Last Updated:
Vanditha Rajkumar: ಅಪ್ಪು ಮಗಳು ವಂದಿತಾ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ನುಕಾಸ್ ಕೆಫೆ ಎನ್ನುವ ಇಲ್ಲಿ ಏನೇನಿದೆ?
ಸಿನಿಮಾ (Cinema) ಸ್ಟಾರ್ಗಳ ಮಕ್ಕಳು ಸಿನಿಮಾಗೆ ಬರಬೇಕು, ಬಣ್ಣದ ಲೋಕದಲ್ಲಿ ಸ್ಟಾರ್ ಪ್ರಾಬಲ್ಯ, ಬಣ್ಣದ ಲೋಕದ ಲೆಗಸಿ ಬಿಟ್ಟು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಪುತ್ರಿ ವಂದಿತಾ ರಾಜ್ಕುಮಾರ್ ಅವರು ನುಕಾಸ್ ಕೆಫೆ (Nukas Cafe) ಶುರು ಮಾಡಿದ್ದಾರೆ.
ಈ ಮೂಲಕ ಚಿತ್ರರಂಗದ ಸುತ್ತ ಇರುವ ಸ್ಟಿರಿಯೋಟೈಪ್ ಬ್ರೇಕ್ ಮಾಡಿರುವ ವಂದಿತಾ ಅವರು ತನ್ನ ನೆಚ್ಚಿನ ಕೆಫೆ ಬ್ಯುಸಿನೆಸ್ ಶುರು ಮಾಡಿದ್ದು ಇದಕ್ಕೆ ನುಕಾಸ್ ಕೆಫೆ ಎಂದು ಹೆಸರು ಕೂಡಾ ಇಟ್ಟಿದ್ದಾರೆ.
ನುಕಾಸ್ ಕೆಫೆ ಎಂದರೆ ಏನಿದರ ಸೀಕ್ರೆಟ್ ಗೊತ್ತಾ? ಅಪ್ಪು ಸೇರಿದಂತೆ ಕುಟುಂಬಸ್ಥರೆಲ್ಲ ವಂದಿತಾ ಅವರನ್ನು ನುಕ್ಕಿ ಎಂದೇ ಕರೆಯುತ್ತಿದ್ದರು ಎನ್ನಲಾಗಿದೆ. ಅದೇ ಕಾರಣದಿಂದ ಅವರು ಕೆಫೆಗೆ ನುಕಾಸ್ ಅಂತ ಹೆಸರಿಟ್ಟಿದ್ದಾರೆ.
ಶಿವಣ್ಣ ಪತ್ನಿ ಗೀತಾ ಅವರಲ್ಲಿ ಪುನೀತ್ ರಾಜ್ಕುಮಾರ್ ಅವರು ಬ್ಯುಸಿನೆಸ್ ಶುರು ಮಾಡೋಕೆ ಹೇಳಿದ್ದರಂತೆ. ಚೆನ್ನಾಗಿ ಬೇಕ್ ಮಾಡುತ್ತೀರಿ. ಅದನ್ನೇ ಬ್ಯುಸಿನೆಸ್ ಮಾಡಿ ಎಂದು ಹೇಳಿದ್ರಂತೆ. ಆದರೆ ಅವರಿಗೆ ಅಷ್ಟು ಐಡಿಯಾ ಇರದ ಕಾರಣ ಮಾಡಿರಲಿಲ್ವಂತೆ. ಆದರೆ ಈಗ ಅಪ್ಪು ಕನಸು ಮಗಳ ಮುಖಾಂತರ ನನಸಾಗಿದೆ.
ನುಕಾಸ್ ಕೆಫೆ, ಸ್ಮಾಲ್ ಬ್ಯಾಚ್, ಬಿಗ್ ಹಾರ್ಟ್ ಎಂದು ಬರೆಯಲಾಗಿದೆ. ಹೋಮ್ ಬೇಕರಿ, ಮೇಡ್ ಫ್ರೆಶ್ ಎಂದು ಬರೆಯಲಾಗಿದೆ.
ಹಾಯ್ ನಾನು ವಂದಿತಾ. ನುಕಾಸ್ ಕೆಫೆಗೆ ಬರುವ ಪ್ರತಿ ಆರ್ಡರ್ ಅನ್ನು ನಾನು ಖುದ್ದಾಗಿ ಫ್ರೆಶ್ ಆಗಿ ತಯಾರಿಸುತ್ತೇನೆ. ಇದಕ್ಕೆ ಬಳಸೊ ಪ್ರತಿ ಇಂಗ್ರೀಡಿಯೆಂಟ್ಸ್ ಕೂಡಾ ನಾನು ಖುದ್ದಾಗಿ ಆರಿಸುತ್ತೇನೆ. ಇದು ಹವ್ಯಾಸವಾಗಿತ್ತು. ಈಗ ಪ್ರತಿ ಬೈಟ್ ಕೂಡಾ ನಿಮಗಾಗಿಯೇ ಮಾಡಿದೆ ಎನ್ನುವಂತೆ ಮಾಡಲಿದ್ದೇನೆ ಎಂದು ಬರೆಯಲಾಗಿದೆ.
ಚಾಕೊಲೇಟ್ ಕಪ್ ಕೇಕ್, ವೆನಿಲ್ಲಾ ಕಪ್ ಕೇಕ್, ರೆಡ್ ವೆಲ್ವೆಟ್ ಸದ್ಯ ಲಭ್ಯವಿದೆ. ಸ್ಪೆಷಲ್ ಮೆನುಗಳಲ್ಲಿ ತಿರಮಿಸು, ಮಡೆಲೈನ್ಸ್, ಚೀಸ್ ಕೇಕ್ ಬ್ರೌನಿ, ಟ್ರೆಸ್ ಲೆಚೆಸ್ ಲಭ್ಯವಿದೆ.
ಮಿನಿ ಕೇಕ್ಸ್ಗಳಲ್ಲಿ ಬಿಸ್ಕಾಫ್, ರೆಡ್ ವೆಲ್ವೆಟ್, ಚಾಕೊಲೇಟ್ ಕ್ರಂಚ್, ವೆನಿಲ್ಲಾ ಪಿಸ್ತಾ ಲಭ್ಯವಿದೆ. ಕುಕೀಸ್ಗಳಲ್ಲಿ ನ್ಯೂಟೆಲ್ಲ, ಚಾಕೊಲೇಟ್ ಫಿಕ್ಸ್, ವೆಲ್ವೆಟ್ ಕ್ರೀಮ್, ಆಲ್ ಫ್ಲೇವರ್ಸರ್ ಕೂಡಾ ಲಭ್ಯವಿದೆ.
Bangalore [Bangalore],Bangalore,Karnataka
Jul 17, 2026 11:55 AM IST














