Last Updated:
Vijay: ನಟ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ರಕ್ಷಾದಾರ ಕಟ್ಟಿಸಿಕೊಂಡಿದ್ದಾರೆ. ಇದರ ಮಹತ್ವ ನಿಮಗೆ ಗೊತ್ತಾ? ಇದನ್ನು ಯಾಕೆ ಕಟ್ಟಲಾಗುತ್ತೆ?
ತಮಿಳುನಾಡು ಸಿಎಂ (Tamil Nadu CM) ವಿಜಯ್ (Vijay) ಕೊಲ್ಲೂರು (Kollur) ಮೂಕಾಂಬಿಕೆಯ ದರ್ಶನ ಪಡೆದರು. ವಿಜಯ್ ವಿಶೇಷ ಪೂಜೆಯನ್ನೂ ಮೂಕಾಂಬಿಕೆಗೆ ಸಲ್ಲಿಸಿದ್ದಾರೆ. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ವಿಶೇಷ ಸಂಕಲ್ಪ ಮಾಡಿ ವಿಜಯ್ಗೆ ವಿಶೇಷ ದಾರ ಕಟ್ಟಿದ್ದಾರೆ. ದೇಗುಲದ ಮುಂಭಾಗದಲ್ಲಿರುವ ಧ್ವಜಸ್ಥಂಭಕ್ಕೆ ನಮಿಸಿದ ವಿಜಯ್ ದೇಗುಲ ಪ್ರವೇಶಿಸಿದ್ದರು. ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಉಪಸ್ಥಿತರಿದ್ದರು.
ಇನ್ನು ದೇಗುಲದಲ್ಲಿ ಸಂಕಲ್ಪದ ಭಾಗವಾಗಿ ವಿಜಯ್ಗೆ ವಿಶೇಷ ರಕ್ಷಾದಾರವನ್ನ ಕಟ್ಟಲಾಯ್ತು. ಈ ಬಗ್ಗೆ ಅರ್ಜಕ ರಾಘವೇಂದ್ರ ಅಡಿಗ ಮಾತನಾಡಿ, ರಾಜಕೀಯ ರಕ್ಷಣೆಗಾಗಿ ಈ ದಾರವನ್ನ ಕಟ್ಟಲಾಗುತ್ತದೆ. ವೀರಭದ್ರನ ಸನ್ನಿಧಿಯಲ್ಲಿ 3 ಬಾರಿ ತೆಂಗಿನಕಾಯಿ ಸುತ್ತಿ ಒಡೆದಿದ್ದಾರೆ. ರಕ್ಷಣೆ ಉದ್ದೇಶಕ್ಕಾಗಿ ಮಾಡಲಾಗಿದೆ ಎಂದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಬಂದ ಹಿನ್ನೆಲೆ ಮೂಕಾಂಬಿಕೆ, ವೀರಭಧ್ರ, ಗಣಪತಿ, ಸುಬ್ರಹ್ಮಣ್ಯ ದೇವರಿಗೆ ಸಿಎಂ ನಮಿಸಿದ್ದಾರೆ. ಗರ್ಭಗುಡಿಯ ಸುತ್ತ ವಿಜಯ್ ಪ್ರದಕ್ಷಿಣೆ ಹಾಕಿದ್ದಾರೆ.
ಮುಕಾಂಬಿಕೆಯ ದರ್ಶನ ಮಾಡಿದ ಸಿಎಂ ವಿಜಯ್ ಅವರು ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದ್ದಾರೆ. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರಿಂದ ಸಂಕಲ್ಪ ಮಾಡಲಾಗಿದೆ.
ತಾಯಿ ಮೂಕಾಂಬಿಕೆಗೆ ವಿಜಯ್ ಬೆಳ್ಳಿಯ ಖಡ್ಗವನ್ನ ಸಮರ್ಪಿಸಿದ್ದಾರೆ. ದೇಗುಲ ಭೇಟಿಯ ವೇಳೆ ವಿಜಯ್ ಈ ಹಿಂದೆ ಎಂಜಿಆರ್ ನೀಡಿದ್ದ ಚಿನ್ನದ ಖಡ್ಗವನ್ನೂ ವೀಕ್ಷಿಸಿದ್ದಾರೆ. ಇನ್ನು ವಿಶೇಷ ಪೂಜೆ ಸಲ್ಲಿಸಿದ ವಿಜಯ್ ಸುಮಾರು 30 ನಿಮಿಷಗಳ ಕಾಲ ದೇಗುಲದಲ್ಲಿದ್ದರು.
ಬೆಳ್ಳಿಯ ಖಡ್ಗಸಹಿತ ಫಲ ಪುಷ್ಪಗಳನ್ನ ಸಮರ್ಪಣೆ ಮಾಡಿದ್ದು, ಮಂತ್ರ ಘೋಷಣೆಯೊಂದಿಗೆ ಅರ್ಚಕ ವೃಂದದವರಿಂದ ಪೂಜಾ ವಿಧಿ ವಿಧಾನ ನೆರವೇರಿತು.
ದೇಗುಲದಲ್ಲಿ ಖಡ್ಗ ಸಮರ್ಪಣೆ ಮಾಡಿರೋ ವಿಚಾರವಾಗಿ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಎಕ್ಸ್ಕ್ಲೂಸೀವ್ ಆಗಿ ನ್ಯುಸ್ 18 ಜೊತೆ ಮಾತನಾಡಿದ್ದು, ಸಣ್ಣ ಗಾತ್ರ ಬೆಳ್ಳಿಯ ಖಡ್ಗವನ್ನು ವಿಜಯ್ ಅರ್ಪಿಸಿದ್ದಾರೆ. ಪ್ರತೀ ದಿನವೂ ದೇವಿಯ ಬಳಿ ಇಡುವಂತೆ ನಿವೇದನೆ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಶತ್ರು ಸಂಹಾರಕ್ಕಾಗಿ ಖಡ್ಗ ಸಮರ್ಪಣೆ ಮಾಡಲಾಗುತ್ತದೆ. ವಿಜಯದ ಸಂಕೇತವಾಗಿಯೂ ಖಡ್ಗ ಸಮರ್ಪಿಸಲಾಗುತ್ತದೆ. ನಾವು ಸಂಕಲ್ಪ ಮಾಡಿ ವಿಜಯದಾರವನ್ನ ವಿಜಯ್ಗೆ ನೀಡಿದ್ದೇವೆ ಅಂತ ಹೇಳಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದು. ಪರಶುರಾಮ ಸೃಷ್ಟಿಸಿದ ಮೋಕ್ಷದ 7 ವಾಸಸ್ಥಾನಗಳಲ್ಲಿ ಇದೂ ಒಂದು. ಕಲೆ, ಜ್ಞಾನ ಮತ್ತು ವಾಗ್ದೇವಿಯ ಆರಾಧನಾ ಕೇಂದ್ರ ಅಂತಲೇ ಖ್ಯಾತಿ ಪಡೆದಿದೆ.
Bangalore [Bangalore],Bangalore,Karnataka













