Kannada Actor: ಇಬ್ಬರು ಮಕ್ಕಳ ತಾಯಿ ಜೊತೆ ನಟನ ಲವ್ವಿ-ಡವ್ವಿ ಕೇಸ್​ಗೆ​ ಬಿಗ್ ಟ್ವಿಸ್ಟ್​; ಬಾಳು ಕೊಡ್ತೀನಿ ಎಂದವ ಸುಲಿಗೆ ಮಾಡಿದ್ನಾ? | | ACTPnews

News18


Last Updated:

ಮಹಿಳೆ 2 ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ಹೋದಾಗ ಅರ್ಜುನ್ ಪರಿಚಯವಾಗಿದ್ದಾನೆ. ಹಾಗೇ ಇಬ್ಬರು ಸ್ನೇಹ ಬೆಳೆದು, ಬಳಿಕ ಪ್ರೀತಿಯಾಗಿ ಬದಲಾಗಿದೆ. ಆಕೆಗೆ ಗಂಡ ಇಲ್ಲ ಅನ್ನೋದನ್ನ ತಿಳಿದು ಚೆಲ್ಲಾಟವಾಡಿದ್ನಾ ಈ ನಟ?

News18
News18

ಬೆಂಗಳೂರು (ಸೆ.25): ಇಬ್ಬರು ಮಕ್ಕಳ ತಾಯಿಗೆ ಟ್ಯಾಟೂ ಆರ್ಟಿಸ್ಟ್ (Tattoo Artist) ಕಮ್ ನಟ ಅರ್ಜುನ್‌ ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ವಿಡಿಯೋ ನೋಡಿ ಬಾಳು ಕೊಡ್ತೀನಿ ಅಂತ ಬಂದವನು ಮಹಿಳೆ ಬಾಳಲ್ಲಿ ಬಾಳಲ್ಲಿ ಚೆಲ್ಲಾಟವಾಡಿರೋ ಆರೋಪವಿದೆ. ನಟ ಅರ್ಜುನ್ ವಿರುದ್ಧ ಮಹಿಳೆ ದೂರು (Womans Complaint) ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ಮಹಿಳೆಗೆ ಬ್ಲ್ಯಾಕ್ ಮೇಲ್ (Blackmail)​ ಮಾಡಿ 9 ಲಕ್ಷ ದೋಚಿದ್ನಾ ಈ ಟ್ಯಾಟೋ ಆರ್ಟಿಸ್ಟ್ (Tattoo Artist), ನಟನ ಅಸಲಿ ಬಣ್ಣ ಬಯಲು.

ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್​ಮೇಲ್​

ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪಡೆದಿದ್ದಾನೆ ಎಂದು ಟ್ಯಾಟೂ ಅರ್ಟಿಸ್ಟ್ ಅರ್ಜುನ್‌ ವಿರುದ್ಧ ಮಹಿಳೆ ಆರೋಪ ಮಾಡಿದ್ದು, ದೂರಿನ ಅನ್ವಯ ಎಫ್‌ಐಆರ್‌ ಕೂಡ ದಾಖಲಾಗಿದೆ.

ಬಾಳು ಕೊಡೋದಾಗಿ ಬಂದು ಮೋಸ?

ಮಹಿಳೆ 2 ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ಹೋದಾಗ ಅರ್ಜುನ್ ಪರಿಚಯವಾಗಿದ್ದಾನೆ. ಹಾಗೇ ಇಬ್ಬರು ಸ್ನೇಹ ಬೆಳೆದು, ಬಳಿಕ ಪ್ರೀತಿಯಾಗಿ ಬದಲಾಗಿದೆ. ಆಕೆಗೆ ಗಂಡ ಇಲ್ಲ ಸಾವನ್ನಪ್ಪಿದ್ದಾನೆ ಎಂದು ತಿಳಿದ ನಟ ಬಾಳು ಕೊಡ್ತೇನೆ ಎಂದಿದ್ದನಂತೆ. ಬಳಿಕ ಆಕೆಗೆ ಹತ್ತಿರವಾಗಿ ವಂಚನೆ ಮಾಡಿದ್ದಾನೆ ಎನ್ನುನ ಆರೋಪ ಕೇಳಿ ಬಂದಿದೆ.

ಹಣಕ್ಕಾಗಿ ಮಹಿಳೆಯನ್ನ ಪೀಡಿಸಿದ್ನಾ?

ಆಕೆಯ ಜೊತೆ ತೆಗೆಸಿಕೊಂಡು ಖಾಸಗಿ ಫೋಟೋಗಳನ್ನ ಇಟ್ಟುಕೊಂಡು ಮಹಿಳೆ ಬ್ಲ್ಯಾಕ್‌ ಮೇಲ್ ಮಾಡಿದ್ದಾನಂತೆ. 2024ನೇ ನವಂಬರ್ ತಿಂಗಳಿನಿಂದ ಹಣ ಕೊಡುವಂತೆ ಮಹಿಳೆಗೆ ಕಿರುಕುಳ ನೀಡುತ್ತಿದ್ದು, ಹಣ ಇಲ್ಲ ಎಂದಾಗ ಸಂತ್ರಸ್ತೆ ಫೋಟೋವನ್ನ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡೋದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.

9 ಲಕ್ಷ ಹಣ ಪಡೆದ ಟ್ಯಾಟೋ ಆರ್ಟಿಸ್ಟ್

ಮಹಿಳೆ ಫೋಟೋ ಇಟ್ಕೊಂದು ಬ್ಲ್ಯಾಕ್​ಮೇಲ್ ಮಾಡಿದ ಟ್ಯಾಟೋ ಆರ್ಟಿಸ್​​ ​ಆಕೆಯಿಂದ 9 ಲಕ್ಷ ಹಣ ಪಡೆದುಕೊಂಡಿದ್ದನಂತೆ. ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ಸಂತ್ರಸ್ತೆ ಹಣ ಕೊಡಲು ನಿರಾಕರಿಸಿದ್ದು, ನನ್ನ ಫೋನ್‌ ಯಾಕೆ ರಿಸೀವ್ ಮಾಡ್ತಿಲ್ಲ ಅಂತ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಿನಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು  ಹಲ್ಲೆ ಕೂಡ ಮಾಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

ಇಬ್ಬರಿಂದಲೂ ದೂರು-ಪ್ರತಿದೂರು

ಕೆಲ ದಿನಗಳ ಹಿಂದೆಯಷ್ಟೇ ಮಹಿಳೆಯೇ ಮೋಸ ಮಾಡಿರುವುದಾಗಿ ಟ್ಯಾಟೂ ಆರ್ಟಿಸ್ಟ್‌ ಪೊಲೀಸರಿಗೆ ದೂರು ನೀಡಿದ್ರು. ಆದ್ರೆ ಈಗ ನಟ ಅರ್ಜುನ್‌ ವಿರುದ್ಧವೇ ಮಹಿಳೆ ದೂರು ನೀಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed