Last Updated:
Vijay: ನಟ ವಿಜಯ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ನಟ ಮಂಗಳೂರಿನಿಂದ ಕೊಲ್ಲೂರಿಗೆ ಪ್ರಯಾಣಿಸಿದ ಕಾರು ಯಾವುದು ಗೊತ್ತಾ?
ತಮಿಳು ಚಿತ್ರರಂಗದ ಖ್ಯಾತ ನಟ, ತಮಿಳುನಾಡಿನ ನೂತನ ಸಿಎಂ ವಿಜಯ್ (CM Vijay) ಅವರು ಇಂದು ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಅವರು ಮಂಗಳೂರಿನ (Mangaluru) ವಿಮಾನ ನಿಲ್ದಾಣಕ್ಕೆ (Airport) ವಿಜಯ್ ಬಂದಿಳಿದಿದ್ದಾರೆ. ಅಲ್ಲಿಂದ ಅವರು ಕಾರಿನ ಮೂಲಕ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ. ವಿಜಯ್ ಕೊಲ್ಲೂರಿಗೆ ಹೋದ ಕಾರು ಯಾವುದು ಗೊತ್ತಾ? ಅದರ ಬೆಲೆ ಎಷ್ಟು ಗೊತ್ತಾ?
ನಟ ವಿಜಯ್ ಅವರು ಏರ್ಪೋರ್ಟ್ಗೆ ಬರುತ್ತಿದ್ದಂತೆ ಅವರನ್ನು ಯುಟಿ ಖಾದರ್ ಅವರು ಸ್ವಾಗತಿಸಿದ್ದಾರೆ. ಗಣ್ಯರು ಅವರನ್ನು ಸ್ವಾಗತಿಸಿದ ನಂತರ ವಿಜಯ್ ಅವರು ಕಾರನ್ನು ಹತ್ತಿ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ.
ವಿಜಯ್ ಅವರು ಟೊಯೋಟೋ ಲ್ಯಾಂಡ್ ಕ್ರ್ಯೂಸರ್ ಹತ್ತಿ ಪ್ರಯಾಣಿಸಿದ್ದಾರೆ. ಈ ಕಾರಿನ ವಿಶೇಷತೆ ಏನು ಗೊತ್ತಾ? ಇದರ ಬೆಲೆ ಎಷ್ಟು ಕೋಟಿ ಗೊತ್ತಾ? ಗೊತ್ತಾದ್ರೆ ಶಾಕ್ ಆಗೋದು ಕ್ಯಾರೆಂಟಿ.
ಟೊಯೋಟೋ ಲ್ಯಾಂಡ್ ಕ್ರೂಸರ್ 300 ಲಕ್ಷುರಿ ಕಾರುಗಳಲ್ಲಿ ಒಂದು. ವಿಜಯ್ ಈಗ ಕೊಲ್ಲೂರಿಗೆ ಪ್ರಯಾಣಿಸುತ್ತಿರುವ ಕಾರು ಕೂಡಾ ಇದೇ. ಹೆಚ್ಚು ಆಫ್-ರೋಡ್-ಕೇಂದ್ರಿತ GR-S ರೂಪಾಂತರ ಈ ಕಾರಿನಲ್ಲಿದೆ.
2025 ಟೊಯೋಟಾ ಲ್ಯಾಂಡ್ ಕ್ರೂಸರ್ 300 ಅದರ ಮೊದಲು ಮಾರ್ಕೆಟ್ಗೆ ಬಂದ ಕಾರುಗಳಿಗಿಂತ ದುಬಾರಿಯಾಗಿದೆ. ಲ್ಯಾಂಡ್ ಕ್ರೂಸರ್ 300 GR-S ಮುಂಭಾಗ ಮತ್ತು ಹಿಂಭಾಗದ ಡಿಫ್ರಾಸ್ಟ್ ಲಾಕ್‌ಗಳನ್ನು ಹೊಂದಿದೆ.
309hp, 3.3-ಲೀಟರ್ V6 ಡೀಸೆಲ್ ಎಂಜಿನ್ ಮತ್ತು 10-ಸ್ಪೀಡ್ ಆಟೋಮ್ಯಾಟಿಕ್ ಸಿಸ್ಟಮ್ ಕೂಡಾ ಇದೆ. 4-ಝೋನ್ ಹವಾ ನಿಯಂತ್ರಣ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 12.3-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಸನ್‌ರೂಫ್, ಮುಂಭಾಗ ಮತ್ತು ಹಿಂಭಾಗದ ಸೀಟ್ ವಿಂಡೋ, ಮ್ಯಾನುವಲ್ ಸೀಟ್ ಅಡ್ಜಸ್ಟಿಂಗ್ ಇದೆ.
ಮುಂಭಾಗದ ಮಧ್ಯದ ಆರ್ಮ್‌ರೆಸ್ಟ್ ಅಡಿಯಲ್ಲಿ ಕೂಲ್ ಬಾಕ್ಸ್ ಕೂಡಾ ಇರುತ್ತದೆ. 10 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇದು ಅನಲಾಗ್ ಡಯಲ್‌ಗಳನ್ನು ಹೊಂದಿದೆ. ಗೇರ್ ನಾಬ್‌ಗಾಗಿ ಲೆಥೆರೆಟ್ ಫಿನಿಶ್ ಇದೆ.
ಟೊಯೋಟಾ ಲ್ಯಾಂಡ್ ಕ್ರೂಸ್ LC 300 ಬೆಲೆ ಈಗ ರೂ. 2.31 ಕೋಟಿಯಿಂದ ರೂ. 2.41 ಕೋಟಿಗಳವರೆಗೆ ಇದೆ. ಸದ್ಯ ವಿಜಯ್ ಅವರು ಇದೇ ಕಾರನ್ನು ರೆಗ್ಯುಲರ್ ಆಗಿ ಬಳಸುತ್ತಿದ್ದಾರೆ.
Bangalore,Karnataka













