Last Updated:
ವಿಜಯ್ – ಸಂಗೀತ ವಿಚ್ಛೇದನ ಪ್ರಕರಣ ಅಂತಿಮ ಹಂತ ತಲುಪಿದೆ ಎನ್ನಲಾಗುತ್ತಿದ್ದು, ಜೂನ್ 15ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಯತ್ತ ಎಲ್ಲರ ಗಮನ ನಿಂತಿದೆ.
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ತಮಿಳುನಾಡಿನ ಸಿಎಂ ವಿಜಯ್ (CM Vijay) ರಾಜಕೀಯ ಜೀವನ ಎಷ್ಟು ಯಶಸ್ವಿಯಾಗಿ ಸಾಗುತ್ತಿದೆಯೋ ಅವರ ವೈಯಕ್ತಿಕ ಜೀವನ ಅಷ್ಟೇ ಚರ್ಚೆಗೆ ಕಾರಣವಾಗಿವೆ. ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಹಾಗೂ ಪತ್ನಿ ಸಂಗೀತಾ (Sangeeta Swarnalingam) ಅವರ ದಾಂಪತ್ಯ ಜೀವನದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿದ್ದು, ವಿಚ್ಛೇದನ ಪ್ರಕರಣದ ಬೆಳವಣಿಗೆಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಇದೀಗ ಈ ಪ್ರಕರಣ ಅಂತಿಮ ಹಂತ ತಲುಪಿದೆ ಎನ್ನಲಾಗುತ್ತಿದ್ದು, ಜೂನ್ 15ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಯತ್ತ ಎಲ್ಲರ ಗಮನ ನಿಂತಿದೆ.
ವಿಜಯ್ ಮತ್ತು ಸಂಗೀತಾ ನಡುವಿನ ವಿಚ್ಛೇದನ ಪ್ರಕರಣವು ಹಲವು ತಿಂಗಳುಗಳಿಂದ ಸುದ್ದಿಯಲ್ಲಿದೆ. ಈಗ ಈ ಪ್ರಕರಣದ ಅಂತಿಮ ವಿಚಾರಣೆ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಈ ವಿಚಾರಣೆ ದಂಪತಿಯ ಭವಿಷ್ಯದ ಕುರಿತು ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Vijay anna – sangeetha..patched up already..see on jun 22nd ..
— ASHOK KUMAR RAJENDRAN (@sweetyashok786) June 11, 2026
ಈ ಪ್ರಕರಣದ ನಡುವೆಯೇ ವಿಜಯ್ ಮತ್ತು ಸಂಗೀತಾ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ತಮಿಳು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ದೀರ್ಘಕಾಲದ ದಾಂಪತ್ಯ ಜೀವನ, ಕುಟುಂಬದ ಗೌರವ ಹಾಗೂ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಹೊಸ ಆರಂಭಕ್ಕೆ ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ ವಿಜಯ್ ಮೊದಲ ಪ್ರಯತ್ನದಲ್ಲೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜಕೀಯವಾಗಿ ದೊಡ್ಡ ಯಶಸ್ಸು ಕಂಡಿದ್ದರೂ, ಅವರ ವೈಯಕ್ತಿಕ ಜೀವನದ ವಿಚಾರಗಳು ನಿರಂತರವಾಗಿ ಸುದ್ದಿಯಲ್ಲಿವೆ.
ಸದ್ಯದ ಪರಿಸ್ಥಿತಿಯಲ್ಲಿ ಜೂನ್ 15ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆ ಅತ್ಯಂತ ಮಹತ್ವದ್ದಾಗಿದೆ. ಆ ದಿನ ವಿಜಯ್ ಮತ್ತು ಸಂಗೀತಾ ನ್ಯಾಯಾಲಯದಲ್ಲಿ ಮಂಡಿಸುವ ನಿಲುವು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಸಾಧ್ಯತೆ ಇದೆ.
ಇಬ್ಬರೂ ಮರುಸಂಧಾನದ ನಿರ್ಧಾರ ಕೈಗೊಳ್ಳುತ್ತಾರೆಯೇ ಅಥವಾ ವಿಚ್ಛೇದನ ಪ್ರಕ್ರಿಯೆ ಮುಂದುವರಿಯುತ್ತದೆಯೇ ಎಂಬ ಕುತೂಹಲ ಹೆಚ್ಚಿದೆ. ಈ ಬೆಳವಣಿಗೆಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬರುವವರೆಗೂ ಕಾದುನೋಡಬೇಕಿದೆ.
Bangalore [Bangalore],Bangalore,Karnataka













