Virat Kohli: ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ; 230 ಕೋಟಿಯೊಂದಿಗೆ ಕಿಂಗ್ ಕೊಹ್ಲಿ ನಂ.1 | ಕ್ರೀಡಾ ಸುದ್ದಿ | ACTPnews

ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)


Last Updated:

ಫೆನಾಟಿಕ್ ಸ್ಪೋರ್ಟ್ಸ್ ಮತ್ತು ಹುರುನ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡುವವರಾಗಿದ್ದು, 230 ಕೋಟಿ ರೂಪಾಯಿಗಳೊಂದಿಗೆ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೆಕೆಆರ್ 19,200 ಕೋಟಿ ರೂಪಾಯಿಗಳೊಂದಿಗೆ ಮೋಸ್ಟ್ ವ್ಯಾಲ್ಯೂಬಲ್ ಫ್ರಾಂಚೈಸಿ ಆಗಿ ಹೊರಹೊಮ್ಮಿದೆ. ಸದ್ಯ ಎಲ್ಲಾ ತಂಡಗಳನ್ನು ಕಳುಹಿಸಿದರೆ ಒಟ್ಟು ಮೌಲ್ಯ ಸುಮಾರು 18 ಬಿಲಿಯನ್ ಡಾಲರ್ ಅಂದರೆ 1.63 ಲಕ್ಷ ಕೋಟಿ ಹೊಂದಿದೆ.

ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)

ಐಪಿಎಲ್ ಆಟದಲ್ಲಿ (IPL 2026) ಮಾತ್ರವಲ್ಲ, ಹಣದ ಮಳೆ ಸುರಿಸುವಲ್ಲಿಯೂ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಅನ್ವಯ, ಐಪಿಎಲ್ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತ ಗಳಿಸಿದ ಆಟಗಾರರಾಗಿ ಟೀಂ ಇಂಡಿಯಾ (Team India) ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli) ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ.

ಫೆನಾಟಿಕ್ ಸ್ಪೋರ್ಟ್ಸ್ ಮತ್ತು ಹುರುನ್ ಸಂಯುಕ್ತವಾಗಿ ನೀಡಿರುವ ವರದಿಯ ಪ್ರಕಾರ, ಮೋಸ್ಟ್ ವ್ಯಾಲ್ಯೂಬಲ್ ಸ್ಪೋರ್ಟ್ಸ್ ಟೀಂ 2026ರ ವರದಿಯಲ್ಲಿ ಹಲವು ಆಸಕ್ತಿಯುತ ವಿಚಾರಗಳು ಉಲ್ಲೇಖಿಸಲಾಗಿದೆ. 2008ರಲ್ಲಿ ಲೀಗ್ ಆರಂಭವಾದ ಸಂದರ್ಭದಿಂದ ವಿರಾಟ್ ಕೊಹ್ಲಿ ಒಂದೇ ಫ್ರಾಂಚೈಸಿ ಪರ ಆಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಲೇ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ.

ಹಣದ ವಿಚಾರದಲ್ಲಿ ರೋಹಿತ್, ಧೋನಿ ಹಿಂದಿಕ್ಕಿದ ಕೊಹ್ಲಿ!

ವರದಿಯ ಅನ್ವಯ, ವಿರಾಟ್ ಕೊಹ್ಲಿ ಐಪಿಎಲ್ ಮೂಲಕ ಇದುವರೆಗೂ ಏಕಾಏಕಿ 230 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರಂತೆ. ಆ ಮೂಲಕ ಅಗ್ರಸ್ಥಾನದಲ್ಲಿದ್ದು, ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ, ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಟ್ರೋಫಿಗಳನ್ನು ಗೆದ್ದುಕೊಟ್ಟ ರೋಹಿತ್ ಶರ್ಮಾ 227.2 ಕೋಟಿ ಆದಾಯ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಧೋನಿ 200 ಕೋಟಿ ರೂಪಾಯಿಗಳೊಂದಿಗೆ ಐಪಿಎಲ್ ಸ್ಯಾಲರಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

1.63 ಲಕ್ಷ ಕೋಟಿಯ ಸಾಮ್ರಾಜ್ಯ!

ಆಟಗಾರರ ಸಂಪಾದನೆ ಮಾತ್ರ ಐಪಿಎಲ್ ತಂಡದಲ್ಲಿರುವ 10 ಫ್ರಾಂಚೈಸಿಗಳ ಮೊತ್ತದ ಮೌಲ್ಯ ಊಹೆಗೂ ನಿಲುಕದಂತೆ ಹೆಚ್ಚಾಗಿದೆ. ಸದ್ಯ ಎಲ್ಲಾ ತಂಡಗಳ ಮೌಲ್ಯ 1.63 ಲಕ್ಷ ಕೋಟಿ ರೂಪಾಯಿ (ಸುಮಾರು 18 ಬಿಲಿಯನ್ ಡಾಲರ್) ಎಂದು ವರದಿಯಲ್ಲಿ ಹೇಳಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಾಲೀಕತ್ವದ ಕೆಕೆಆರ್ ತಂಡ ಅತ್ಯಂತ ಹೆಚ್ಚು ಮೌಲ್ಯದ ತಂಡವಾಗಿ ನಂಬರ್ 01 ಸ್ಥಾನವನ್ನು ಪಡೆದುಕೊಂಡಿದೆ. ಕೆಕೆಆರ್ ತಂಡದ ಸದ್ಯದ ಮಾರುಕಟ್ಟೆ ಮೌಲ್ಯ ಬರೋಬ್ಬರಿ 19,200 ಕೋಟಿ ರೂಪಾಯಿ ಎಂದು ಹೇಳಿದೆ. ಗ್ಲೋಬಲ್ ಲೀಗ್ಸ್​ನಲ್ಲಿ ಕೆಕೆಆರ್ ಬ್ರ್ಯಾಂಡ್ ವಿಸ್ತರಣೆ, ಭಾರೀ ಫ್ಯಾನ್ ಬೆಸ್​ ಇರೋದು ಇದಕ್ಕೆ ಕಾರಣವಂತೆ.

ಎರಡನೇ ಸ್ಥಾನದಲ್ಲಿ ಮುಂಬೈ, ಚೆನ್ನೈ

ಐಪಿಎಲ್ ಅತ್ಯಂತ ಯಶಸ್ವಿ ತಂಡಗಳಾಗಿ ಖ್ಯಾತಿ ಪಡೆದಿರುವ ಅಂಬಾನಿ ಗ್ರೂಪ್‌ನ ಮುಂಬೈ ಇಂಡಿಯನ್ಸ್, ಎನ್​ ಶ್ರೀನಿವಾಸನ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 18,400 ಕೋಟಿ ರೂಪಾಯಿ ಬ್ರ್ಯಾಂಡ್ ಮೌಲ್ಯದೊಂದಿಗೆ ಸಂಯುಕ್ತವಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Bengaluru: ವಾಹನ ಸವಾರರಿಗೆ ಬಿಗ್ ಅಲರ್ಟ್​! 1 ಗಂಟೆ ಪ್ರಯಾಣದ ಸಮಯ 2 ಗಂಟೆ ಆಗಲಿದೆ, ಎಲ್ಲಿ? ಏಕೆ?

ಹುರುನ್ ಇಂಡಿಯಾದ ಸಂಸ್ಥಾಪಕ ಅನಸ್ ರೆಹಮಾನ್ ಜುನೈದ್ ಅವರ ಪ್ರಕಾರ, ಭಾರತದ ಕ್ರೀಡಾ ರಂಗದಲ್ಲಿ ಹೂಡಿಕೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದೇ ಟ್ರೆಂಡ್ ಮುಂದುವರಿದರೆ, ಮುಂಬರುವ 2032ರ ವೇಳೆಗೆ ಐಪಿಎಲ್ ತಂಡದ ಸರಾಸರಿ ಮೌಲ್ಯ ಏಕಾಏಕಿ 15 ಬಿಲಿಯನ್ ಡಾಲರ್ ಅಂದರೆ ಸುಮಾರು 1.25 ಲಕ್ಷ ಕೋಟಿ ವರೆಗೂ ಇದೇ ಎಂದು ಅಂದಾಜು ಮಾಡಿದ್ದಾರೆ. ಅಂದರೆ ಭವಿಷ್ಯದಲ್ಲಿ ಅಮೆರಿಕಗೆ ಸೇರಿದ ಎನ್ಎಫ್ಎಲ್​ ತಂಡಗಳೊಂದಿಗೆ ನಮ್ಮ ಐಪಿಎಲ್ ಫ್ರಾಂಚೈಸಿ ಸ್ಪರ್ಧೆ ಮಾಡಲಿವೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports