Gautam Gambhir: ಆತನನ್ನ ತಂಡದಿಂದ ಹೊರಗಿಟ್ಟ ದಿನ ನಾನು ನಿದ್ದೆ ಮಾಡಿರಲಿಲ್ಲ! ಗಂಭೀರ್ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews

ಸಂಜು ಸ್ಯಾಮ್ಸನ್ (ANI)


Last Updated:

ವಿಶ್ವಕಪ್ ಬಳಿಕ ನಡೆದ ಮೊದಲ ಟಿ20 ಸರಣಿಯನ್ನಾಡಲು ಭಾರತ ಐರ್ಲೆಂಡ್ ಪ್ರವಾಸ ಕೈಗೊಂಡಿತ್ತು. ಅಲ್ಲಿ ಭಾರತ ತಂಡ 2-0ಯಲ್ಲಿ ಸರಣಿಯನ್ನ ಕಳೆದುಕೊಂಡಿತು. ಅಲ್ಲಿ ಸಂಜು ಸ್ಯಾಮ್ಸನ್​ 5, 0ಗೆ ವಿಕೆಟ್ ಒಪ್ಪಿಸಿದ್ದರು ನಂತರ ಇಂಗ್ಲೆಂಡ್ ಪ್ರವಾಸದಲ್ಲಿ 2 ಪಂದ್ಯಗಳಲ್ಲಿ 1, 27ಕ್ಕೆ ವಿಕೆಟ್ ಒಪ್ಪಿಸಿ ಮತ್ತೆ ಅದೇ ವೈಫಲ್ಯವನ್ನ ಮುಂದುವರಿಸಿದರು.

 ಸಂಜು ಸ್ಯಾಮ್ಸನ್ (ANI)
ಸಂಜು ಸ್ಯಾಮ್ಸನ್ (ANI)

ಟಿ20 ವಿಶ್ವಕಪ್ (T20 World Cup) ಗೆದ್ದ ಭಾರತ ತಂಡದಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಆಗಿದ್ದ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಇಂಗ್ಲೆಂಡ್ ಪ್ರವಾಸದ (England Tour) ಸರಣಿಯ ಮಧ್ಯೆ ತಂಡದ ಆಡುವ ಹನ್ನೊಂದರ ಬಳಗದಿಂದ (Playing XI) ಕೈಬಿಡಲಾಗಿತ್ತು. ಆ ಜಾಗಕ್ಕೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ತರಲಾಗಿತ್ತು. ಆ ನಿರ್ಧಾರವನ್ನ ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ನಿರ್ಧಾರ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದಕ್ಕಾಗಿ ಆ ರಾತ್ರಿ ನಾನು ನಿದ್ದೆ ಮಾಡಲಿಲ್ಲ. ಐಸಿಸಿ ಟಿ20 ವಿಶ್ವಕಪ್ 2026 ರಲ್ಲಿ ಭಾರತದ ಗೆಲುವಿನಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರು. ಅದರ ನಂತರ, ಅವರು ಸತತವಾಗಿ 3-4 ಪಂದ್ಯಗಳಲ್ಲಿ ವಿಫಲರಾಗಿದ್ದರು. ಅದೇ ಕಾರಣದಿಂದ ಅವರನ್ನ ತಂಡದಿಂದ ಕೈಬಿಡಲಾಗಿತ್ತು.

