ಕ್ರೀಡಾ ಕ್ಷೇತ್ರಕ್ಕೆ ವಯಸ್ಸು ಅಡ್ಡಿಯಲ್ಲ, ಮೈಸೂರಿಗೆ ಕೀರ್ತಿ ತಂದ ‘ಸೂಪರ್ ವುಮನ್’! | ಮೈಸೂರು ನ್ಯೂಸ್ (Mysuru News) | ACTPnews

ಇಲ್ಲಿ


Last Updated:

ಮೈಸೂರು ಶೂಟರ್ ಜಮ್ಮಡ ಪ್ರೀತ್ ಅಪ್ಪಯ್ಯ 14ನೇ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್‍ಶಿಪ್ 2026ರಲ್ಲಿ ಎರಡು ಚಿನ್ನ, ರಾಷ್ಟ್ರೀಯ ದಾಖಲೆ, ಮೌಂಟ್ ಕಿಲಿಮಂಜಾರೊ ಮತ್ತು ಮೌಂಟ್ ಎಲ್ಬ್ರಸ್ ಏರಿಕೆ ಸಾಧನೆ.

+

ಇಲ್ಲಿ ವಿಡಿಯೋ ನೋಡಿ

ಮೈಸೂರು: ಕ್ರೀಡಾ (Sports) ಕ್ಷೇತ್ರಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು 52 ವರ್ಷದ ಮೈಸೂರಿನ (Mysuru) ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ನಡೆದ 14ನೇ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್‍ಶಿಪ್-2026ರಲ್ಲಿ ಇವರು ತೋರಿದ ಸಾಧನೆ ಇದೀಗ ಕ್ರೀಡಾ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಏಕಕಾಲಕ್ಕೆ ಎರಡು ಚಿನ್ನದ ಪದಕ

ಬೆಂಗಳೂರಿನ ವಿಶ್ವವಿದ್ಯಾಲಯದ ಶೂಟಿಂಗ್ ರೇಂಜ್‍ನಲ್ಲಿ ನಡೆದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ, ಪ್ರೀತ್ ಅಪ್ಪಯ್ಯ ಅವರು .177 ಓಪನ್ ಸೈಟ್ 10 ಮೀಟರ್ ಏರ್ ರೈಫಲ್ ಸೀನಿಯರ್ ಮಾಸ್ಟರ್ ವುಮೆನ್ ಹಾಗೂ ಮಾಸ್ಟರ್ ವುಮೆನ್ ವಿಭಾಗದಲ್ಲಿ ಭಾಗವಹಿಸಿದ್ದರು. ಕೇವಲ ಪದಕ ಗೆಲ್ಲುವುದಷ್ಟೇ ಅಲ್ಲ, ರಾಷ್ಟ್ರೀಯ ದಾಖಲೆ ನಿರ್ಮಿಸುವ ಮೂಲಕ ಚಿನ್ನದ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೈಸೂರು ಸ್ಪೋಟ್ರ್ಸ್ ಶೂಟಿಂಗ್ ಅಕಾಡೆಮಿಯ ತರಬೇತುದಾರ ಹೆಚ್.ಎಸ್. ವಿವೇಕ್ ಅವರ ಮಾರ್ಗದರ್ಶನದಲ್ಲಿ ಅವರು ತೋರಿದ ಶಿಸ್ತು ಮತ್ತು ಏಕಾಗ್ರತೆ ಇಂದು ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿದೆ.

ಸಾಹಸಗಳ ಸರದಾರ

ಪ್ರೀತ್ ಅಪ್ಪಯ್ಯ ಅವರ ಸಾಹಸ ಕೇವಲ ಶೂಟಿಂಗ್‍ಗೆ ಸೀಮಿತವಾಗಿಲ್ಲ. ಇವರು ಪರ್ವತಾರೋಹಣದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. 2023ರಲ್ಲಿ ಆಫ್ರಿಕಾದ ಅತ್ಯಂತ ಎತ್ತರದ ಮೌಂಟ್ ಕಿಲಿಮಂಜಾರೊ ಹಾಗೂ 2024ರಲ್ಲಿ ರಷ್ಯಾದ ಮೌಂಟ್ ಎಲ್ಬ್ರಸ್ ಶಿಖರವನ್ನು ಏರುವ ಮೂಲಕ ತಮ್ಮ ಕಠಿಣ ಮನೋಬಲವನ್ನು ಪ್ರದರ್ಶಿಸಿದ್ದಾರೆ. ಓಪನ್ ಸೈಟ್ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಕೊಡವತಿ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆ ಕೂಡ ಇವರದ್ದು.
ಜವಾಬ್ದಾರಿ ಮತ್ತು ಸಾಧನೆ

ವಕೀಲ ಜಮ್ಮಡ ಎಂ. ಅಯ್ಯಣ್ಣ ಅವರ ಪತ್ನಿಯಾಗಿ, ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಲೇ ಕ್ರೀಡೆಯಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಅಚ್ಚರಿ ಹಾಗೂ ಸ್ಫೂರ್ತಿದಾಯಕ. ನಾಗರಾಜ್ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆಯಲ್ಲಿಯೂ ಎರಡು ಚಿನ್ನ ಗೆದ್ದಿರುವ ಇವರು, ಇದೀಗ ದಕ್ಷಿಣ ವಲಯದ ಶೂಟಿಂಗ್ ಸ್ಪರ್ಧೆಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports