Bald Headed Crow: ಬೋಳು ತಲೆಯೊಂದಿಗೆ ಕಾಣಿಸಿದ ಕಾಗೆ, ಇದು ಅಪಶಕುನ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳಿದ್ದೇನು? | ಜ್ಯೋತಿಷ್ಯ | ACTPnews

News18


Last Updated:

ಬೋಳು ತಲೆಯ ಕಾಗೆ ಕಾಣಿಸಿಕೊಂಡ ಘಟನೆ, ತಜ್ಞರು ಇದು ಒಂದು ಸಹಜ ಪ್ರಕ್ರಿಯೆ ಎಂದು ಹೇಳಿದ್ದು, ಮೂಢನಂಬಿಕೆ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

News18
News18

ನಮ್ಮ ಸುತ್ತಮುತ್ತ ಪ್ರತಿದಿನ ಕಾಣುವ ಪಕ್ಷಿಗಳಲ್ಲಿ (Birds) ಒಂದು ಕಾಗೆ (Crow). ಆದರೆ ಒಂದು ದಿನ ಆಕಸ್ಮಿಕವಾಗಿ ತಲೆಯ ಮೇಲೆ ಕೂದಲು ಇಲ್ಲ, ಬೋಳು ತಲೆಯೊಂದಿಗೆ ಕಾಗೆ ನಿಮ್ಮ ಎದುರು ಪ್ರತ್ಯಕ್ಷವಾದರೆ, ಖಂಡಿತ ಎಲ್ಲರೂ ಅಚ್ಚರಿಗೆ ಒಳಗಾಗುತ್ತಾರೆ. ಕೆಲವರು ಏನೋ ಕೆಟ್ಟದ್ದು ಸಂಭವಿಸಲಿದೆ ಅಂತ ಭಾವಿಸುತ್ತಾರೆ, ಏಕೆಂದರೆ ಹಲವರು ಇದನ್ನು ಅಪಶಕುನ (Ominous) ಅಂತಲೇ ಭಯಪಡುತ್ತಾರೆ. ಇಂತಹದ್ದೇ ಘಟನೆಯೊಂದು ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಜಡ್ಚರ್ಲದಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯ ಬೊಟಾನಿಕಲ್ ಗಾರ್ಡನ್ (Botanical Garden) ಬಳಿ ಅಪರೂಪದ ಕಾಗೆಯೊಂದು ಕಾಣಿಸಿಕೊಂಡು ಎಲ್ಲರನ್ನು ಅಚ್ಚರಿಗೆ ಒಳಪಡಿಸಿದೆ.

ಪ್ರತಿ ಕಣ್ಣಿಗೆ ಕಾಣಿಸುವ ಕಾಗೆ, ಒಂದು ದಿನ ತಲೆಯ ಮೇಲೆ ರೆಕ್ಕೆ ಇಲ್ಲದೇ ಬೋಳು ತಲೆಯೊಂದಿಗೆ ಕಾಣಿಸಿದೆ? ಹಲವರು ಇದನ್ನು ವಿಚಿತ್ರವಾಗಿ ನೋಡಿದ್ದರು. ಮತ್ತೆ ಕೆಲವರು ಇದು ಅಶುಭದ ಸಂಕೇತ ಎಂದೇ ಹೇಳಿದ್ದರು. ಆದರೆ ಇದಕ್ಕೆ ಯಾವುದೇ ಮೂಢನಂಬಿಕೆಯೊಂದಿಗೂ ಸಂಬಂಧ ಇಲ್ಲ, ಸಂಪೂರ್ಣವಾಗಿ ಇದು ವೈಜ್ಞಾನಿಕ ಕಾರಣದಿಂದಲೇ ಈ ರೀತಿ ಆಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಟಿವಿ9 ತೆಲುಗು ವರದಿ ಮಾಡಿದೆ.

ಚರ್ಚೆಗೆ ಕಾರಣವಾಯ್ತು ಬೋಳು ತಲೆಯ ಕಾಗೆ

ಮೊನ್ನೆ ಸಂಜೆ ಜಡ್ಚರ್ಲಾದ ಡಾ. ಬುರ್ಗುಲ ರಾಮಕೃಷ್ಣ ರಾವ್ ಸರ್ಕಾರಿ ಪದವಿ ಕಾಲೇಜಿನ ಸಸ್ಯೋದ್ಯಾನದಲ್ಲಿ ಬೋಳು ಕೂದಲಿನ ಕಾಗೆ ಕಾಣಿಸಿಕೊಂಡಿದ್ದು, ಅಲ್ಲಿನ ಸ್ಥಳೀಯರನ್ನು ಅಚ್ಚರಿಗೊಳಿಸಿತು. ಕಾಗೆಯನ್ನು ನೋಡಿದ ಅನೇಕರು ಅದನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದರು. ಇದರೊಂದಿಗೆ, ಈ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ತಜ್ಞರು ಹೇಳುತ್ತಿರೋದು ಏನು?

ಇನ್ನು, ಕಾಗೆ ತಲೆ ಬೋಳು ಆಗಿರುವ ಹಿಂದಿನ ಕಾರಣವನ್ನು ಡಾ ಬಿ ಸದಾಶಿವಯ್ಯ ಅವರು ಪೂರ್ತಿ ಮಾಹಿತಿಯೊಂದಿಗೆ ವಿವರಿಸಿದ್ದಾರೆ. ಕಾಗೆಗಳಲ್ಲಿ ಬೋಳು ತಲೆ ಕಾಣಿಸಿಕೊಳ್ಳಲು ಕಾರಣ ಮೊಲ್ಟಿಂಗ್ ಎಂಬ ಸಹಜ ಪ್ರಕ್ರಿಯೆ ಎಂದು ಹೇಳಿದ್ದಾರೆ. ಇಂತಹ ಸಮಯದಲ್ಲಿ ಕಾಗೆಗಳ ಹಳೆಯ ರೆಕ್ಕೆಗಳು ಉದುರಿ ಹೋಗಿ ಹೊಸ ಗರಿಗಳು ಮೂಡುತ್ತವೆ. ಹೊಸ ಗರಿಗಳು ಸಂಪೂರ್ಣವಾಗಿ ಬೆಳೆಯುವವರೆಗೂ ತಲೆ ಮತ್ತು ಕುತ್ತಿಗೆ ಭಾಗ ಬೋಳಾಗಿ ಕಾಣುತ್ತದೆ ಅಷ್ಟೇ. ಇದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದ್ದಾರೆ. ಆದರೆ ಎಲ್ಲಾ ಸಂದರ್ಭದಲ್ಲಿಯೂ ಇದೇ ಕಾರಣ ಅಂತ ಹೇಳೋದು ತಪ್ಪು ಎಂದು ಡಾಕ್ಟರ್ ತಿಳಿಸಿದ್ದಾರೆ.

ಪಕ್ಷಿಗಳಲ್ಲಿ ಕಾಣಿಸಿಕೊಳ್ಳುವ ಪರಾವಲಂಬಿಗಳು, ಶಿಲೀಂಧ್ರ, ವೈರಸ್, ಕೆಲ ರೋಗಗಳು, ಅಪೌಷ್ಟಿಕತೆ, ಮಾಲಿನ್ಯ ಹಾಗೂ ಇತರೆ ಕಾಗೆಗಳೊಂದಿಗೆ ಕಾದಾಟ ನಡೆಸಿದ ಸಂದರ್ಭದಲ್ಲಿಯೂ ಗರಿಗಳು ಉದುರುವ ಸಾಧ್ಯತೆ ಇದೆ ಎಂದು ಡಾಕ್ಟರ್ ವಿವರಣೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೂಢನಂಬಿಕೆಗಳನ್ನು ನಂಬಬೇಡಿ!

ಬೋಳು ತಲೆಯೊಂದಿಗೆ ಕಾಗೆ ಏನಾದರೂ ಕಾಣಿಸಿದರೆ ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಇದು ಯಾವುದೇ ಅಶುಭದ ಸಂಕೇತ ಅಲ್ಲ. ಈ ರೀತಿ ಭಾವಿಸುವುದು ಕೇವಲ ಮೂಢನಂಬಿಕೆ ಅಷ್ಟೇ. ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ ಮಾತ್ರ. ಇದನ್ನು ವೈಜ್ಞಾನಿಕವಾಗಿ ಭಾವಿಸಬೇಕು ಎಂದು ಡಾಕ್ಟರ್ ಸೂಚನೆ ನೀಡಿದ್ದಾರೆ. ಏನೇ ಆದರೂ ಬೋಳು ತಲೆಯ ಕಾಗೆ ಕಾಣಿಸಿಕೊಂಡು ಎಲ್ಲರ ಕುತೂಹಲವನ್ನು ಹೆಚ್ಚಿಸಿದೆ.

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports