Last Updated:
ಮೊದಲ ಇನ್ನಿಂಗ್ಸ್ನಲ್ಲಿಯೂ ಆಕ್ರಮಣಕಾರಿಯಾಗಿ ಆಡುವ ಮೂಲಕ 44 ರನ್ ಗಳಿಸಿ ಅನಗತ್ಯ ಹೊಡೆತಕ್ಕೆ ಪ್ರಯತ್ನಿಸಿ ಬೌಂಡರಿ ಲೈನ್ ಬಳಿ ಕ್ಯಾಚ್ ಔಟ್ ಆಗಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿಯೂ ಅದೇ ಅತಿಯಾದ ಉತ್ಸಾಹವನ್ನು ಪ್ರದರ್ಶಿಸಿದ್ದಕ್ಕಾಗಿ ಅವರು ಸರಿಯಾದ ಬೆಲೆಯನ್ನೇ ತೆತ್ತರು.
ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ವಿರುದ್ಧದ 2026 ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತೀವ್ರ ನಿರಾಶೆ ಮೂಡಿಸಿದರು. ಆತುರದ ಹೊಡೆತಕ್ಕೆ ಕೈ ಹಾಕಿ ಯಂಗ್ಸ್ಟರ್ ವೈಭವ್ ಸೂರ್ಯವಂಶಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಸಮಾಧಾನದಿಂದ ಆಡುವ ಬದಲಿಗೆ ಆರಂಭದಿಂದಲೇ ಟಿ20ಯಂತೆ ಬೌಂಡರಿ-ಸಿಕ್ಸರ್ ಸಿಡಿಸಲು ಮುಂದಾಗಿ ಸ್ಟಂಪ್ ಔಟ್ ಆಗುವ ಮೂಲಕ ನಿರಾಶೆ ಅನುಭವಿಸಿದ್ದು, ಅವರು ಔಟ್ ಆದ ಬಗೆಗೆ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.














