಸಾಧನೆಯನ್ನು ಹೆಮ್ಮೆಯಿಂದ ನೋಡುತ್ತಿದೆ.

ಉತ್ತರ ಕೊರಿಯಾ ಆಟಗಾರ್ತಿಯಿಂದ ಕಠಿಣ ಸವಾಲು

ಮೀರಾಬಾಯಿ ಚಾನು ಅವರ ಕೊನೆಯ ಸುತ್ತು ಬಹಳ ಕಷ್ಟಕರ ಮತ್ತು ರೋಚಕವಾಗಿತ್ತು. ಉತ್ತರ ಕೊರಿಯಾದ ಪ್ರಸಿದ್ಧ ವೇಟ್‌ಲಿಫ್ಟರ್ ರಿ ಸಾಂಗ್ ಗಮ್ ಮೊದಲಿನಿಂದಲೇ ಎಲ್ಲರಿಗಿಂತ ಮುಂದಿದ್ದರು. ಅವರು ಸ್ನ್ಯಾಚ್, ಕ್ಲೀನ್ ಅಂಡ್ ಜರ್ಕ್ ಮತ್ತು ಒಟ್ಟು ತೂಕ ಎತ್ತುವಿಕೆಯಲ್ಲಿ ಹೊಸ ವಿಶ್ವ ದಾಖಲೆ ಮಾಡಿ ಚಿನ್ನದ ಪದಕ ಗೆದ್ದರು.

ಒಟ್ಟು 215 ಕೆಜಿ ಎತ್ತಿ ಅವರು ಮೊದಲ ಸ್ಥಾನ ಪಡೆದರು. 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಮೀರಾಬಾಯಿಗೆ ತೊಡೆಯಲ್ಲಿ ಗಾಯವಾಗಿದ್ದರಿಂದ ನಾಲ್ಕನೇ ಸ್ಥಾನ ಬಂತು. ಆ ಗಾಯದಿಂದ ಫೈನಲ್‌ನಲ್ಲಿ ಅವರ ಕ್ಲೀನ್ ಅಂಡ್ ಜರ್ಕ್ ಪ್ರಯತ್ನಕ್ಕೆ ತೊಂದರೆಯಾಯಿತು.

ಕಠಿಣ ಸ್ಪರ್ಧೆ ಇದ್ದರೂ ಮೀರಾಬಾಯಿ ಚಾನು ಎದೆಗುಂದದೆ ಧೈರ್ಯ ತೋರಿದರು. ಅವರು ಒಟ್ಟು 198 ಕೆಜಿ ತೂಕ ಎತ್ತಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರು. ಚಿನ್ನ ತಪ್ಪಿದರೂ, ವಿಶ್ವ ದಾಖಲೆದಾರರ ವಿರುದ್ಧ ಹೋರಾಡಿ 28 ವರ್ಷಗಳ ನಂತರ ಭಾರತಕ್ಕೆ ವೇಟ್‌ಲಿಫ್ಟಿಂಗ್ ಪದಕ ತಂದಿದ್ದು ಬಹಳ ದೊಡ್ಡ ಸಾಧನೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed