Last Updated:
ಸೂಪರ್ ಓವರ್ನಲ್ಲಿ ಟೀಮ್ ಇಂಡಿಯಾದ ಸೋಲು ಕಂಡ ನಂತರ, ಭಾರತ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರರ ನಡುವೆ ವಾಗ್ವಾದ ನಡೆದಿದ್ದು, ಇದು ಕೈ ಕೈ ಮಿಲಾಯಿಸುವ ಮಟ್ಟಿಗೆ ಹೋದ ಘಟನೆ ನಡೆದಿದೆ.
ನವದೆಹಲಿ: ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A) ನಡುವಿನ ತ್ರೀಕೋನ ಸರಣಿ 4ನೇ ಪಂದ್ಯ ರೋಮಾಂಚಕವಾಗಿ ಅಂತ್ಯ ಕಂಡಿತು. ಸೂಪರ್ ಓವರ್ನಲ್ಲಿ (Super Over) ಅಂತ್ಯವಾದ ಈ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತು. ಈ ಪಂದ್ಯ ಕೇವಲ ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದು ಮಾತ್ರವಲ್ಲದೆ ಮೈದಾನದಲ್ಲಿ ಶ್ರೀಲಂಕಾ ಹಾಗೂ ಭಾರತ ನಡುವಿನ ಆಟಗಾರರ ನಡುವಿನ ಜಗಳಕ್ಕೂ ಕಾರಣವಾಯಿತು. ಸೂಪರ್ ಓವರ್ನಲ್ಲಿ ಟೀಮ್ ಇಂಡಿಯಾದ ಸೋಲು ಕಂಡ ನಂತರ, ಭಾರತ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರರ ನಡುವೆ ವಾಗ್ವಾದ ಮತ್ತು ಜಗಳ ನಡೆದಿದೆ. ಇದರಿಂದ ಮೈದಾನದಲ್ಲಿ ಒಂದು ಕ್ಷಣ ಉದ್ವಿಗ್ನತೆಗೆ ಸೃಷ್ಟಿಯಾಗಿತ್ತು.
ಶ್ರೀಲಂಕಾ ಎ ತಂಡ ಸೂಪರ್ ಓವರ್ ಗೆದ್ದ ನಂತರ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ಪೆವಿಲಿಯನ್ ಕಡೆಗೆ ಬರುತ್ತಿದ್ದಾಗ ಶ್ರೀಲಂಕಾ ತಂಡದ ಕೆಲವು ಆಟಗಾರರು ಚೆಪ್ಪಾಳೆ ತಟ್ಟುತ್ತಾ ಸೂರ್ಯಾಂಶ್ ಶೆಡ್ಗೆಯನ್ನ ರೇಗಿಸಿದ್ದಾರೆ. ಮೊದಲೇ ಮಂದ ಬೆಳಕಿನ ನಡುವೆಯೂ ಸೂಪರ್ ಓವರ್ ನಡೆಸಿದ್ದಕ್ಕೆ ಅಸಮಾಧಾನದಲ್ಲಿದ್ದ ವೈಭವ್, ಸೂರ್ಯಾಂಶ್ರನ್ನ ಕೆಣಕಿದ ಶ್ರೀಲಂಕಾದ ಕ್ರಿಕೆಟರ್ ವಿಶೇನ್ c ಹತ್ತಿರ ಬಂದು ವಾಗ್ವಾದ ನಡೆಸಿದ್ದಾರೆ. ಮಾತಿನ ಚಕಮಕಿ ಇಬ್ಬರ ಕೈ ಕೈ ಮಿಲಾಸುವ ಮಟ್ಟಿಗೆ ಹೋಗಿದೆ. ವೈಭವ್ ಸೂರ್ಯವಂಶಿ ವಿಶೇನ್ ಹಾಲಂಬಗೆಯನ್ನ ತಳ್ಳಿದ್ದಾರೆ. ಆತ ಕೂಡ ವೈಭವ್ರನ್ನ ತಳ್ಳಿದ್ದಾನೆ. ಪರಿಸ್ಥಿತಿ ಬಿಗಡಾಯಿಸುವುದನ್ನು ನೋಡಿದ ಸೀನಿಯರ್ ಆಟಗಾರ ಡಿಕ್ವೆಲ್ಲಾ ಹಾಗೂ ಇತರ ಶ್ರೀಲಂಕಾದ ಆಟಗಾರರು ತಕ್ಷಣ ಮಧ್ಯಪ್ರವೇಶಿಸಿ ಇಬ್ಬರನ್ನ ಬೇರ್ಪಡಿಸಿದ್ದಾರೆ. ಆದರೂ, ವೈಭವ್ ಅವರ ಕೋಪ ಕಡಿಮೆಯಾಗಲಿಲ್ಲ. ಅವರು ಎದುರಾಳಿ ಆಟಗಾರರ ಕಡೆ ಕೈ ತೋರಿಸಿ ನಿಂದಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಮಾತಿನ ಚಕಮಕಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪಂದ್ಯದ ಕೊನೆಯ ಕ್ಷಣಗಳಲ್ಲಿ ಕಳಪೆ ಬೆಳಕಿನ ಬಗ್ಗೆ ನಾಯಕ ತಿಲಕ್ ವರ್ಮಾ ಮತ್ತು ಅಂಪೈರ್ಗಳ ನಡುವೆ ನಡೆದ ದೀರ್ಘ ವಾದ ಮೈದಾನದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ಸೂಪರ್ ಓವರ್ನಲ್ಲಿ ಭಾರತ ಶ್ರೀಲಂಕಾದ 17 ರನ್ಗಳ ಗುರಿಯನ್ನು ತಲುಪಲು ವಿಫಲವಾದಾಗ, ಈ ಉದ್ವಿಗ್ನತೆ ಆಟಗಾರರ ನಡುವಿನ ಜಗಳಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಆದರೆ, ಕ್ರಿಕೆಟ್ ಮೈದಾನದಲ್ಲಿನ ಈ ಕಹಿ ಭಾವನೆ ಹೆಚ್ಚು ಕಾಲ ಉಳಿಯಲಿಲ್ಲ. ಪಂದ್ಯ ಮುಗಿದ ತಕ್ಷಣ ಎರಡೂ ತಂಡಗಳ ಆಟಗಾರರು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು ಮತ್ತು ಉತ್ಸಾಹದಿಂದ ಕೈಕುಲುಕಿದರು, ಇದರಿಂದಾಗಿ ಪಂದ್ಯವು ರೋಮಾಂಚಕಾರಿಯಾಗಿ ಕೊನೆಗೊಂಡಿತು. ತ್ರಿಕೋನ ಸರಣಿಯಲ್ಲಿ ಭಾರತದ ಸತತ ಎರಡನೇ ಸೋಲಾಗಿದೆ. ಟೀಮ್ ಇಂಡಿಯಾ ಹಿಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ವಿರುದ್ಧ 4 ರನ್ಗಳಿಂದ ಸೋಲು ಕಂಡಿತ್ತು. ಪ್ಲೇ ಆಫ್ ರೇಸ್ನಲ್ಲಿ ಉಳಿಯಲು ಭಾರತ ತಂಡ ಅಫ್ಘಾನ್ ವಿರುದ್ಧ ಗೆಲ್ಲಲೇಬೇಕಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ’ ತಂಡವು 265 ರನ್ಗಳಿಗೆ ಆಲೌಟ್ ಆಗಿ, ಶ್ರೀಲಂಕಾ ‘ಎ’ ತಂಡಕ್ಕೆ 266 ರನ್ಗಳ ಸಾಧಾರಣ ಗುರಿ ನೀಡಿತು. ಪ್ರತಿಯಾಗಿ ಶ್ರೀಲಂಕಾ ‘ಎ’ ತಂಡವು ಸದೀರ ಸಮರವಿಕ್ರಮ ಅವರ ಅರ್ಧಶತಕದ (93) ನೆರವಿನಿಂದ ನಿಗದಿತ ಓವರ್ಗಳಲ್ಲಿ ಸ್ಕೋರ್ ಸಮಬಲಗೊಳಿಸಿದ್ದರಿಂದ ಪಂದ್ಯವು ಸೂಪರ್ ಓವರ್ಗೆ ತಲುಪಿತು. ಸೂಪರ್ ಓವರ್ನಲ್ಲಿ ಶ್ರೀಲಂಕಾ 16 ರನ್ಗಳಿಸಿದ ಭಾರತವನ್ನು ಮಣಿಸಿದ ಶ್ರೀಲಂಕಾ ರೋಚಕ ಗೆಲುವು ತನ್ನದಾಗಿಸಿಕೊಂಡಿತು.













