Vijay Kollur Visit: ವಿಜಯ್ ಸಿಎಂ ಆದ್ರೂ ಆ ರೂಲ್ಸ್ ಫಾಲೋ ಮಾಡದಿದ್ರೆ ಕೊಲ್ಲೂರಿನಲ್ಲಿ ನೋ ಎಂಟ್ರಿ | | ACTPnews

ವಿಜಯ್


Last Updated:

Vijay: ನಟ ವಿಜಯ್ ಕೊಲ್ಲೂರಿಗೆ ಆಗಮಿಸಿದ್ದಾರೆ. ನಟ ಸಿಎಂ ಆದರೂ ಕೂಡಾ ಅವರು ಕೊಲ್ಲೂರು ದೇವಾಲಯದಲ್ಲಿ ಈ ಒಂದು ನಿಯಮವನ್ನು ಫಾಲೋ ಮಾಡಲೇಬೇಕು. ಏನದು?

ವಿಜಯ್
ವಿಜಯ್

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ ಆಗಮಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ (Vijay) ಅವರು ಕೊಲ್ಲೂರು ಮುಖಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲು ಮಂಗಳೂರಿಗೆ (Mangaluru) ಆಗಮಿಸಿದ್ದಾರೆ. ವಿಜಯ್ ಭೇಟಿ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು ವಿಜಯ್ ಆಗಮನದ ಹಿನ್ನೆಲೆ ಭಧ್ರತಾ ತಪಾಸಣೆ ಮಾಡಲಾಗಿತ್ತು. ದೇವಸ್ಥಾನದ ಒಳಗಡೆ ಬಾಂಬ್ ಸ್ಕ್ವಾಡ್ ನಿಂದ ತಪಾಸಣೆ ಮಾಡಲಾಗಿತ್ತು.

ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ಸ್ಥಳದಲ್ಲಿ ಬಾಂಬ್ ಸ್ಕ್ವಾಡ್ ತಪಾಸಣೆ ನಡೆಸಲಾಗಿತ್ತು. ದೇವಸ್ಥಾನದಿಂದ ಭಕ್ತರನ್ನು ಹೊರಗೆ ಕಳುಹಿಸಿದ ಪೊಲೀಸರು ಸಂಜೆ 5 ಗಂಟೆ ತನಕ ಭಕ್ತರಿಗೆ ದೇವಳ ಪ್ರವೇಶ ನಿರ್ಬಂಧಿಸಿದ್ದಾರೆ.

ಶರ್ಟ್ ಧರಿಸಿದರೆ ನೋ ಎಂಟ್ರಿ

ಕೊಲ್ಲೂರುಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು ಕೊಲ್ಲೂರು ಪ್ರವಾಸಿ ಮಂದಿರದಲ್ಲಿ ವಿಜಯ್ ಬಟ್ಟೆ ಬದಲಾಯಿಸಲಿದ್ದಾರೆ. ಕೊಲ್ಲೂರು ದೇಗುಲದಲ್ಲಿ ಪುರುಷರು ಶರ್ಟ್ ಕಳಚಿ ಬರಬೇಕೆಂಬ ನಿಯಮವಿದೆ.

ಪಂಚೆ-ಶಲ್ಯ ಧರಿಸಿಯೇ ಬರಬೇಕು

ಈ ನಿಟ್ಟಿನಲ್ಲಿ ವಿಜಯ್ ಪಂಚೆ, ಶಲ್ಯ ಧರಿಸಿ ದೇಗುಲಕ್ಕೆ ಪ್ರವೇಶಿಸಲಿದ್ದಾರೆ. ಪ್ರವಾಸಿ ಮಂದಿರದಲ್ಲಿ ಸಿಎಂ ವಿಜಯ್ ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಪೊಲೀಸರು ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports