Last Updated:
ಕನ್ನಡದ ಮಹಾನ್ ಖಳನಾಯಕ ನಟ ವಜ್ರಮುನಿ ಅವರು ಒಂದು ರೇಪ್ ಸೀನ್ ಮುಂಚೆ ಆಯಾ ಕಲಾವಿದೆಯರಿಗೆ ಕೈಮುಗಿದು ಕ್ಷಮೆ ಕೇಳ್ತಾ ಇದ್ದರು. ಆದರೆ, ಯಾಕೆ ಅನ್ನುವ ಪ್ರಶ್ನೆಗೆ ಹಿರಿಯ ಪುತ್ರ ವಿಶ್ವನಾಥ್ ವಜ್ರಮುನಿ ಅವರು ಈಗೊಂದಷ್ಟು ಇಂಟ್ರಸ್ಟಿಂಗ್ ವಿಷಯ ಹೇಳಿಕೊಂಡಿದ್ದಾರೆ. ಆ ವಿವರ ಇಲ್ಲಿದೆ ಓದಿ.
ವಜ್ರಮುನಿ (Vajramuni) ಅವರು ನೋಡೋಕೆ ಕಠೋರ ಅನಿಸ್ತಾ ಇದ್ದರು. ಅವರ ಧ್ವನಿ ಕೂಡ ಅಷ್ಟೆ ಖಡಕ್ ಆಗಿಯೇ ಇತ್ತು. ಖಳನಾಯಕನ ಪಾತ್ರಕ್ಕೆ ಇವರು ಹೇಳಿ ಮಾಡಿಸಿದಂತೇನ ಇದ್ದರು. ಆದರೆ, ಇವರು ಅದ್ಭುತ ವ್ಯಕ್ತಿ ಅನ್ನೋದು ಎಲ್ಲರಿಗೂ ಗೊತ್ತಿಲ್ಲ ಬಿಡಿ. ಒಳ್ಳೆ ಮನಸಿನ ಅದ್ಭುತ ಜೀವನ ಅನ್ನೋದು ಬಹುತೇಕರಿಗೆ ತಿಳಿಯೇ ಇಲ್ಲ. ಒಂದು ರೇಪ್ ಸೀನ್ (Rape Scene) ಇದ್ದರೆ ಆಯಿತು. ಅದನ್ನ ಮಾಡೋ ಮುಂಚೇನೆ ಆಯಾ ಕಲಾವಿದೆಯರಿಗೆ ಕೈ ಮುಗಿದು ಕ್ಷಮೆ ಕೇಳ್ತಾ ಇದ್ದರು. ಈ ವಿಷಯವನ್ನ ವಜ್ರಮುನಿ (Vajramuni) ಅವರ ಹಿರಿಯ ಪುತ್ರ ವಿಶ್ವನಾಥ್ ವಜ್ರಮುನಿ (Vishwanath Vajramuni) ಅವರು ಹೇಳಿಕೊಂಡಿದ್ದಾರೆ. ತಮ್ಮ ತಂದೆ ಅದೆಷ್ಟು ಒಳ್ಳೆಯವರು ಅನ್ನೋದನ್ನು ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.
ನಮ್ಮ ತಂದೆ ಯಾವಾಗಲೂ ಹಾಗೆ ಇದ್ದರು. ಒಂದು ಸಿನಿಮಾ ಅಂದ್ರೆ ಅದಕ್ಕೆ ಏನು ಬೇಕು ಅದನ್ನ ಕೊಡ್ತಾ ಇದ್ದರು. ಸ್ಕ್ರಿಪ್ಟ್ ಹೇಗೆ ಡಿಮಾಂಡ್ ಮಾಡ್ತದೋ ಆ ರೀತಿನೇ ಮಾಡ್ತಾ ಇದ್ದರು.
ಅಪ್ಪ ಹೀಗೆ ಮಾಡ್ತಾ ಇದ್ದರು
(ಚಿತ್ರ ಕೃಪೆ: ಸುದ್ದಿ ಮನೆ ಯುಟ್ಯೂಬ್ ಚಾನೆಲ್)
ಚಿತ್ರದಲ್ಲಿ ಆ ಸೀನ್ ಇದ್ದರೆ ಆಯಿತು. ಆಯಾ ಕಲಾವಿದೆಯರಿಗೆ ಮೊದಲೆ ಕ್ಷಮೆ ಕೇಳ್ತಾ ಇದ್ದರು. ನಾನು ಏನಾದರು ತಪ್ಪು ಮಾಡಿದ್ರೆ ಕ್ಷಮೆ ಕೇಳ್ತೀನಿ. ಸ್ಕ್ರಿಪ್ಟ್ ಹೇಗೆ ಕೇಳುತ್ತದೆಯೋ ಹಾಗೆ ಮಾಡುತ್ತೇನೆ. ದಯವಿಟ್ಟು ಆ ರೀತಿ ಏನಾದರು ಇದ್ದರೆ ಹೇಳಿ ಅಂತಲೇ ಹೇಳ್ತಾ ಇದ್ದರು.
ಸುದ್ದಿ ಮನೆ ಯುಟ್ಯೂಬ್ ಚಾನೆಲ್‌ಗೆ ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ವಜ್ರಮುನಿ ಮಾತನಾಡಿದ್ದಾರೆ. ತಮ್ಮ ತಂದೆ ಒಂದು ಚಿತ್ರವನ್ನ ಅದೆಷ್ಟು ಪ್ರೀತಿಸುತ್ತಿದ್ದರು. ಒಂದು ಚಿತ್ರದ ಸ್ಕ್ರಿಪ್ಟ್ ಏನು ಬೇಡುತ್ತದೆಯೋ ಅದನ್ನ ಹೇಗೆಲ್ಲ ಮಾಡ್ತಾ ಇದ್ದರು ಅಂತಲೂ ಹೇಳಿದ್ದಾರೆ.
ನನ್ನ ಕ್ಷಮಿಸಿ ಅಂತ ಕೇಳ್ತಿದ್ದರು
(ಚಿತ್ರ ಕೃಪೆ: ವಜ್ರಮುನಿ ಫ್ಯಾನ್ FB ಪೇಜ್)
ವಜ್ರಮುನಿ ಅವರು ಒಂದು ಕೆಲಸ ಮಾಡ್ತಿದ್ದರು. ಇನ್ನೇನು ಆ ಸೀನ್ ಶುರು ಆಗ್ಬೇಕು, ಅಷ್ಟರಲ್ಲಿಯೇ ವಜ್ರಮುನಿ ಅವರು ಆಯಾ ಕಲಾವಿದೆಯರಿಗೆ ಕ್ಷಮೆ ಕೇಳ್ತಾ ಇದ್ದರು.
ವಜ್ರಮುನಿ ಅವರು ಸಿನಿಮಾರಂಗದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮಕ್ಕಳು ಈ ಕ್ಷೇತ್ರಕ್ಕೆ ಬಂದು ಕಷ್ಟಪಡಲೇ ಬಾರದು ಅಂತಲೇ ಯೋಚನೆ ಮಾಡಿದ್ದರು.
ವಜ್ರಮುನಿ ಅವರು ಹೀಗೆ ಇದ್ದರು
(ಚಿತ್ರ ಕೃಪೆ: ವಜ್ರಮುನಿ ಫ್ಯಾನ್ FB ಪೇಜ್)
ಹಾಗಾಗಿಯೇ ಮೂವರು ಗಂಡು ಮಕ್ಕಳು ಸಿನಿಮಾರಂಗಕ್ಕೆ ಬರೋದು ಬೇಡ ಅಂತಲೇ ಹೇಳಿದ್ದರು. ತಂದೆ ವಜ್ರಮುನಿ ಹೇಳಿದ ಮಾತುಗಳನ್ನ ಮಕ್ಕಳು ಇಂದಿಗೂ ಪಾಲಿಸುತ್ತಾರೆ. ಸಿನಿಮಾರಂಗದಲ್ಲಿ ಯಾವುದೇ ಅರ್ಥದಲ್ಲೂ ಇವರು ಬಂದಿಲ್ಲ ಅಂತ ಹೇಳಬಹುದು.
ಹಾಸ್ಯ ನಾಯಕ ನಟ ಕೋಮಲ್ ಕುಮಾರ್ ಇತ್ತೀಚಿಗೆ ಒಂದು ಚಿತ್ರ ಮಾಡಿದ್ದರು. ಎಲಾ ಕುನ್ನಿ ಅನ್ನೋದು ಈ ಚಿತ್ರದ ಹೆಸರು. ಇದರಲ್ಲಿ ವಜ್ರಮುನಿ ಅವರ ರೂಪವನ್ನೆ ಕೋಮಲ್ ಕುಮಾರ್ ತಾಳಿದ್ದರು.
ಇದೇ ಚಿತ್ರದಲ್ಲಿಯೇ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ವಜ್ರಮುನಿ ನಟನೆ ಮಾಡಿದ್ದಾರೆ. ಬಾಲ ನಟನಾಗಿಯೇ ಆಕರ್ಶ್ ವಜ್ರಮುನಿ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಶಾಲೆಯಲ್ಲಿ ನಾಟಕವನ್ನು ಮಾಡಿರೋದು ಇದೆ. ಕಲೆ ಬಗ್ಗೆ ಆಸಕ್ತಿನೂ ಇದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Jun 10, 2026 10:45 PM IST