ನಾಲ್ಕು ಪಂದ್ಯಗಳಲ್ಲಿ ವಿಫಲವಾಗಿದ್ದಕ್ಕೆ ಹೊರಕ್ಕೆ

ವಿಶ್ವಕಪ್ ಬಳಿಕ ನಡೆದ ಮೊದಲ ಟಿ20 ಸರಣಿಯನ್ನಾಡಲು ಭಾರತ ಐರ್ಲೆಂಡ್ ಪ್ರವಾಸ ಕೈಗೊಂಡಿತ್ತು. ಅಲ್ಲಿ ಭಾರತ ತಂಡ 2-0ಯಲ್ಲಿ ಸರಣಿಯನ್ನ ಕಳೆದುಕೊಂಡಿತು. ಅಲ್ಲಿ ಸಂಜು ಸ್ಯಾಮ್ಸನ್​ 5, 0ಗೆ ವಿಕೆಟ್ ಒಪ್ಪಿಸಿದ್ದರು. ನಂತರ ಇಂಗ್ಲೆಂಡ್ ಪ್ರವಾಸದಲ್ಲಿ 2 ಪಂದ್ಯಗಳಲ್ಲಿ 1, 27ಕ್ಕೆ ವಿಕೆಟ್ ಒಪ್ಪಿಸಿ ಮತ್ತೆ ಅದೇ ವೈಫಲ್ಯವನ್ನ ಮುಂದುವರಿಸಿದರು. ಹಾಗಾಗಿ ಮುಂದಿನ 2 ಪಂದ್ಯಗಳಿಗೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿತ್ತು. ಅಲ್ಲದೆ ಮುಂದಿನ ಜಿಂಬಾಬ್ವೆ ಪ್ರವಾಸದಿಂದಲೂ ಅವರಿಗೆ ವಿಶ್ರಾಂತಿ ನೀಡಲಾಗಿದೆ. ವೈಭವ್ ಸಂಜು ಜಾಗದಲ್ಲಿ ಅದ್ಭುತವಾಗಿ ಆಡಿದರು. ಆದರೆ ಸಂಜು ಸ್ಯಾಮ್ಸನ್​ ತಂಡಕ್ಕೆ ಮರಳಿದ ನಂತರ ವೈಭವ್ ಅವರನ್ನು ಬೆಂಚ್ ಗೆ ಸೀಮಿತಗೊಳಿಸಲಾಗಿದೆ. ಈ ನಿರ್ಧಾರವನ್ನ ಕೆಲವರು ಪ್ರಶ್ನಿಸಿದರೆ, ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಆ ದಿನ ನನಗೆ ನಿದ್ದೆ ಬರಲಿಲ್ಲವೆಂದ ಗೌತಿ

ಅದ್ಭುತವಾಗಿ ಆಡುತ್ತಿರುವ ವೈಭವ್ ಸೂರ್ಯವಂಶಿಯನ್ನ ಪ್ಲೇಯಿಂಗ್ ಇಲೆವೆನ್​​ನಿಂದ ಹೊರಗಟ್ಟಿದ್ದಕ್ಕಾಗಿ ಗೌತಮ್ ಗಂಭೀರ್ ಟೀಕೆಗೆ ಗುರಿಯಾಗಿದ್ದರು. ಈ ಬಗ್ಗೆ ಸ್ವತಃ ಗಂಭೀರ್ ಪ್ರತಿಕ್ರಿಯಿಸಿದ್ದು, ವೈಭವ್, ಸಂಜು ಸ್ಯಾಮ್ಸನ್ ತಂಡದಲ್ಲಿ ಇರುವವರೆಗೂ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಗಂಭೀರ್ ಇತ್ತೀಚೆಗೆ ಜಿಯೋ ಹಾಟ್ ಸ್ಟಾರ್ ಶೋನಲ್ಲಿ ಮಾತನಾಡುವ ವೇಳೆ ಈ ಆಸಕ್ತಿದಾಯಕ ಕಾಮೆಂಟ್ ಗಳನ್ನು ಮಾಡಿದ್ದರು. “ನನ್ನ ಎರಡು ವರ್ಷಗಳ ಕೋಚಿಂಗ್ ವೃತ್ತಿಜೀವನದಲ್ಲಿ, ನಾನು (ಸಂಜುವನ್ನ ತಂಡದಿಂದ ಬಿಟ್ಟ ದಿನ) ರಾತ್ರಿಯಿಡೀ ನಿದ್ರೆ ಮಾಡಲಿಲ್ಲ. ಇದನ್ನು ನಾನು ಸಂಜುಗೂ ಹೇಳಿದ್ದೆ” ಎಂದು ಹೇಳಿದ್ದಾರೆ.

ಸಂಜು ಅವರನ್ನು ತಂಡದಿಂದ ಕೈಬಿಡುವುದು ನನ್ನ ಕೋಚಿಂಗ್ ವೃತ್ತಿಜೀವನದ ಕಠಿಣ ನಿರ್ಧಾರವಾಗಿತ್ತು. ಕೇವಲ ಮೂರು ಅಥವಾ ನಾಲ್ಕು ಪಂದ್ಯಗಳ ನಂತರ ವಿಶ್ವಕಪ್ ಹೀರೋ ಹೊರಗುಳಿಸಬೇಕಾಗಿತ್ತು. ಆ ಸಮಯದಲ್ಲಿ ವೈಭವ್ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಸರಣಿ ಗೆಲ್ಲಲು ನಮಗೆ ಅಗ್ರ ಕ್ರಮಾಂಕದಲ್ಲಿ ರನ್ ಬೇಕಿತ್ತು. ನಾನು ಸಂಜು ಅವರೊಂದಿಗೆ ಬಹಳ ಪ್ರಾಮಾಣಿಕ ಸಂಭಾಷಣೆ ನಡೆಸಿದೆ. ಅವರು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡರು ಎಂದು ತಿಳಿಸಿದ್ದಾರೆ.

ಟೀಕಿಸುವವರಿಗಾಗಿ ಪ್ಲೇಯಿಂಗ್ ಇಲೆವೆನ್ ನಿರ್ಧರಿಸುವುದಕ್ಕಾಗಲ್ಲ

ಸಾಮಾಜಿಕ ಮಾಧ್ಯಮ ಅಥವಾ ಹೊರಗಿನ ಟೀಕೆಗಳು ಅಂತಿಮ ತಂಡವನ್ನು ನಿರ್ಧರಿಸುವುದಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ, ನಾಯಕ ಮತ್ತು ಕೋಚ್ ಒಟ್ಟಿಗೆ ಇದ್ದಾರೆ. ಪಂದ್ಯವನ್ನು ಗೆಲ್ಲಿಸುತ್ತಾರೆಂದು ನಾವು ಭಾವಿಸಿದರೆ ಅವರಿಗೆ ಅವಕಾಶ ನೀಡುತ್ತೇವೆ. ಕಳೆದ ಎರಡು ವರ್ಷಗಳಿಂದ ಸತತವಾಗಿ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಕೆಲವು ವೈಫಲ್ಯಗಳಿಂದ ಹೊರಗಿಟ್ಟು, ಡ್ರೆಸ್ಸಿಂಗ್ ರೂಮ್​​ನಲ್ಲಿ ಅಭದ್ರತೆ ಉಂಟು ಮಾಡಲು ಸಾಧ್ಯವಿಲ್ಲ. ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ. ಆದರೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ. ನಾವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಗಂಭೀರ್ ಹೇಳಿದ್ದಾರೆ.

ಅಯ್ಯರ್ ಪ್ರಶಂಸಿಸಿದ ಗೌತಮ್

ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರನ್ನೂ ಗಂಭೀರ್ ಹೊಗಳಿದ್ದಾರೆ. “ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರ ಬಗ್ಗೆ ನಾನು ಇಷ್ಟಪಡುವ ಮುಖ್ಯ ಗುಣವೆಂದರೆ ಅವರ ನಿಸ್ವಾರ್ಥತೆ. ತಂಡದ ಅನುಕೂಲಕ್ಕಾಗಿ ಅವರು ತಮ್ಮ ನಾಲ್ಕನೇ ಬ್ಯಾಟಿಂಗ್ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿದ್ದರು. ಒಬ್ಬ ನಾಯಕನಿಗೆ ಇದನ್ನು ಮಾಡುವುದು ತುಂಬಾ ಅಪರೂಪ. ಇದು ಉತ್ತಮ ನಾಯಕನ ಮೊದಲ ಲಕ್ಷಣ. ಶ್ರೇಯಸ್ ನಲ್ಲಿ ಸಾಕಷ್ಟು ನಿಸ್ವಾರ್ಥತೆ ಇದೆ. ಒಂದು ಅಥವಾ ಎರಡು ಸೋಲುಗಳೊಂದಿಗೆ ತಂಡವನ್ನು ನಿರ್ಣಯಿಸುವುದು ಸರಿಯಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed