Last Updated:
ಇಂದಿನಿಂದ ಆರಂಭವಾಗಲಿರುವ ಮಹಿಳಾ ಏಷ್ಯಾಕಪ್ನಲ್ಲಿ ಒಟ್ಟು ಎಂಟು ತಂಡಗಳು ಸ್ಪರ್ಧಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡವು ಪಾಕಿಸ್ತಾನ, ಥಾಯ್ಲೆಂಡ್ ಮತ್ತು ಹಾಂಗ್ ಕಾಂಗ್ ಜೊತೆಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದ್ದರೆ, ಬಾಂಗ್ಲಾದೇಶ, ಇಂಡೋನೇಷ್ಯಾ, ಶ್ರೀಲಂಕಾ ಮತ್ತು ಯುಎಇ ತಂಡಗಳು ಗ್ರೂಪ್ ಬಿ ನಲ್ಲಿ ಆಡಲಿವೆ.
ಮಹಿಳಾ ಏಷ್ಯಾ ಟಿ20 ಪಂದ್ಯಾವಳಿ (Women’s T20 Asia Cup) ಶುಕ್ರವಾರ ದುಬೈನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ (Thailand vs Hong Kong) ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಶ್ರೀಲಂಕಾ ಜೊತೆಗೆ ಭಾರತವು ಪ್ರಬಲ ಫೇವರಿಟ್ ಆಗಿ ಟೂರ್ನಿಗೆ ಪ್ರವೇಶಿಸುತ್ತಿದೆ. ಭಾರತ ಇದುವರೆಗೆ ಏಳು ಬಾರಿ ಏಷ್ಯಾ ಕಪ್ ಗೆದ್ದಿದೆ. ನಾಲ್ಕು ಬಾರಿ ಏಕದಿನ ಸ್ವರೂಪದಲ್ಲಿ ಮತ್ತು ಮೂರು ಬಾರಿ (2012, 2016, 2022) ಟಿ20 ಸ್ವರೂಪದಲ್ಲಿ. ಈ ಋತುವಿನಲ್ಲಿ ಆಡಿರುವ 16 ಟಿ20 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿರುವ ಭಾರತವು ಪ್ರಶಸ್ತಿಗೆ ಫೇವರಿಟ್ ಆಗಿ ಕಾಣುತ್ತದೆ.














