Ranabaali Movie: ರಿಯಲ್ ಲೈಫ್ ಸತಿ-ಪತಿಗಳ ರೀಲ್ ರೊಮ್ಯಾನ್ಸ್; ‘ರಣಬಾಲಿ’ ಹಾಡಿನ ವಿಡಿಯೋ ರಿಲೀಸ್! | | ACTPnews

ರಿಯಲ್ ಸತಿ-ಪತಿಯ ರೀಲ್ ರೋಮ್ಯಾನ್ಸ್ ಔಟ್; ರಣಬಾಲಿ ಲಿರಿಕಲ್ ವಿಡಿಯೋ ರಿಲೀಸ್!(ಚಿತ್ರ ಕೃಪೆ: ರಣಬಾಲಿ ಸಿನಿಮಾ ಟೀಮ್‌)


Last Updated:

ರಣಬಾಲಿ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಸತಿ ಪತಿ ಪಾತ್ರದಲ್ಲಿಯೇ ಅಭಿನಯಿಸಿದ್ದಾರೆ. ಈ ಪಾತ್ರದ ಒಂದು ರೋಮ್ಯಾಂಟಿಕ್ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಈ ಗೀತೆ ಆ ದಿನಗಳ ಚೆಂದದ ಪ್ರೀತಿಯನ್ನ ಕಟ್ಟಿಕೊಡುತ್ತದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ರಿಯಲ್ ಸತಿ-ಪತಿಯ ರೀಲ್ ರೋಮ್ಯಾನ್ಸ್ ಔಟ್; ರಣಬಾಲಿ ಲಿರಿಕಲ್ ವಿಡಿಯೋ ರಿಲೀಸ್!(ಚಿತ್ರ ಕೃಪೆ: ರಣಬಾಲಿ ಸಿನಿಮಾ ಟೀಮ್‌)
ರಿಯಲ್ ಸತಿ-ಪತಿಯ ರೀಲ್ ರೋಮ್ಯಾನ್ಸ್ ಔಟ್; ರಣಬಾಲಿ ಲಿರಿಕಲ್ ವಿಡಿಯೋ ರಿಲೀಸ್!(ಚಿತ್ರ ಕೃಪೆ: ರಣಬಾಲಿ ಸಿನಿಮಾ ಟೀಮ್‌)

ರಣಬಾಲಿ (Ranabaali) ಬ್ರಿಟಿಷ್ ಕಾಲಘಟ್ಟದ ಕಥೆ ಹೇಳುತ್ತದೆ. 1854 ರಿಂದ 1878 ರ ನಡುವಿನ ಘಟನೆಯನ್ನೆ ಇದು ಆಧರಿಸಿದೆ. ಈ ಚಿತ್ರದಲ್ಲಿ (Movie) ಬ್ರಿಟಿಷ್ ವಿರುದ್ಧ ಹೋರಾಡುವ ಕ್ರಾಂತಿಯ ಕಥೆ ಮಾತ್ರ ಇಲ್ಲ. ಇಲ್ಲೊಂದು ಪ್ರೀತಿ ತುಂಬಿದ ಕತೆ ಇದೆ. ಇದಕ್ಕೊಂದು ಪ್ರಣಯ ಗೀತೆನೂ ಇದೆ. ಹಳ್ಳಿಗಾಡಿನಲ್ಲಿ ಆ ಕಾಲದಲ್ಲಿ ಮದುವೆಗಳು ಹೇಗೆ ನಡೆಯುತ್ತಿದ್ದವು ಅನ್ನುವ ಚಿತ್ರಣ ನೀಡುವ ಹಾಡೂ ಇದಾಗಿದೆ. ಈ ಹಾಡಿನಲ್ಲಿ ರಿಯಲ್ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಇದ್ದಾರೆ. ಇಲ್ಲೂ ಇವರು ಸತಿ ಮತ್ತು ಪತಿ ಆಗಿದ್ದಾರೆ. ರಣಬಾಲಿಯ ಈ ಫಸ್ಟ್ ಲಿರಿಕಲ್ ಸಾಂಗ್ ಇಂಟ್ರಸ್ಟಿಂಗ್ ಆಗಿದೆ. ಅಷ್ಟೆ ರೋಮ್ಯಾಂಟಿಕ್ ಅನಿಸುತ್ತದೆ.

ರಣಬಾಲಿ ರೋಮ್ಯಾನ್ಸ್

ರಣಬಾಲಿ ಸಿನಿಮಾದಲ್ಲಿ ರೋಮ್ಯನ್ಸ್ ಇದೆ. ಇದನ್ನ ಕಟ್ಟಿಕೊಡುವ “ಎಂದಯ್ಯಾ ಸಾಮಿ” ಅನ್ನುವ ಹಾಡೂ ಇದೆ. ಇದರಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾಮಂದಣ್ಣ ಅವರ ಪ್ರಣಯದ ಕತೆ ಇದೆ.
Rashmika Mandanna Vijay Deverakonda Endayya Saami Song Release

ಅದಕ್ಕೆ 5 ಭಾಷೆಯಲ್ಲಿ ಸಾಂಗ್

(ಚಿತ್ರ ಕೃಪೆ: ರಣಬಾಲಿ ಸಿನಿಮಾ ಟೀಮ್‌)

ಆಗ ತಾನೆ ಮದುವೆ ಆದ ಇವರ ಪ್ರಣಯದ ಕ್ಷಣಗಳು ಇಲ್ಲಿವೆ. ಮದುವೆಯ ಸಂಭ್ರಮವು ಇಲ್ಲಿದೆ. ಆಗಿನ ಸಮಯದಲ್ಲಿ ಸತಿ ಮತ್ತು ಪತಿ ಯಾವ ರೀತಿ ಇರ್ತಾ ಇದ್ದರು. ಅವರ ಪ್ರಣಯ ಹೇಗೆಲ್ಲ ಇರ್ತಿತ್ತು ಅನ್ನೋದು ಇಲ್ಲಿದೆ.

ಫಸ್ಟ್ ಲಿರಿಕಲ್ ವಿಡಿಯೋ

ರಣಬಾಲಿ ಚಿತ್ರದ ಒಂದಷ್ಟು ಪೋಸ್ಟರ್ ಬಂದಿವೆ. ಟೀಸರ್ ಕೂಡ ರಿಲೀಸ್ ಆಗಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮದುವೆ ಸಮಯದಲ್ಲಿಯೇ ಈ ಒಂದು ಟೀಸರ್ ರಿಲೀಸ್ ಆಗಿತ್ತು.

ರಿಯಲ್ ಜೋಡಿ ರೀಲ್ ರೋಮ್ಯಾನ್ಸ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಮುಂಚೆನೆ ಈ ಪ್ರಾಜೆಕ್ಟ್ ಒಪ್ಪಿದ್ದರು. ಆಗಲೇ ಈ ಜೋಡಿ ಲವ್ ಅಲ್ಲಿದೆ ಅನ್ನುವ ಗುಸು ಗುಸು ಜಾಸ್ತಿನೇ ಇತ್ತು.

ಮುಂದೆ ಇದು ನಿಜ ಅನ್ನೋದು ಗೊತ್ತಾಯಿತು. ಮದುವೆ ಕೂಡ ಅದ್ಧೂರಿ ಆಗಿಯೇ ನಡೀತು. ಇವರ ಮದುವೆ ಟೈಮ್‌ ಅಲ್ಲಿ ಈಗಾಗಲೇ ಹೇಳಿದಂತೆ ಟೀಸರ್ ಕೂಡ ರಿಲೀಸ್ ಆಗಿತ್ತು. ಆ ಟೀಸರ್ ನಿಜಕ್ಕೂ ಆ ಸಮಯಕ್ಕೆ ಸೂಕ್ತವಾಗಿತ್ತು.

Rashmika Mandanna Vijay Deverakonda Endayya Saami Song Release

ರಣಬಾಲಿ ಸಿನಿಮಾ ಯಾವಾಗ

(ಚಿತ್ರ ಕೃಪೆ: ರಣಬಾಲಿ ಸಿನಿಮಾ ಟೀಮ್‌)

ರಣಬಾಲಿ ಸಿನಿಮಾ ಯಾವಾಗ

ರಣಬಾಲಿ ಸಿನಿಮಾ ರಿಲೀಸ್ ಡೇಟ್ ಫೈನಲ್ ಆಗಿದೆ. ಇದರೊಟ್ಟಿಗೆ ಅನೌನ್ಸ್ ಕೂಡ ಆಗಿದೆ. ಅಕ್ಟೋಬರ್-16 ರಂದು ಈ ಚಿತ್ರ ತೆರೆ ಕಾಣುತ್ತಿದೆ.

ಬಹು ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತದೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲೆಯಾಳಂ ಹೀಗೆ ಈ ಚಿತ್ರ ಐದು ಭಾಷೆಯಲ್ಲಿ ರಿಲೀಸ್ ಆಗುತ್ತದೆ.

ಅದಕ್ಕೆ 5 ಭಾಷೆಯಲ್ಲಿ ಸಾಂಗ್

ಈ ಕಾರಣಕ್ಕೇನೆ ಈ ಚಿತ್ರದ “ಎಂದಯ್ಯಾ ಸಾಮಿ” ಲಿರಿಕಲ್ ಸಾಂಗ್ ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಹಾಡನ್ನ ರಾಮಜೋಗಯ್ಯ ಶಾಸ್ತ್ರಿ ಬರೆದಿದ್ದಾರೆ. ಅಜಯ್ ಹಾಗೂ ಅತುಲ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ.

ಗಾಯಕಿ ಶ್ವೇತಾ ಮೋಹನ್ ಹಾಗೂ ಅಜಯ್ ಗೊಗಾವಲೆ ಇದನ್ನ ಅಷ್ಟೆ ಅದ್ಭುತವಾಗಿಯೇ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಇದೀಗ ಎಲ್ಲರಿಗೂ ಇಷ್ಟ ಆಗುತ್ತಿದೆ. ಚಿತ್ರದ ಡೈರೆಕ್ಷನ್ ಅಂತ ಬಂದ್ರೆ, ರಾಹುಲ್ ಸಂಕೃತ್ಯನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed