Sanjay Dutt: ದೇಶದ ಜನರಲ್ಲಿ ಕ್ಷಮೆ ಕೇಳಿದ ಸಂಜಯ್ ದತ್! ‘ದೇಶದಲ್ಲಿ ಶಾಂತಿ ಇಲ್ಲ’ ಅಂತ ಹೇಳಿ ವಿವಾದ ಮೈಮೇಲೆ ಎಳೆದುಕೊಂಡ ಬಾಲಿವುಡ್ ನಟ | | ACTPnews

News18


Last Updated:

ಭಾರತದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ ಎಂದು ನಟ ಹೇಳಿದ್ದ ಮಾತುಗಳು ಟೀಕೆಗೆ ಗುರಿಯಾದ ಬೆನ್ನಲ್ಲೇ, ನಟ ತಮ್ಮ ಹೇಳಿಕೆಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. 

News18
News18

ಬಾಲಿವುಡ್ ಹಿರಿಯ ನಟ ಸಂಜಯ್ ದತ್ (Sanjay Dutt) ಇತ್ತೀಚಿನ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಚರ್ಚೆಗೆ ಗ್ರಾಸವಾಗಿವೆ. ಭಾರತದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ ಎಂದು ನಟ ಹೇಳಿದ್ದ ಮಾತುಗಳು ಟೀಕೆಗೆ ಗುರಿಯಾದ ಬೆನ್ನಲ್ಲೇ, ನಟ ತಮ್ಮ ಹೇಳಿಕೆಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. 

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಶೇಖರ್ ಟುನೈಟ್ ಟಾಕ್ ಶೋನಲ್ಲಿ ಸಂಜಯ್ ದತ್ ಭಾಗವಹಿಸಿದ್ದರು. ಈ ವೇಳೆ ಭಾರತದ ಪ್ರಸ್ತುತ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ದೇಶದ ಜನರು ತುಂಬಾ ಒಳ್ಳೆಯವರು ಮತ್ತು ಭಾರತದಲ್ಲಿ ಶಾಂತಿ ಇರಬೇಕು ಎಂದು ಹೇಳಿದ್ದಾರೆ. ಆದರೆ ಸದ್ಯ ದೇಶದಲ್ಲಿ ಆ ಶಾಂತಿಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು.

ಭಾರತೀಯರು ವಿಶಾಲ ಹೃದಯದವರು

ಭಾರತೀಯರು ವಿಶಾಲ ಹೃದಯದವರು ಮತ್ತು ಅತಿಥಿ ಸತ್ಕಾರದಲ್ಲಿ ನಂಬಿಕೆ ಹೊಂದಿರುವವರು ಎಂದು ಸಂಜಯ್ ದತ್ ತಮ್ಮ ಮಾತುಕತೆಯಲ್ಲಿ ಹೇಳಿದ್ದಾರೆ. ದೇಶ ಸಾಕಷ್ಟು ಕೊಡುಗೆಗಳನ್ನು ನೀಡಿದೆ ಹಾಗೂ ಮುಂದೆಯೂ ಅದೇ ರೀತಿಯ ಮನೋಭಾವ ಮುಂದುವರಿಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು. ಹಿಂದಿನ ಶಾಂತಿಯ ದಿನಗಳು ಶೀಘ್ರದಲ್ಲೇ ಮರಳಿ ಬರಲಿ ಎಂದು ಶಿವನಲ್ಲಿ ಪ್ರಾರ್ಥಿಸುವುದಾಗಿ ಕೂಡ ನಟ ಹೇಳಿದ್ದರು.

ಮಹಾತ್ಮ ಗಾಂಧೀಜಿಯವರ ಮೂರು ಮಂಗಗಳ ಪರಿಕಲ್ಪನೆಯನ್ನು ಉಲ್ಲೇಖಿಸಿದ ಸಂಜಯ್ ದತ್, ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು ಎಂಬ ಸಂದೇಶದ ಬಗ್ಗೆ ಮಾತನಾಡಿದರು. ಆದರೆ ಇಂದಿನ ಸಂದರ್ಭದಲ್ಲಿ ನಾಲ್ಕನೇ ಕೋತಿಯ ಅಗತ್ಯವಿದೆ ಎಂದು ಹಾಸ್ಯಮಯವಾಗಿ ಹೇಳಿದ್ದರು. ಯಾರಾದರೂ ತಪ್ಪನ್ನು ನೋಡಿದರೆ ಅದನ್ನು ಯಾರು ಸರಿಪಡಿಸುತ್ತಾರೆ ಎಂಬ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಮುಂದಿಟ್ಟಿದ್ದರು.

ಕಾರ್ಯಕ್ರಮದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ನಂತರ ಸಂಜಯ್ ದತ್ ಎಕ್ಸ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ನೋವುಂಟು ಮಾಡುವುದು, ಅವಮಾನಿಸುವುದು ಅಥವಾ ಅಗೌರವ ತೋರುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ನಂತರ ಸಂಜಯ್ ದತ್ ಹೇಳಿಕೆಯ ಕೆಲ ಭಾಗಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಅದರ ಬೆನ್ನಲ್ಲೇ ಅವರ ಮಾತುಗಳ ಅರ್ಥ ಮತ್ತು ಉದ್ದೇಶದ ಬಗ್ಗೆ ವಿವಿಧ ರೀತಿಯ ಚರ್ಚೆಗಳು ನಡೆದಿದ್ದವು. ಇದೀಗ ನಟ ನೀಡಿರುವ ಸ್ಪಷ್ಟನೆಯೊಂದಿಗೆ ಈ ಹೇಳಿಕೆಗಳ ಹಿಂದಿನ ತಮ್ಮ ಉದ್ದೇಶವನ್ನು ವಿವರಿಸಲು ಪ್ರಯತ್ನಿಸಿದ್ದಾರೆ.

ಒಟ್ಟಿನಲ್ಲಿ, ದೇಶದಲ್ಲಿ ಶಾಂತಿಯ ಅನುಭವವಾಗುತ್ತಿಲ್ಲ ಎಂಬ ಸಂಜಯ್ ದತ್ ಅವರ ಮಾತುಗಳು ವಿವಾದಕ್ಕೆ ಕಾರಣವಾದರೂ, ತಮ್ಮ ಮಾತುಗಳು ಹಾಸ್ಯಮಯ ಸಂಭಾಷಣೆಯ ಭಾಗವಾಗಿದ್ದವು ಮತ್ತು ಅವುಗಳನ್ನು ಸಂದರ್ಭದಿಂದ ಹೊರತಾಗಿ ಅರ್ಥೈಸಲಾಗಿದೆ ಎಂದು ನಟ ಸ್ಪಷ್ಟಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed