Vaibhav Sooryavanshi: ಮುಂಬೈ ಇಂಡಿಯನ್ಸ್​​ನಿಂದ ಸೂರ್ಯವಂಶಿಗೆ ಬಂಪರ್ ಆಫರ್? ರಾಜಸ್ಥಾನ ಫ್ರಾಂಚೈಸಿಗೆ ‘ಯೂನಿವರ್ಸಲ್ ಬೇಬಿ ಬಾಸ್’ ಗುಡ್ ಬೈ ಹೇಳ್ತಾರಾ? | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಸೂರ್ಯವಂಶಿ ಇತಿಹಾಸ ನಿರ್ಮಿಸಿದರು. ಇದಾದ ನಂತರ, ವೈಭವ್ ಸೂರ್ಯವಂಶಿ ಅವರಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಬಂಪರ್ ಆಫರ್ ಸಿಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಐಪಿಎಲ್ (IPL) 2026 ರ ಆವೃತ್ತಿಯಲ್ಲಿ ತಮ್ಮ ಬ್ಯಾಟಿಂಗ್ (Batting) ಮೂಲಕ ಎಲ್ಲಾ ದಾಖಲೆಗಳನ್ನು ಮುರಿಯುತ್ತಿರುವ 15 ವರ್ಷದ ರಾಜಸ್ಥಾನ ರಾಯಲ್ಸ್ (RR) ಓಪನರ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಹೆಸರು ಪ್ರಸ್ತುತ ದೇಶಾದ್ಯಂತ ಚರ್ಚೆಯಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಎಲಿಮಿನೇಟರ್ (Eliminator) ಪಂದ್ಯದಲ್ಲಿ ಸೂರ್ಯವಂಶಿ ಅವರು ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 12 ಸಿಕ್ಸರ್‌ಗಳೊಂದಿಗೆ 97 ರನ್ ಗಳಿಸಿದರು. ಈ ಮೂಲಕ ಸೂರ್ಯವಂಶಿ, ಕ್ರಿಸ್ ಗೇಲ್ (Chris Gayle) ಅವರ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿದರು. ಈ ಅದ್ಭುತ ಪ್ರದರ್ಶನದ ನಂತರ, ವೈಭವ್ ಅವರ ಫೇಮಸ್ ಜೊತೆಗೆ, ಕೆಲವು ಗಂಭೀರ್ ವಿಷಯಗಳ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂಬರುವ ಆವೃತ್ತಿಗಳಲ್ಲಿ ವೈಭವ್ ಸೂರ್ಯವಂಶಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಭಾರೀ ಆಫರ್ ನೀಡಿದೆ ಎಂದು ಟಿವಿ 9 ತೆಲುಗು ವರದಿ ಮಾಡಿದೆ.

ವೈಭವ್‌ಗೆ ಬಂಪರ್ ಆಫರ್?

ಮುಂದಿನ ಐಪಿಎಲ್ ಆವೃತ್ತಿಗಳಲ್ಲಿ ವೈಭವ್ ಸೂರ್ಯವಂಶಿ ಅವರನ್ನು ತಮ್ಮ ತಂಡಕ್ಕೆ ಸೆಳೆಯಲು ಮುಂಬೈ ಇಂಡಿಯನ್ಸ್ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಬಂಪರ್ ಆಫರ್ ನೀಡಿದೆ. ಎಂಐ ಮ್ಯಾನೇಜ್ಮೆಂಟ್ ವೈಭವ್‌ಗೆ ಮುಂಬೈನಲ್ಲಿ 30 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ಉಡುಗೊರೆಯಾಗಿ ನೀಡಿದೆ. ಎರಡೂ ಫ್ರಾಂಚೈಸಿಗಳ ನಡುವಿನ ಮಾತುಕತೆ ಕೂಡ ಕೊನೆಗೊಂಡಿದೆ ಎಂದು ವರದಿಯಾಗಿದೆ.

ಇದು ಸತ್ಯನಾ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಪೋಸ್ಟ್​​ನಲ್ಲಿ ಯಾವುದೇ ಸತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಾಗಲಿ ಅಥವಾ ವೈಭವ್ ಸೂರ್ಯವಂಶಿಯಾಗಲಿ ಇದರ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಐಪಿಎಲ್ ನಿಯಮಗಳ ಪ್ರಕಾರ, ತಂಡದಲ್ಲಿರುವ ಆಟಗಾರನಿಗೆ ಮತ್ತೊಂದು ಫ್ರಾಂಚೈಸಿಗೆ ಇಂತಹ ರಹಸ್ಯ ಆಫರ್​​ಗಳನ್ನು ನೀಡಲು ಅವಕಾಶವಿಲ್ಲ. ಆದರೆ ಈ ವದಂತಿ ಹೇಗೆ ಹುಟ್ಟಿಕೊಂಡಿತು? ಎಲ್ಲರ ಗಮನ ಸೆಳೆಯುತ್ತಿದೆ.

ಲಿಂಕ್ ಮಾಡಿದ್ದೆಲ್ಲಿ?

ವೈಭವ್ ಇತ್ತೀಚೆಗೆ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದರು. ಇದರ ಮೂಲ ಮೌಲ್ಯ ಸುಮಾರು 2.5 ಕೋಟಿಯಿಂದ 3 ಕೋಟಿ ರೂ.ಗಳಷ್ಟಿದೆ. ಇದನ್ನೇ ಗುರಿಯಾಗಿಸಿಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಭಿಯಾನ ಆರಂಭಿಸಿದ್ದಾರೆ. ಈ ಆಸ್ತಿ ಹೂಡಿಕೆಯನ್ನು ಮುಂಬೈ ಇಂಡಿಯನ್ಸ್ ಆಫರ್ ಆಗಿ ಪರಿವರ್ತಿಸಿ 3 ಕೋಟಿ ರೂ.ಗಳನ್ನು 30 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದಾರೆ. ಇದಲ್ಲದೆ, ಲಲಿತ್ ಮೋದಿ ಹೆಸರಿನಲ್ಲಿ ಕೆಲವು ನಕಲಿ ಪೋಸ್ಟ್‌ಗಳು ಎಕ್ಸ್‌ನಲ್ಲಿಯೂ ಕಾಣಿಸಿಕೊಂಡಿವೆ.

ಲಲಿತ್ ಮೋದಿ ರೀಟ್ವೀಟ್

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ, ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಪ್ರತಿಕ್ರಿಯಿಸಿದ್ದಾರೆ. ಅವರು ಟ್ವೀಟ್ ಅನ್ನು ರೀಟ್ವೀಟ್ ಮಾಡಿ ಈ ಎಲ್ಲಾ ಹೇಳಿಕೆಗಳು ಸಂಪೂರ್ಣವಾಗಿ ಅಸಂಬದ್ಧ ಮತ್ತು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ವೈಭವ್ ಮುಂಬೈ ಇಂಡಿಯನ್ಸ್ ಸೇರಲು ಬಯಸಿದರೆ, ಅವರನ್ನು ಅಧಿಕೃತವಾಗಿ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ ಎಂದು ಲಲಿತ್ ಮೋದಿ ಬರೆದಿದ್ದಾರೆ. ರಾಜಸ್ಥಾನ ರಾಯಲ್ಸ್ ಸೂರ್ಯವಂಶಿ ಅವರನ್ನು ಬಿಡುಗಡೆ ಮಾಡಿದರೂ ಸಹ, ಅವರು ಮತ್ತೆ ಸಂಪೂರ್ಣ ಹರಾಜು ಪ್ರಕ್ರಿಯೆಯ ಮೂಲಕ ಮತ್ತೊಂದು ಫ್ರಾಂಚೈಸಿಗೆ ಹೋಗಬೇಕಾಗುತ್ತದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Vaibhav Sooryavanshi: ಮುಂಬೈ ಇಂಡಿಯನ್ಸ್​​ನಿಂದ ಸೂರ್ಯವಂಶಿಗೆ ಬಂಪರ್ ಆಫರ್? ರಾಜಸ್ಥಾನ ಫ್ರಾಂಚೈಸಿಗೆ ‘ಯೂನಿವರ್ಸಲ್ ಬೇಬಿ ಬಾಸ್’ ಗುಡ್ ಬೈ ಹೇಳ್ತಾರಾ?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed