Varanasi Movie: RRR, ಬಾಹುಬಲಿಯಂತಲ್ಲ! ವಾರಣಾಸಿಯ ಸಖತ್ ಇಂಟ್ರೆಸ್ಟಿಂಗ್ ಅಪ್ಡೇಟ್ | SS Karthikeya son of rajamouli gives updates on varanasi movie | | ACTPnews

ವಾರಣಾಸಿ


Last Updated:

Varanasi Movie: ವಾರಣಾಸಿ ಸಿನಿಮಾದ ಆ್ಯಕ್ಷನ್ಸ್ ಹೇಗಿರಲಿದೆ? ಈ ಬಗ್ಗೆ ರಾಜಮೌಳಿ ಮಗ ಹೇಳಿದ್ದೇನು?

ವಾರಣಾಸಿ
ವಾರಣಾಸಿ

ಬಾಹುಬಲಿ ನಿರ್ದೇಶಕ ಎಸ್​ ಎಸ್ ರಾಜಮೌಳಿ (SS Rajamouli) ಅವರ ಮಗ ಎಸ್​ಎಸ್ ಕಾರ್ತಿಕೇಯ (SS Karthikeya) ಅವರು ಇತ್ತೀಚೆಗೆ ವಾರಣಾಸಿ ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ (Action Sequence) ಬಗ್ಗೆ ಕೆಲವೊಂದು ಕುತೂಹಲಕಾರಿ ಸೀಕ್ರೆಟ್ಸ್ ಬಿಚ್ಚಿಟ್ಟರು.

ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ವಾರಣಾಸಿ ಸಿನಿಮಾ ಏಪ್ರಿಲ್ 7ರಂದು 2027ಕ್ಕೆ ರಿಲೀಸ್ ಆಗಲಿದೆ. ರಾಜಮೌಳಿ ಅವರ ಈ ಹಿಂದಿನ ಸಿನಿಮಾ RRR ಈಗಾಗಲೇ ದಾಖಲೆ ಬರೆದಿದೆ. ಈ ಸಿನಿಮಾದ ನಾಟು ನಾಟು ಹಾಡಿಗೆ 2022ರಲ್ಲಿ ಬೆಸ್ಟ್ ರಿಜಿನಲ್ ಸಾಂಗ್ ಅವಾರ್ಡ್ ಲಭಿಸಿದೆ.

ವಾರಣಾಸಿಯಲ್ಲಿ ಸ್ಪರ್ಧೆಗೆ ಇಳಿಯೋಕೆ ಇನ್ನೊಂದು ಅಂಶ ಇರಲಿದೆ. 2028ರ 100ನೇ ಅಕಾಡೆಮಿ ಅವಾರ್ಡ್ಸ್​ಗೆ ಸ್ಪರ್ಧೆಗಳಿಯುವಾಗ ಆ್ಯಕ್ಷನ್ ಹಾಗೂ ಸ್ಟಂಟ್ಸ್​ಗೂ ಮೆಚ್ಚುಗೆ ಬರಲಿದೆ. ವಾರಣಾಸಿ ಬಾಹುಬಲಿಯಂತೆಯೂ ಅಲ್ಲ. RRRನಂತೆಯೂ ಅಲ್ಲ ಎಂದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾರ್ತಿಕೇತ ಅವರು ವಾರಣಾಸಿ ಆ್ಯಕ್ಷನ್ ಸೀಕ್ವೆನ್ಸ್​ಗೆ ಸಂಬಂಧಿಸಿ ಜನ ಏನು ನಿರೀಕ್ಷಿಸಬಹುದು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಸ್ಟಂಟ್ಸ್ ಕ್ರೇಜಿಯಾಗಿವೆ. ಇದು ವಿಭಿನ್ನವಾಗಿರುವ ಆ್ಯಕ್ಷನ್. ನೀವು ಆರ್​ಆರ್​ಆರ್​ ಅಥವಾ ಬಾಹುಬಲಿಯಲ್ಲಿ ನೋಡಿದಂತದ್ದಲ್ಲ. ಇದು ಸಂಪೂರ್ಣವಾಗಿ ವಿಭಿನ್ನವಾಗಿರುವ ಆ್ಯಕ್ಷನ್. ಆದರೆ ಪ್ರತಿ ಸೀಕ್ವೆನ್ಸ್​ನಲ್ಲಿಯೂ ನೀವು ನಿಮ್ಮ ಸೀಟ್ ತುದಿಯಲ್ಲಿ ಕೂರುವಂತೆ ಮಾಡುತ್ತೆ ಎಂದಿದ್ದಾರೆ.

ನಿರ್ಮಾಪಕರು ಆಸ್ಕರ್ ಬಗ್ಗೆ ಏನೂ ಹೇಳದಿದ್ದರೂ 100ನೇ ಆಸ್ಕರ್​​ಗಾಗಿ ಈ ಸಿನಿಮಾ ಸ್ಪರ್ಧಿಸುವ ನಿರೀಕ್ಷೆ ಇದೆ. 98ನೇ ಆಸ್ಕರ್ ಅವಾರ್ಡ್​ನಲ್ಲಿ ಕಾಸ್ಟಿಂಗ್ ಅವಾರ್ಡ್ ಸೇರಿಸಲಾಗಿದೆ. 2028ರಲ್ಲಿ ಸ್ಟಂಟ್ ಡಿಸೈನ್​ಗಾಗಿ ಇನ್ನೊಂದು ವಿಭಾಗ ಸೇರ್ಪಡೆಯಾಗಲಿದೆ.

ವಾರಣಾಸಿ ಬಿಡುಗಡೆಗೆ ಇನ್ನು 7 ತಿಂಗಳಿವೆ. ಆದರೆ ಚಿತ್ರತಂಡ ಸಿನಿಮಾದ ಕಥೆಯನ್ನು ಸಂಪೂರ್ಣವಾಗಿ ಸೀಕ್ರೆಟ್ ಆಗಿಟ್ಟಿದೆ. ಕೆಲವೊಂದು ಟೀಸರ್, ಫೋಟೋಗಳನ್ನು ಬಿಟ್ಟರೆ ಸಿನಿಮಾ ಬಗ್ಗೆ ಬೇರೇನೂ ರಿವೀಲ್ ಆಗಿಲ್ಲ. ಬಾಹುಬಲಿ ಹಾಗೂ ಆರ್​ ಆರ್ ಆರ್ ಸಿನಿಮಾಗಳನ್ನು ಅವುಗಳ ವಿಎಫ್​​ಎಕ್ಸ್ ಹಾಗೂ ಆ್ಯಕ್ಷನ್​ಗಳಿಗಾಗಿ ವಿಶೇಷವಾಗಿ ಜನರು ಕೊಂಡಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟಿಗೆ ಇವುಗಳ ಗುಣಮಟ್ಟವಿದೆ ಎಂದಿದ್ದರು ಪ್ರೇಕ್ಷಕರು. ಇನ್ನು ಬರುವ ವಾರಣಾಸಿ ಇವೆರಡನ್ನೂ ಮೀರಿಸಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Prakash Raj: ‘ರಂಗಾ-ಬಿಲ್ಲಾ ಜೋಡಿ’! SIR ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ವಾಗ್ದಾಳಿ

ಮಹೇಶ್ ಬಾಬು ಡಬಲ್ ರೋಲ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ರುದ್ರ ಹಾಗೂ ರಾಮನಾಗಿ ಕಾಣಿಸಿಕೊಳ್ಳಲಿದ್ದು, ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಮಂದಾಕಿನಿ ಪಾತ್ರ ಮಾಡಲಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರು ಸಿನಿಮಾದಲ್ಲಿ ಕುಂಭ ಎನ್ನುವ ವಿಲನ್ ಆಗಿ ಮಿಂಚಲಿದ್ದಾರೆ. ನಟ ಪ್ರಕಾಶ್ ರಾಜ್ ಅವರು ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed