Dilip Kumar-Madhubala Love Story: ದಿಲೀಪ್ ಕುಮಾರ್-ಮಧುಬಾಲಾ ಪ್ರೇಮಕಥೆ! 9 ವರ್ಷಗಳ ಲವ್ ಸ್ಟೋರಿ ದುರಂತದಲ್ಲಿ ಅಂತ್ಯವಾಗಿದ್ದೇಕೆ? | | ACTPnews

ದಿಲೀಪ್ ಕುಮಾರ್-ಮಧುಬಾಲಾ


Last Updated:

Dilip Kumar-Madhubala Love Story:ದಿಲೀಪ್ ಕುಮಾರ್ ಮೂಲ ಹೆಸರು ಮುಹಮ್ಮದ್ ಯೂಸುಫ್ ಖಾನ್. ಇಬ್ಬರೂ ಒಂದೇ ಸಮುದಾಯದವರು. ಹೀಗಾಗಿ ಕುಟುಂಬಗಳು ವಿರೋಧಿಸಲಿಲ್ಲ. ನಿಶ್ಚಿತಾರ್ಥವೂ ಆಯಿತು. ಯಶಸ್ಸಿನ ಉತ್ತುಂಗದಲ್ಲಿದ್ದ ಇಬ್ಬರೂ ಪರಸ್ಪರರ ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ಪ್ರೀತಿ ಎಷ್ಟು ನಯವಾಗಿ ಆರಂಭವಾಯಿತೋ, ಅಷ್ಟೇ ನಿಧಾನವಾಗಿ ಬಿರುಕು ಬಿಟ್ಟಿತು.

ದಿಲೀಪ್ ಕುಮಾರ್-ಮಧುಬಾಲಾ
ದಿಲೀಪ್ ಕುಮಾರ್-ಮಧುಬಾಲಾ

ಬಾಲಿವುಡ್‌ನ ದುರಂತ ನಾಯಕ (Bollywood’s Tragedy King) ದಿಲೀಪ್ ಕುಮಾರ್ (Dilip Kumar) ಅವರ ಜೀವನದಲ್ಲಿ ಹಲವು ಮುಖಗಳಿದ್ದವು. 44ನೇ ವಯಸ್ಸಿನಲ್ಲಿ ಅವರು ಮದುವೆಯಾಗುವವರೆಗೂ ಅವರ ಹೃದಯ ಹೂವಿನಿಂದ ಹೂವಿಗೆ ಹಾರುವ ದುಂಬಿಯಂತೆ ತಿರುಗಿತ್ತು. ಆದರೆ ಆ ಎಲ್ಲ ಹಾರಾಟಗಳ ನಡುವೆಯೂ ಒಂದು ಹೆಸರು ಮಾತ್ರ ಅವರ ಜೀವನದಲ್ಲಿ ಶಾಶ್ವತವಾಗಿ ಉಳಿಯಿತು. ಆ ಹೆಸರೇ ಮಧುಬಾಲಾ (Madhubala)!

9 ವರ್ಷಗಳ ಪ್ರೇಮಕಥೆ!

ಮಧುಬಾಲಾ ಅವರ ಮೂಲ ಹೆಸರು ಮುಮ್ತಾಜ್ ಜೆಹಾನ್ ಬೇಗಂ ದೆಹ್ಲಾವಿ. ಕೇಲವ ಹದಿನಾಲ್ಕನೇ ವಯಸ್ಸಿನಲ್ಲೇ ತೆರೆಗೆ ಬಂದಿದ್ದ ಆ ಮುದ್ದು ಮುಖದ ಹುಡುಗಿ, 50 – 60ರ ದಶಕದಲ್ಲಿ ಬಾಲಿವುಡ್‌ನ ಅತ್ಯಂತ ಸುಂದರ ನಟಿ ಎಂದು ಪರಿಗಣಿಸಲ್ಪಟ್ಟಿದ್ದಳು. ದಿಲೀಪ್ ಕುಮಾರ್ ಹಾಗೂ ಮಧುಬಾಲಾ ಜೋಡಿ ಫೇಮಸ್ ಆಗಿತ್ತು. 1951ರಲ್ಲಿ ಬಂದ ‘ತರಾನಾ’ ಅವರಿಬ್ಬರ ಮೊದಲ ಜೋಡಿ ಚಿತ್ರ. ಆ ಚಿತ್ರೀಕರಣದ ವೇಳೆಯೇ ಪ್ರೀತಿ ಮೊಳೆತಿತ್ತು. ನಂತರ ಸಂಗ್ದಿಲ್, ಅಮರ್ ಮತ್ತು ಅಂತಿಮವಾಗಿ ಮುಘಲ್-ಎ-ಆಜಂ ಸೇರಿದಂತೆ ಅವರಿಬ್ಬರದ್ದು ಒಟ್ಟು ಒಂಬತ್ತು ವರ್ಷಗಳ ಪ್ರೇಮಕಥೆ.

ಇಬ್ಬರೂ ಒಂದೇ ಸಮುದಾಯದ ಪ್ರೇಮಿಗಳು

ದಿಲೀಪ್ ಕುಮಾರ್ ಮೂಲ ಹೆಸರು ಮುಹಮ್ಮದ್ ಯೂಸುಫ್ ಖಾನ್. ಇಬ್ಬರೂ ಒಂದೇ ಸಮುದಾಯದವರು. ಹೀಗಾಗಿ ಕುಟುಂಬಗಳು ವಿರೋಧಿಸಲಿಲ್ಲ. ನಿಶ್ಚಿತಾರ್ಥವೂ ಆಯಿತು. ಯಶಸ್ಸಿನ ಉತ್ತುಂಗದಲ್ಲಿದ್ದ ಇಬ್ಬರೂ ಪರಸ್ಪರರ ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ಪ್ರೀತಿ ಎಷ್ಟು ನಯವಾಗಿ ಆರಂಭವಾಯಿತೋ, ಅಷ್ಟೇ ನಿಧಾನವಾಗಿ ಬಿರುಕು ಬಿಟ್ಟಿತು.

ನಯಾ ದೌರ್ ಚಿತ್ರೀಕರಣದ ವೇಳೆ ಅವಾಂತರ

ನಯಾ ದೌರ್ ಚಿತ್ರೀಕರಣದ ಸಮಯದಲ್ಲಿ ಗ್ವಾಲಿಯರ್ ಬಳಿ ಗಲಾಟೆ ನಡೆದಿತ್ತು. ಮಧುಬಾಲಾ ಅವರ ತಂದೆ ಲೊಕೇಷನ್ ಬದಲಾಯಿಸಬೇಕೆಂದು ಕೇಳಿದರು. ಇದಕ್ಕೆ ನಿರ್ದೇಶಕ ಬಿ.ಆರ್. ಚೋಪ್ರಾ ಒಪ್ಪಲಿಲ್ಲ. ದಿಲೀಪ್ ಮಧ್ಯಸ್ಥಿಕೆ ವಹಿಸಿದರು. ಆದರೆ ವಿಷಯ ನ್ಯಾಯಾಲಯದವರೆಗೆ ಹೋಯಿತು. ದಿಲೀಪ್ ಕ್ಷಮೆ ಯಾಚಿಸಲು ನಿರಾಕರಿಸಿದರು. ಆ ಸಣ್ಣ ಅಹಂಕಾರದಿಂದ ಬಿರುಕು ಪ್ರಪಾತವಾಯಿತು.

ಪರದೆ ಮೇಲೆ ಪ್ರೀತಿ, ಪರದೆ ಹಿಂದೆ ದೂರ ದೂರ!

ಮುಘಲ್-ಎ-ಆಜಂನ ಚುಂಬನ ದೃಶ್ಯ ಚಿತ್ರೀಕರಿಸುವ ಹೊತ್ತಿಗೆ ಅವರಿಬ್ಬರ ನಡುವೆ ಮಾತುಕತೆಯೇ ನಿಂತಿತ್ತು ಎಂದು ದಿಲೀಪ್ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ಪರದೆಯ ಮೇಲೆ ಅನಾರ್ಕಲಿ -ಸಲೀಂನ ಪ್ರೀತಿ ಉರಿಯುತ್ತಿತ್ತು. ಆದರೆ ಪರದೆಯ ಹಿಂದೆ ಇಬ್ಬರೂ ಮೌನವಾಗಿದ್ದರು. ಬಳಿಕ ಇಬ್ಬರೂ ದೂರವಾದರು.

ಕಿಶೋರ್ ಕುಮಾರ್‌ನನ್ನು ಮದುವೆಯಾದ ಮಧುಬಾಲಾ

ದಿಲೀಪ್ ಸೈರಾ ಬಾನುವನ್ನು ಮದುವೆಯಾದಾಗ ಮಧುಬಾಲಾ ನೋವಿನಿಂದ ಕುಸಿದಳು. ಆ ನೋವಿನಿಂದ ಹೊರಬರಲು, ತಾನೂ ಬಯಸಿದವರನ್ನು ಮದುವೆಯಾಗಬಲ್ಲೆ ಎಂದು ತೋರಿಸಲು ಕಿಶೋರ್ ಕುಮಾರ್ ಅವರನ್ನು ಮದುವೆಯಾದಳು. ಕಿಶೋರ್ ಇಸ್ಲಾಂಗೆ ಮತಾಂತರಗೊಂಡಿದ್ದರು. ಆದರೆ ಈ ಸಂತೋಷ ಬಹಳ ದಿನ ನಿಲ್ಲಲಿಲ್ಲ. ಮಧುಬಾಲಾ ಹೃದಯದಲ್ಲಿ ರಂಧ್ರವಿದೆ ಎಂದು ತಿಳಿಯಿತು. ವೈದ್ಯರು ಎರಡು ವರ್ಷ ಮಾತ್ರ ಜೀವನ ಎಂದರು. ಕಿಶೋರ್ ಅವಳನ್ನು ತವರಿಗೆ ಕಳುಹಿಸಿದರು.

ಕೇವಲ 36 ವರ್ಷಕ್ಕೆ ಕಣ್ಣು ಮುಚ್ಚಿದ ಮಧುಬಾಲಾ

1969ರ ಫೆಬ್ರವರಿ 23ರಂದು, ಕೇವಲ ಮೂವತ್ತಾರನೇ ವಯಸ್ಸಿನಲ್ಲಿ ಮಧುಬಾಲಾ ಕಣ್ಣು ಮುಚ್ಚಿದಳು. ವ್ಯಾಲೆಂಟೈನ್ಸ್ ಡೇನಂದು ಹುಟ್ಟಿದ್ದ ಹುಡುಗಿ, ತನ್ನ ಕೊನೆಯ ದಿನಗಳಲ್ಲಿ ಜ್ಯುವೆಲ್ ಥೀಫ್ ಎಂಬ ಸಿನಿಮಾದ “ರುಲಾಕೆ ಗಯಾ ಸಪ್ನಾ ಮೇರಾ” ಎಂಬ ಹಾಡನ್ನು ಕೇಳುತ್ತಿದ್ದಳಂತೆ. ಇದರ ಅರ್ಥ ಕಣ್ಣೀರು ಸುರಿಸಿದ ಕನಸುಗಳು!

ದುರಂತ ಕಥೆಯಾಯ್ತು ದಿಲೀಪ್  – ಮಧುಬಾಲಾ ಪ್ರೇಮಕಥೆ

ಅವರಿಬ್ಬರೂ ಹಠ ಮತ್ತು ಅಹಂಕಾರವನ್ನು ಬಿಟ್ಟಿದ್ದರೆ, ಆ ಪ್ರೇಮಕಥೆ ಇತಿಹಾಸದಲ್ಲಿ ಅಮರವಾಗುತ್ತಿತ್ತು. ಆದರೆ ಪ್ರೀತಿ ಕೆಲವೊಮ್ಮೆ ಸುಂದರವಾಗಿ ಆರಂಭವಾಗಿ, ಮೌನವಾಗಿ ಮುಗಿಯುತ್ತದೆ. ದಿಲೀಪ್ ಮತ್ತು ಮಧುಬಾಲಾ ಅದಕ್ಕೆ ಒಂದು ನಿದರ್ಶನ ಅಷ್ಟೇ.

(ಮಾಹಿತಿ: ವಿವಿಧ ಮೂಲಗಳು)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports