Wimbledon: ಜೊಕೊವಿಕ್, ಫೆಡೆರರ್ ಅಂತಹ ದಿಗ್ಗಜರು ಬೆವರು ಒರೆಸುವ ಈ ಟವೆಲ್ ತಯಾರಾಗೋದು ಭಾರತದ ಈ ಪುಟ್ಟ ನಗರದಲ್ಲಿ! ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ | ಕ್ರೀಡಾ ಸುದ್ದಿ | ACTPnews

ಜೊಕೊವಿಕ್-ಫೆಡೆರರ್


Last Updated:

ವಿಂಬಲ್ಡನ್ ಟೂರ್ನಿಯಲ್ಲಿ ಟೆನಿಸ್ ಆಟಗಾರರು ಕಳೆದ 16 ವರ್ಷಗಳಿಂದ ಭಾರತದಲ್ಲಿ ತಯಾರಿಸಿದ ಟವಲ್‌ಗಳನ್ನು ಬಳಸುತ್ತಿದ್ದಾರೆ. ಇದು ಭಾರತ ಮತ್ತು ವಿಂಬಲ್ಡನ್ ನಡುವಿನ ಉತ್ತಮ ಸಂಬಂಧಕ್ಕೆ ಸಾಕ್ಷಿಯಾಗಿದೆ.

ಜೊಕೊವಿಕ್-ಫೆಡೆರರ್
ಜೊಕೊವಿಕ್-ಫೆಡೆರರ್

ಈ ವರ್ಷ ವಿಂಬಲ್ಡನ್ (Wimbledon) ಅಂಗಳದಲ್ಲಿ ನೀವು ಭಾರತೀಯ ಟೆನಿಸ್ (Tennis) ಆಟಗಾರನನ್ನು ನೋಡದೇ ಇರಬಹುದು. ಆದರೆ ಪ್ರತಿ ಪಂದ್ಯದಲ್ಲಿ ಆಟಗಾರರು ಬಳಸುವ ಟವಲ್‌ಗಳಿಗೆ ಭಾರತದೊಂದಿಗೆ ಸಂಬಂಧವಿದೆ. ವಿಂಬಲ್ಡನ್ ಟೂರ್ನಿಯಲ್ಲಿ ಟೆನಿಸ್ ಆಟಗಾರರು ಕಳೆದ 16 ವರ್ಷಗಳಿಂದ ಭಾರತದಲ್ಲಿ ತಯಾರಿಸಿದ ಟವಲ್‌ಗಳನ್ನು ಬಳಸುತ್ತಿದ್ದಾರೆ. ಇದು ಭಾರತ (India) ಮತ್ತು ವಿಂಬಲ್ಡನ್ ನಡುವಿನ ಉತ್ತಮ ಸಂಬಂಧಕ್ಕೆ ಸಾಕ್ಷಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಟೆನಿಸ್ ತಾರೆಗಳಾದ ನೊವಾಕ್ ಜೊಕೊವಿಕ್, ನವೋಮಿ ಒಸಾಕಾ ಮತ್ತು ಸೆರೆನಾ ವಿಲಿಯಮ್ಸ್ ಸೇರಿದಂತೆ ಆನೇಕ ಆಟಗಾರರು ಬಳಸುವ ವಿಂಬಲ್ಡನ್ ಚಾಂಪಿಯನ್‌ಶಿಪ್ ಟವಲ್‌ಗಳನ್ನು 2009 ರಿಂದ ಅಂದರೆ, ಕಳೆದ 16 ವರ್ಷಗಳಿಂದ ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗುತ್ತಿದೆ. ಇದು ಭಾರತೀಯ ಜವಳಿ ಉದ್ಯಮದ ಗುಣಮಟ್ಟ, ತಂತ್ರಜ್ಞಾನ ಮತ್ತು ಜಾಗತಿಕ ಮನ್ನಣೆಗೆ ಉತ್ತಮ ಉದಾಹರಣೆಯಾಗಿದೆ.

ಟವಲ್ ತಯಾರಿಕೆ ಎಲ್ಲಿಂದ ಶುರು?

ಈ ಕಥೆ 1850 ರಲ್ಲಿ ಮ್ಯಾಂಚೆಸ್ಟರ್‌ನ ಕ್ರಿಸ್ಟಿ ಕಾರ್ಖಾನೆ ಸ್ನಾನದ ಟವೆಲ್‌ಗಳನ್ನು ತಯಾರಿಸಲು ಪ್ರಾರಂಭಿಸಿದಾಗಿನಿಂದ ಶುರುವಾಯಿತು. ಮೊದಲ ಟವಲ್ ಅನ್ನು ಇಂಗ್ಲೆಂಡ್ ರಾಣಿಗಾಗಿ ತಯಾರಿಸಲಾಯಿತು. ವರ್ಷಗಳ ಕಾಲ ಈ ಟವಲ್‌ಗಳನ್ನು ಇಂಗ್ಲೆಂಡ್‌ನಲ್ಲಿ ತಯಾರಿಸಲಾಗುತ್ತಿತ್ತು. ವೆಲ್ಸ್ಪನ್ ವರ್ಲ್ಡ್ ಭಾರತದ ಅತಿದೊಡ್ಡ ವ್ಯಾಪಾರ ಗುಂಪುಗಳಲ್ಲಿ ಒಂದು. ಇದು ಬೆಡ್‌ಶೀಟ್‌ಗಳಿಂದ ಹಿಡಿದು ನೀರಿನ ಟ್ಯಾಂಕ್‌ಗಳವರೆಗೆ ಎಲ್ಲವನ್ನೂ ರಫ್ತು ಮಾಡುತ್ತದೆ. 2006 ರಲ್ಲಿ ವೆಲ್ಸ್ಪನ್ ಬ್ರಿಟಿಷ್ ಕಂಪನಿ ಕ್ರಿಸ್ಟಿಯನ್ನು ಖರೀದಿಸಿತು.

ವಾಪಿಯಿಂದ ವಿಂಬಲ್ಡನ್‌ಗೆ ಪ್ರಯಾಣ

ಬ್ರಿಟಿಷ್ ಕಂಪನಿ ಕ್ರಿಸ್ಟಿ 1987 ರಿಂದ ವಿಂಬಲ್ಡನ್ ಟವಲ್‌ಗಳನ್ನು ತಯಾರಿಸುತ್ತಿತ್ತು. ವೆಲ್ಸ್ಪನ್ ಈ ಕಂಪನಿಯನ್ನು ಖರೀದಿಸಿದ ಬಳಿಕ 2010ರಲ್ಲಿ ಉತ್ಪಾದನೆಯನ್ನು ಗುಜರಾತ್‌ನ ವಾಪಿಗೆ ಸ್ಥಳಾಂತರಿಸಲಾಯಿತು. ಈಗ ಕಳೆದ 16 ವರ್ಷಗಳಿಂದ ಈ ಟವಲ್‌ಗಳನ್ನು ವಾಪಿಯಲ್ಲಿರುವ ವೆಲ್ಸ್ಪನ್ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿದೆ. ವಾಪಿಯ ಕಾರ್ಖಾನೆಯು ವಿಶೇಷ ತಂತ್ರದಿಂದ ಅದ್ಭುತ ಟವಲ್‌ಗಳನ್ನು ತಯಾರಿಸುತ್ತಿದೆ. ಇದು ಭಾರತದ ಜವಳಿ ಕರಕುಶಲತೆಯನ್ನು ಪ್ರದರ್ಶಿಸುತ್ತಿದೆ.

ವಿಂಬಲ್ಡನ್ ಟವೆಲ್ ಬೆಲೆ-ತಯಾರಿ ಸಮಯ

ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರು ಆಟ್ರೋಗ್ರಾಫ್ ಹಾಕಿದ ಟವಲ್ ಅನ್ನು ವೆಲ್ಸ್ಪನ್ ಕಂಪನಿಯು ಸಂರಕ್ಷಿಸಿಟ್ಟಿದೆ. ಕಂಪನಿಯು ಅಮೆರಿಕ, ಈಜಿಪ್ಟ್ ಮತ್ತು ಇಸ್ರೇಲ್‌ನಂತಹ ದೇಶಗಳಿಂದ ವಿವಿಧ ಬಗೆಯ ಹತ್ತಿಯನ್ನು ಪಡೆಯುತ್ತದೆ. ಅವುಗಳಿಂದ ವಿಭಿನ್ನ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತದೆ ಎಂದು ಉತ್ಪಾದನಾ ಘಟಕದ ಜನರಲ್ ಮ್ಯಾನೇಜರ್ ಮಿತೇಶ್ ಮೋದಿ ಹೇಳುತ್ತಾರೆ.

ವಿಂಬಲ್ಡನ್ ಟವಲ್ ತಯಾರಿಕೆಯ ಬಗ್ಗೆ ವಾಪಿ ಉತ್ಪಾದನಾ ಘಟಕದ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಮೇಜರ್ (ನಿವೃತ್ತ) ರೋಷನ್ ಹೇಳಿರುವ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ 1800 ರಿಂದ 2000 ರೂಪಾಯಿ ಬೆಲೆಯ ವಿಂಬಲ್ಡನ್ ಟವಲ್‌ಗಳನ್ನು ಟೂರ್ನಿಗೆ ಕೆಲವು ತಿಂಗಳುಗಳ ಮೊದಲು ತಯಾರಿಸಲಾಗುತ್ತದೆ. ಪ್ರತಿಯೊಂದು ಟವಲ್ ತಯಾರಿಸಲು 7 ದಿನಗಳು ಬೇಕಾಗುತ್ತದೆ.

ಕ್ಲಾಸಿಕ್ ಬಣ್ಣಗಳು

ಪಂದ್ಯಗಳ ಸಮಯದಲ್ಲಿ ಆಟಗಾರರು ಬೆವರು ಒರೆಸಲು ಈ ಟವಲ್‌ಗಳನ್ನು ಬಳಸುತ್ತಾರೆ. ಪ್ರತಿ ವರ್ಷ ವಿಂಬಲ್ಡನ್ ತನ್ನ ಕ್ಲಾಸಿಕ್ ಹಸಿರು-ನೇರಳೆ ಬಣ್ಣಕ್ಕೆ ಹೆಚ್ಚುವರಿಯಾಗಿ ಆ ಸಮಯಕ್ಕೆ ಸರಿಹೊಂದುವ ವಿಷಯಕ್ಕೆ ಸಂಬಂಧಿಸಿದ ಟವಲ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಟವಲ್‌ಗಳು ಮೃದುವಾಗಿರುತ್ತವೆ ಮತ್ತು ಬೇಗ ಒಣಗುತ್ತವೆ. ಪ್ರತಿ ಆಟಗಾರನಿಗೆ ಕೋರ್ಟ್‌ನಲ್ಲಿ ಎರಡು ಟವಲ್‌ಗಳನ್ನು ನೀಡಲಾಗುತ್ತದೆ. ಆದರೆ ನೊವಾಕ್ ಜೊಕೊವಿಕ್ ಮತ್ತು ಇಗಾ ಸ್ವಿಯೆಟೆಕ್‌ನಂತಹ ಅನೇಕ ಆಟಗಾರರು ಟವಲ್ ಅನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಅಷ್ಟರ ಮಟ್ಟಿಗೆ, ಭಾರತದಲ್ಲಿ ತಯಾರಾದ ಟವೆಲ್‌ಗಳು ಜಾಗತಿಕ ವೇದಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿವೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Wimbledon: ಜೊಕೊವಿಕ್, ಫೆಡೆರರ್ ಅಂತಹ ದಿಗ್ಗಜರು ಬೆವರು ಒರೆಸುವ ಈ ಟವೆಲ್ ತಯಾರಾಗೋದು ಭಾರತದ ಈ ಪುಟ್ಟ ನಗರದಲ್ಲಿ! ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed