Vaibhav Sooryavanshi: ರೋಹಿತ್ ಜೊತೆ ಸೂರ್ಯವಂಶಿ ಓಪನರ್​ ಆಗಿ ಆಡುವುದಕ್ಕೆ ಇದು ಸರಿಯಾದ ಸಮಯ! ಲೆಜೆಂಡರಿ ಕ್ರಿಕೆಟರ್ ಸಲಹೆ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಸೂರ್ಯವಂಶಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ವೈಭವ್ 3 ಪಂದ್ಯಗಳಿಂದ ಎರಡು ಅರ್ಧಶತಕಗಳೊಂದಿಗೆ 151 ರನ್ ಗಳಿಸಿದ್ದರು.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಹರಾರೆಯಲ್ಲಿ ಜಿಂಬಾಬ್ವೆ ಬೌಲರ್‌ಗಳ ಮೇಲೆ ದಂಡಯಾತ್ರೆ ನಡೆಸಿದ್ದ ವೈಭವ್ ಸೂರ್ಯವಂಶಿ ಅವರ ಅಭಿಮಾನಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತದ ಮಾಜಿ ಕ್ರಿಕೆಟಿಗ ಫಾರೂಕ್ ಎಂಜಿನಿಯರ್ ಈ ಪಟ್ಟಿಗೆ ಸೇರಿದ್ದಾರೆ. 2027ರ ವಿಶ್ವಕಪ್‌ಗೆ ಮೊದಲು ರೋಹಿತ್ ಶರ್ಮಾ ಜೊತೆಗೆ ಯುವ ಸೆನ್ಷೇಷನ್​ ವೈಭವ್ ಸೂರ್ಯವಂಶಿ ಅವರನ್ನು ಏಕದಿನ ತಂಡದಲ್ಲಿ ಆರಂಭಿಕ ಆಟಗಾರನಾಗಿ ಸೇರಿಸಿಕೊಳ್ಳಬೇಕು ಎಂದು ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಹೇಳಿದ್ದಾರೆ. ರೋಹಿತ್ ಜೊತೆಗೆ ಪ್ರಸ್ತುತ ಆರಂಭಿಕ ಜೋಡಿಯಾಗಿರುವ ಶುಭ್‌ಮನ್ ಗಿಲ್ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಲಹೆ ನೀಡಿದ್ದಾರೆ. ಇದು ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಪಡಿಸುತ್ತದೆ.

ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಸೂರ್ಯವಂಶಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ವೈಭವ್ 3 ಪಂದ್ಯಗಳಿಂದ ಎರಡು ಅರ್ಧಶತಕಗಳೊಂದಿಗೆ 151 ರನ್ ಗಳಿಸಿದ್ದರು. 15 ವರ್ಷದ ಈ ಆಟಗಾರ 50 ಓವರ್‌ಗಳ ಸ್ವರೂಪದಲ್ಲಿ ಸ್ಥಾನ ಪಡೆಯುವಷ್ಟು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಎಂಜಿನಿಯರ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಏಕದಿನ ತಂಡದಲ್ಲಿ ಸೂರ್ಯವಂಶಿಯನ್ನು ಸೇರಿಸಿಕೊಳ್ಳಲು ಇದು ಬಹುಶಃ ಸರಿಯಾದ ಸಮಯ ಎಂದು ಅವರು ಹೇಳಿದ್ದಾರೆ.

ರೋಹಿತ್-ವೈಭವ್ ಆರಂಭಿಕ ಜೋಡಿಯಾಗಬೇಕು

ಪ್ರಸ್ತುತ ಗಿಲ್ ತಂಡದ ಅತ್ಯುತ್ತಮ ಕ್ಲಾಸ್ ಆಟಗಾರ. ಅವರು ಸುಲಭವಾಗಿ ಸಿಕ್ಸರ್-ಬೌಂಡರಿಗಳಿಗಾಗಿ ಗಾಳಿಯಲ್ಲಿ ಚೆಂಡನ್ನು ಹಾರಿಸುವ ಆಟಗಾರನಲ್ಲ (ಅಂದರೆ ನೆಲದ ಮೇಲೆಯೇ ಕ್ಲಾಸಿಕ್ ಶಾಟ್‌ಗಳನ್ನು ಆಡುತ್ತಾರೆ). ಆದ್ದರಿಂದ ಅವರು 4ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ. ವೈಭವ್​ ಆರಂಭಿಕನಾದರೆ ಎಡ-ಬಲ ಸಂಯೋಜನೆಯು ಏಕದಿನ ಪಂದ್ಯಗಳಲ್ಲಿ ಸೂಕ್ತವಾಗಿರುತ್ತದೆ. ಆದ್ದರಿಂದ ರೋಹಿತ್ ಆಡುವವರೆಗೂ ಸೂರ್ಯವಂಶಿಯೊಂದಿಗೆ ಅವರನ್ನು ಓಪನಿಂಗ್ ಮಾಡಲು ಬಿಡಬೇಕು ಎಂದು ನಾನು ಭಾವಿಸುತ್ತೇನೆ. ಸೂರ್ಯವಂಶಿ ಆರಂಭಿಕ ಆಟಗಾರನಾಗಿ ಹೆಚ್ಚು ಉತ್ತಮ. ಏಕೆಂದರೆ ಅವರು ಮೈದಾನದಲ್ಲಿ ಸುಲಭವಾಗಿ ಗ್ಯಾಪ್‌ಗಳನ್ನು ಹುಡುಕಿ ರನ್ ಗಳಿಸಬಲ್ಲರು. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದು ಮತ್ತು ನಂತರ ನಮಗೆ ಬಲವಾದ ಬ್ಯಾಟಿಂಗ್ ಕ್ರಮಾಂಕವಿರುತ್ತದೆ.

ಸೂರ್ಯವಂಶಿ ನೈಸರ್ಗಿಕ ಆಟ ಹಾಳುಮಾಡಬೇಡಿ

ಸೂರ್ಯವಂಶಿ ಸಾಂಪ್ರದಾಯಿಕ ಕ್ರಿಕೆಟ್ ಪುಸ್ತಕದ (MCC Manual) ನಿಯಮಗಳ ಪ್ರಕಾರ ಆಡುವವರಲ್ಲ. ಆದ್ದರಿಂದ ಅವರಿಗೆ ಅತಿಯಾದ ಕೋಚಿಂಗ್ ನೀಡಿ ಅವರ ನೈಜ ಆಟದ ಶೈಲಿಯನ್ನು ಹಾಳು ಮಾಡಬಾರದು ಎಂದು ಇಂಜಿನಿಯರ್ ಎಚ್ಚರಿಸಿದ್ದಾರೆ. ಅವರು ನಿಮ್ಮನ್ನು ಸೋಲಿಸುವುದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆಲ್ಲಿಸುತ್ತಾರೆ. ಅವರು ನಿಮಗೆ ಉತ್ತಮ ಆರಂಭವನ್ನು ನೀಡಿದಾಗ, ಇತರ ಆಟಗಾರರು ಇನ್ನಿಂಗ್ಸ್ ಮುಂದುವರಿಸಲು ಮತ್ತು ದೊಡ್ಡ ಸ್ಕೋರ್ ಮಾಡಲು ಸಮಯ ಪಡೆಯಬಹುದು ಎಂದು ಸಲಹೆ ನೀಡಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed