R Madhavan: ಜಿಡಿಎನ್ ಸಿನಿಮಾ ಟ್ರೈಲರ್ ಔಟ್, ಬಯೋಪಿಕ್​​ನಲ್ಲಿ ನಟ ಮಾಧವನ್ | | ACTPnews

ಮಾಧವನ್


Last Updated:

GDN Trailer: ಆರ್ ಮಾಧವನ್ ಅಭಿನಯಿಸಿದ ಜಿಡಿಎನ್ ಟ್ರೈಲರ್ ರಿಲೀಸ್ ಆಗಿದೆ. ಹೇಗಿದೆ ಈ ಟ್ರೈಲರ್? ಬಯೋಪಿಕ್​​ನಲ್ಲಿ ಮಿಂಚಿದ ಮ್ಯಾಡಿ.

ಮಾಧವನ್
ಮಾಧವನ್

ಆರ್. ಮಾಧವನ್ (Madhavan) ಪ್ರಮುಖ ಪಾತ್ರದಲ್ಲಿ ನಟಿಸಿರುವ ಜಿಡಿಎನ್ ಸಿನಿಮಾದ (GDN Movie) ಟ್ರೈಲರ್ ರಿಲೀಸ್ ಆಗಿದೆ. ಪ್ರಸಿದ್ಧ ಸಂಶೋಧಕ ಜಿಡಿ ನಾಯ್ಡು ಅವರ ಜೀವನವನ್ನು ಆಧರಿಸಿದ ಮುಂಬರುವ ಬಯೋಪಿಕ್ ಟ್ರೈಲರ್ ರಿಲೀಸ್ ಆಗಿದೆ. ಇದೊಂದು ಪರಿಯಾಡಿಕಲ್ ಡ್ರಾಮಾ ಮೂವಿ. ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶಿಸಿದ ಈ ಚಿತ್ರದ ಟ್ರೇಲರ್ ಈಗ ರಿಲೀಸ್ ಆಗಿದೆ.

ಜಿಡಿಎನ್ ಟ್ರೇಲರ್

ಸುಮಾರು ಮೂರು ನಿಮಿಷಗಳ ಟ್ರೇಲರ್ ಜಿ.ಡಿ. ನಾಯ್ಡು ಅವರ ಅದ್ಭುತ ಪ್ರಯಾಣವನ್ನು ಚಿತ್ರಿಸುತ್ತದೆ. ಅವರ ಜೀವನ ಮತ್ತು ವೃತ್ತಿಜೀವನದುದ್ದಕ್ಕೂ ಅವರು ಎದುರಿಸಿದ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಈ ಚಿತ್ರವು, ಒಬ್ಬ ಸಂಶೋಧಕ, ಉದ್ಯಮಿ ಮತ್ತು ದಾರ್ಶನಿಕನಾಗಿ ಅವರ ಬೆಳವಣಿಗೆಯನ್ನು ತೋರಿಸೋದಷ್ಟೇ ಅಲ್ಲದೆ ಅವರು ಎದುರಿಸಿದ ಅಡೆತಡೆಗಳ ಕಡೆ ಕೂಡಾ ಬೆಳಕು ಚೆಲ್ಲುತ್ತದೆ.

ಟ್ರೇಲರ್ ಅವರ ಬಾಲ್ಯದ ಇಣುಕು ನೋಟಗಳನ್ನು ನೀಡುತ್ತದೆ. ಹಲವಾರು ಹಿನ್ನಡೆಗಳ ಹೊರತಾಗಿಯೂ ಅವರು ಹೊಸತನವನ್ನು ಫಾಲೋ ಮಾಡುವಾಗ ಅವರ ವಿಧಾನ ಮತ್ತು ದೃಢಸಂಕಲ್ಪವನ್ನು ಇದರಲ್ಲಿ ತೋರಿಸಲಾಗಿದೆ.

ಆರ್. ಮಾಧವನ್ ಅವರಲ್ಲದೆ , ಜಿಡಿಎನ್ ನಲ್ಲಿ ಸತ್ಯರಾಜ್, ಪ್ರಿಯಾಮಣಿ, ಜಯರಾಮ್, ದುಷಾರ ವಿಜಯನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಗೋವಿಂದ ವಸಂತ ಸಂಯೋಜಿಸಿದ್ದಾರೆ. ಅರವಿಂದ್ ಕಮಲನಾಥನ್ ಛಾಯಾಗ್ರಾಹಕರಾಗಿದ್ದಾರೆ. ಬಿಜಿತ್ ಬಾಲಾ ಸಂಕಲನವನ್ನು ನಿರ್ವಹಿಸಿದ್ದಾರೆ. ಟ್ರೇಲರ್ ಅನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಿಡುಗಡೆ ಮಾಡಲಾಯಿತು.

ಚಿತ್ರಮಂದಿರಗಳಲ್ಲಿ ಪ್ರಸಾರವಾದ ನಂತರ, GDN ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುವ ನಿರೀಕ್ಷೆಯಿದೆ. ಚಿತ್ರತಂಡ ಇನ್ನೂ ಅಧಿಕೃತ OTT ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಚಿತ್ರಕಥೆಯನ್ನು ಕೃಷ್ಣಕುಮಾರ್ ರಾಮಕುಮಾರ್ ಮತ್ತು ಆರ್. ಮಾಧವನ್ ಬರೆದಿದ್ದಾರೆ. ಆದರೆ ಈ ಚಿತ್ರವನ್ನು ಮಾಧವನ್ ಮತ್ತು ಅವರ ಪತ್ನಿ ಸರಿತಾ ಸ್ಥಾಪಿಸಿದ ಟ್ರೈಕಲರ್ ಫಿಲ್ಮ್ಸ್ ಸಹಯೋಗದೊಂದಿಗೆ ವರ್ಗೀಸ್ ಮೂಲನ್ ತಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಜಿಡಿ ನಾಯ್ಡು ಎಂದೇ ಜನಪ್ರಿಯರಾಗಿರುವ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು ಅವರು ಭಾರತೀಯ ಸಂಶೋಧಕ, ಎಂಜಿನಿಯರ್‌ ಮತ್ತು ಇಂಡಸ್ಟ್ರಿಯಾಲಿಸ್ಟ್.

ಆರ್. ಮಾಧವನ್ ಕೊನೆಯ ಬಾರಿಗೆ ರಣವೀರ್ ಸಿಂಗ್ ಅವರ ಧುರಂಧರ್ ಮತ್ತು ಅದರ ನಂತರದ ಚಿತ್ರ ಧುರಂಧರ್: ದಿ ರಿವೆಂಜ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು . ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರಗಳಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಗೌರವ್ ಗೆರಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed