Last Updated:
ವೈಭವ್ ಸೂರ್ಯವಂಶಿ ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ಆಟಗಾರರಲ್ಲಿ ಒಬ್ಬರು. ವೈಭವ್ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ, ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ವೈಭವ್ ಸೂರ್ಯವಂಶಿಗಾಗಿ ರಣತಂತ್ರವನ್ನು ಹೆಣೆದಿರುವ ಬಗ್ಗೆ ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿ (Vaibhav Sooryavanshi) ಕಳೆದ ವರ್ಷ ಎಲ್ಲಾ ಸ್ವರೂಪಗಳಲ್ಲಿ ರನ್ ಗಳಿಸಿದ್ದಾರೆ. ಐಪಿಎ (IPL)ಲ್ 2026 ರಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಅವರಿಗೆ ಟೀಮ್ ಇಂಡಿಯಾ(Team India)ದ ಟಿ20ಐ ತಂಡದಲ್ಲಿ ಸ್ಥಾನ ತಂದುಕೊಟ್ಟಿತು. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ವೈಭವ್ ಅವರಿಗೆ ಪಾದಾರ್ಪಣೆ (Debut) ಮಾಡುವ ಅವಕಾಶ ಸಿಗಲಿಲ್ಲ. ವೈಭವ್ ಈಗ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ (Harry Brook) ಟೀಮ್ ಮ್ಯಾನೇಜ್ಮೆಂಟ್ ವೈಭವ್ ಸೂರ್ಯವಂಶಿಯನ್ನು ಕಟ್ಟಿ ಹಾಕಲು ರಣತಂತ್ರವನ್ನು ರೂಪಿಸಿದೆ ಎಂದು ಬಹಿರಂಗಪಡಿಸಿದ್ದಾರೆ.
ಭಾರತ ವಿರುದ್ಧದ ಮೊದಲ ಟಿ20ಐಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹ್ಯಾರಿ ಬ್ರೂಕ್ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡಿದರು. “ವೈಭವ್ ಸೂರ್ಯವಂಶಿ ಬಹಳ ಪ್ರತಿಭಾನ್ವಿತ ಆಟಗಾರ. ಅವರು ಕಳೆದ ಒಂದೂವರೆ ವರ್ಷದಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ನಮಗೆ ನಮ್ಮದೇ ಆದ ತಂತ್ರವಿದೆ. ಅದು ವೈಭವ್ ವಿರುದ್ಧ ಕೆಲಸ ಮಾಡುತ್ತದೆ ಎಂದು ನಾವು ಅಂದುಕೊಂಡಿದ್ದೇವೆ. ಅವನು ತನ್ನ ಅತ್ಯುತ್ತಮ ಕ್ರಿಕೆಟ್ ಆಡದಂತೆ ತಡೆಯಲು ನಾವು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದೇವೆ” ಎಂದು ಬ್ರೂಕ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪ್ರವಾಸಕ್ಕೂ ಮುನ್ನ ಐರ್ಲೆಂಡ್ ಟೆಸ್ಟ್ ಸರಣಿಯಲ್ಲಿ ಆಡುವ ಸುವರ್ಣಾವಕಾಶ ವೈಭವ್ ಸೂರ್ಯವಂಶಿಗೆ ಸಿಕ್ಕಿತ್ತು. ಆದರೆ, ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಹೊರಗಿಡಲು ನಿರ್ಧರಿಸಿತು. ವೈಭವ್ ಅನುಪಸ್ಥಿತಿಯಿಂದ ಅಭಿಮಾನಿಗಳು ತೀವ್ರ ನಿರಾಶೆಗೊಂಡರು. ಈಗ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐನಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿ ಆಡುವ ನಿರೀಕ್ಷೆಯಿದೆ.
ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ಸ್ಯಾಮ್ಸನ್ ಕಳಪೆ ಪ್ರದರ್ಶನ ನೀಡಿದರು. ಮೊದಲ ಪಂದ್ಯದಲ್ಲಿ ಕೇವಲ 5 ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ಔಟಾದರು. ಪರಿಣಾಮವಾಗಿ, ಅವರ ಸ್ಥಾನ ಅಪಾಯದಲ್ಲಿದೆ. ಅಭಿಷೇಕ್ ಶರ್ಮಾ ಅವರೊಂದಿಗೆ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಬಹುದು.
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ಸಿ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್ ಮತ್ತು ಪ್ರಿನ್ಸ್ ಯಾದವ್.
Jul 01, 2026 12:32 PM IST













