Womens T20 World Cup: ಬಾಂಗ್ಲಾದೇಶವನ್ನು ಸೋಲಿಸಿದರೂ ಭಾರತಕ್ಕೆ ತಪ್ಪಿಲ್ಲ ಟೆನ್ಶನ್! ಹರ್ಮನ್ ಪಡೆಗೆ ಸೆಮಿಸ್ ಹಾದಿ ಕಠಿಣ, ಇಲ್ಲಿದೆ ಫುಲ್ ಡೀಟೇಲ್ಸ್ | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:

ಭಾರತ ತಂಡವು ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿತು. ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ, ಟೀಮ್ ಇಂಡಿಯಾ ಈಗ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಮತ್ತೆ ಚೇತರಿಸಿಕೊಂಡಿದೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಗೆಲುವಿನ ಬಳಿಕ , ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಟೀಮ್ ಇಂಡಿಯಾವನ್ನು ಸಂಕಷ್ಟದಲ್ಲಿ ಸಿಲುಕಿಸಿತು. ಈಗ, ಹರ್ಮನ್​ಪ್ರೀತ್ ಕೌರ್ ನೇತೃತ್ವದ ಭಾರತ ವನಿತೆಯರ ತಂಡವು ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಕಮ್​ಬ್ಯಾಕ್ ಮಾಡಿದೆ. ಬಾಂಗ್ಲಾದೇಶವನ್ನು ಸೋಲಿಸಿದರೂ ಭಾರತಕ್ಕೆ ಟೆನ್ಶನ್ ತಪ್ಪಿಲ್ಲ. ಹೌದು, ಭಾರತ ತಂಡಕ್ಕೆ ಸೆಮಿಫೈನಲ್ ತಲುಪುವ ಹಾದಿ ಇನ್ನೂ ಕಷ್ಟಕರವಾಗಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರ ಸೆಮಿಫೈನಲ್‌ಗೆ ನೇರವಾಗಿ ಎಂಟ್ರಿ ಕೊಡಲು ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು ಸೋಲಿಸಲೇಬೇಕಾಗುತ್ತದೆ. ಟೂರ್ನಿಯಲ್ಲಿ ಆಸ್ಟ್ರೇಲಿಯಾ ಬಲಿಷ್ಠ ಪ್ರದರ್ಶನ ನೀಡುತ್ತಿದೆ. ಟೀಮ್ ಇಂಡಿಯಾ ವಿರುದ್ಧ ಆಸೀಸ್ ಪಡೆ ಉತ್ತಮ ದಾಖಲೆಯನ್ನು ಹೊಂದಿದೆ.

ಪರಿಣಾಮವಾಗಿ, ಹರ್ಮನ್‌ಪ್ರೀತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋತರೆ, ದಕ್ಷಿಣ ಆಫ್ರಿಕಾ ತಂಡದ ಸೋಲಿಗಾಗಿ ಪ್ರಾರ್ಥಿಸಬೇಕಾಗುತ್ತದೆ.

ಸೆಮಿಫೈನಲ್ ತಲುಪುವುದು ಹೇಗೆ?

ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಲೀಗ್ ಹಂತದ ಪಂದ್ಯವನ್ನು ಆಡಲಿದೆ. ಪ್ರಸ್ತುತ ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿವೆ. ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋತರೆ ಮತ್ತು ಬಾಂಗ್ಲಾದೇಶ ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ, ಮೂರೂ ತಂಡಗಳು ತಲಾ 6 ಅಂಕಗಳನ್ನು ಹೊಂದಿರುತ್ತವೆ. ಈ ಸನ್ನಿವೇಶದಲ್ಲಿ, ಟೀಮ್ ಇಂಡಿಯಾ ಉತ್ತಮ ನಿವ್ವಳ ರನ್ ರೇಟ್​​ನಿಂದಾಗಿ ಅರ್ಹತೆ ಪಡೆಯಬಹುದು. ದಕ್ಷಿಣ ಆಫ್ರಿಕಾ ಇಂದು ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಬಹುತೇಕ ಖಚಿತವಾಗಿದೆ.

ಗ್ರೂಪ್ ‘ಎ’ ಪಾಯಿಂಟ್ ಪಟ್ಟಿ ಲೆಕ್ಕಚಾರ

ಗ್ರೂಪ್ ‘ಎ’ ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಆಡಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪ್ರಸ್ತುತ ಆಸೀಸ್ ಪಡೆ 8 ಅಂಕಗಳು ಮತ್ತು +4.724 ರನ್​ ರೇಟ್ ಅನ್ನು ಹೊಂದಿದೆ. ಭಾರತ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರಲ್ಲಿ ಗೆದ್ದರೆ, ಒಂದರಲ್ಲಿ ಸೋಲನ್ನು ಎದುರಿಸಿದೆ. ಇದರೊಂದಿಗೆ ಭಾರತ 6 ಅಂಕ ಮತ್ತು +2.268 ರನ್ ರೇಟ್​​ ಹೊಂದಿದ್ದು, ಗ್ರೂಪ್ ‘ಎ’ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮೂರರಲ್ಲಿ 2 ಗೆಲುವು, 1 ಸೋಲನ್ನು ಕಂಡಿದ್ದು, 4 ಅಂಕ ಮತ್ತು -0.546 ರನ್ ರೇಟ್ ಹೊಂದಿದೆ. ಇನ್ನೂ ಉಳಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಮೂರು ತಂಡಗಳು ಟೂರ್ನಿಯಿಂದ ಹೊರಗುಳಿದಿವೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Womens T20 World Cup: ಬಾಂಗ್ಲಾದೇಶವನ್ನು ಸೋಲಿಸಿದರೂ ಭಾರತಕ್ಕೆ ತಪ್ಪಿಲ್ಲ ಟೆನ್ಶನ್! ಹರ್ಮನ್ ಪಡೆಗೆ ಸೆಮಿಸ್ ಹಾದಿ ಕಠಿಣ, ಇಲ್ಲಿದೆ ಫುಲ್ ಡೀಟೇಲ್ಸ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed