Last Updated:
America-Iran War: ಅಮೆರಿಕ ಮತ್ತು ಇರಾನ್ ನಡುವೆ ಕಳೆದ ನಾಲ್ಕು ತಿಂಗಳಿಂದ ನಡೆಯುತ್ತಿದ್ದ ತೀವ್ರ ಸಂಘರ್ಷ ಅಂತಿಮವಾಗಿ ಅಂತ್ಯದ ಹಂತ ತಲುಪಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದ ವೇಳೆ ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ ಜಗತ್ತಿಗೆ ನೆಮ್ಮದಿಯ ಸುದ್ದಿ ನೀಡಿವೆ. ಅ ಕುರಿತ ವರದಿ ಇಲ್ಲಿದೆ.
America-Iran War: ಮಧ್ಯ ಪ್ರಾಚ್ಯದಲ್ಲಿ (Middle East) ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿದ್ದ ಭೀಕರ ಯುದ್ಧಕ್ಕೆ (War) ಕೊನೆಗೂ ತೆರೆ ಬಿದ್ದಿದ್ದು, ಉಭಯ ದೇಶಗಳು ಜಂಟಿಯಾಗಿ ಮಹತ್ವದ ತಿಳುವಳಿಕಾ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (J.D.Vance) ಮತ್ತು ಇರಾನ್ (Iran) ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೆರ್ ಗಲಿಬಾಫ್ ಅವರು ಸಹಿ ಹಾಕಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.
ನ್ಯೂಸ್ 18 ಇಂಗ್ಲೀಷ್ ವರದಿ ಮಾಡಿರುವಂತೆ, ಪ್ರಸ್ತುತ ಮೂರನೇ ಮಹಾಯುದ್ಧದ ಮುನ್ಸೂಚನೆಯಂತೆ ಭಾಸವಾಗುತ್ತಿದ್ದ ಯುದ್ಧವನ್ನ ಕೊನೆಗಾಣಿಸಲು ನಾಯಕರು ತಂತ್ರಜ್ಞಾನದ ನೆರವು ಪಡೆದಿದ್ದಾರೆ. ಅದರಂತೆ, ಮೂವರೂ ನಾಯಕರು ಈಗಾಗಲೇ ಈ ಒಪ್ಪಂದದ ಪತ್ರಕ್ಕೆ ಡಿಜಿಟಲ್ ಸಹಿ ಹಾಕಿದ್ದು, ಅದರ ಮುಂದುವರಿದ ಭಾಗವಾಗಿ, ಮುಂಬರು ಶುಕ್ರವಾರದಂದು ಸ್ವಿಟ್ಜರ್ಲೆಂಡ್‌ನ ಜಿನೆವಾದಲ್ಲಿ ಔಪಚಾರಿಕ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಖುದ್ದಾಗಿ ಭಾಗವಹಿಸಿ ಒಪ್ಪಂದವನ್ನು ಅಧಿಕೃತಗೊಳಿಸಲಿದ್ದಾರೆ ಎನ್ನಲಾಗಿದೆ.
ಮುಂದುವರೆದು, ಈ ಒಪ್ಪಂದದ ಅತ್ಯಂತ ಪ್ರಮುಖ ಅಂಶವೆಂದರೆ ಜಗತ್ತಿನ ಅತ್ಯಂತ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಸಂಪೂರ್ಣವಾಗಿ ಮುಕ್ತಗೊಳಿಸುವುದು. G7 ಶೃಂಗಸಭೆಗಾಗಿ ಫ್ರಾನ್ಸ್‌ಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮಾತನಾಡುತ್ತಾ, “ಈಗಾಗಲೇ ತೈಲ ತುಂಬಿದ ವಾಣಿಜ್ಯ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರವನ್ನು ಆರಂಭಿಸಿವೆ ಮತ್ತು ಬರುವ ಶುಕ್ರವಾರದ ವೇಳೆಗೆ ಇದು ಸಂಪೂರ್ಣವಾಗಿ ಮುಕ್ತವಾಗಲಿದೆ” ಎಂದು ಹೇಳಿದ್ದಾರೆ. ಅದರಂತೆ, ಯುದ್ಧದ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಜಾಗತಿಕ ತೈಲ ವ್ಯಾಪಾರವು ಇದರಿಂದಾಗಿ ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.
Jun 15, 2026 11:23 PM IST













