Last Updated:
ಆ ಒಂದು ಸೀನ್ ಅಲ್ಲಿ ಚಪ್ಪಲಿ ಏಟು ಸರಿಯಾಗಿಯೇ ಕೆನ್ನೆಗೆ ಬಿತ್ತು. ಅವರು ನಿಜವಾಗಲೂ ಹೊಡೆಯೋದಿಲ್ಲ ಅಂದುಕೊಂಡಿದ್ದೆ. ಆದರೆ, ಏಟು ನಿಜವಾಗಲಿಯೇ ಬಿತ್ತು. ಹೀಗೆ ಮೇಘನಾ ಶೆಟ್ಟಿ ಆ ಘಟನೆಯನ್ನ ನೆನಪಿಸಿಕೊಂಡಿದ್ದಾರೆ. ಯಾವ ಚಿತ್ರ? ಹೊಡೆದವರು ಯಾರು? ಈ ಎಲ್ಲ ವಿವರ ಇಲ್ಲಿದೆ ಓದಿ.
ಮೇಘಾ ಶೆಟ್ಟಿ (Megha Shetty) ಹೇಳ್ತಾನೇ ಇದ್ದರು. ಪಕ್ಕದಲ್ಲಿ ವಿನಯ್ ರಾಜಕುಮಾರ್ (Vinay Rajkumar) ಕುಳಿತಿದ್ದರು. ಇನ್ನೊಂದು ಪಕ್ಕದಲ್ಲಿ ಲೂಸ್ ಮಾದ ಯೋಗಿ ಇದ್ದರು. ಇವರ ನಡುವೆ ಕುಳಿತ ಮೇಘಾ ಶೆಟ್ಟಿ ತಮಗೆ ಬಿದ್ದ ಚಪ್ಪಲಿ ಏಟಿನ ಕತೆ ಹೇಳ್ತಾ ಇದ್ದರು. ಗ್ರಾಮಾಯಣ ಚಿತ್ರದಲ್ಲಿ (Graamaayana Movie) ಎಲ್ಲವು ರಫ್ ಆಗಿಯೇ ಇದೆ. ಹಳ್ಳಿಗಾಡಿನ ಕತೆ ಇದಾಗಿದೆ. ದೇವನೂರು ಚಂದ್ರು (Devanuru Chandru) ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರ ಡೈರೆಕ್ಷನ್ ಅಲ್ಲಿ ಬಂದ ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರೇ ನಟಿಸಿದ್ದಾರೆ. ಇವರ ಜೊತೆಗೆ ನಟಿಸಿದ ಅನುಭವವನ್ನ ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ. ಯುವರಾಜ್ ಕುಮಾರ್ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇವರ ಈ ಮಾತುಗಳ ಒಂದು ಸ್ಟೋರಿ ಇಲ್ಲಿದೆ ಓದಿ.
3 ಬಾರಿ ಚಪ್ಪಲಿ ಏಟು
ಮೇಘಾ ಶೆಟ್ಟಿ ಈ ದೃಶ್ಯಕ್ಕಾಗಿಯೇ ರೆಡಿ ಕೂಡ ಆಗಿದ್ದರು. ಎಲ್ಲವೂ ಓಕೆ ಅನಿಸಿದ್ಮೇಲೆ ಟೇಕ್‌ಗೂ ಬಂದರು. ಆದರೆ, ಇವರು ನಿರೀಕ್ಷೆ ಮಾಡಿರಲೇ ಇಲ್ಲ. ಅದು ಹವಾಯಿ ಚಪ್ಪಲಿಯ ಏಟು ಸರಿಯಾಗಿಯೇ ಬೀಳ್ತದೆ ಅಂತೂ ಅಂದುಕೊಂಡಿರಲಿಲ್ಲ. ಆದರೆ, ಸರಿಯಾಗಿಯೇ ಬಿದ್ದಿತ್ತು ನೋಡಿ.
ಬಾಲ ರಾಜವಾಡಿ ಅವರು ಆ ಒಂದು ಸೀನ್ ಅಲ್ಲಿ ತುಂಬಾನೆ ಇನ್ವಾಲ್ವ್ ಆಗಿದ್ದರು. ಅದೆಷ್ಟು ಅಂದರೆ, ನಿಜವಾಗಲೂ ಮೇಘಾ ಶೆಟ್ಟಿ ಅವರಿಗೆ ಹೊಡೆದೇ ಬಿಟ್ಟಿದ್ದರು.
ಈ ಎಲ್ಲ ಕಲಾವಿದರು ಆ ಯಾ ಸೀನ್‌ಗೆ ಅದೆಷ್ಟು ಇನ್ವಾಲ್ವ್ ಆಗ್ತಾರೆ ಅನ್ನೋದು ತಿಳಿಯಿತು ಅಂತಲೆ ಕೆನ್ನೆ ಹಿಡಿದುಕೊಂಡೇ ಮೇಘಾ ಶೆಟ್ಟಿ ಮಾತನಾಡಿದ್ದಾರೆ ನೋಡಿ.
ವಿನಯ್ ರಾಜಕುಮಾರ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆದರೆ, ಇವರ ಮಾತು ಮತ್ತು ಕಲಾವಿದ ಬೇರೇನೆ ನೋಡಿ. ಟೆನ್ ಅಂತ ಈ ಹಿಂದೆ ವಿನಯ್ ಒಂದು ಚಿತ್ರ ಮಾಡಿದ್ದಾರೆ.
ಕೆನ್ನೆ ಮೇಲೆ ಚಪ್ಪಲಿ ಏಟು
ಈ ಚಿತ್ರದಲ್ಲಿ ವರ್ಕೌಟ್ ಮಾಡುವ ದೃಶ್ಯ ಬರುತ್ತದೆ. ಆಗ ಗೋಪಾಲ ಕೃಷ್ಣ ದೇಶಪಾಂಡೆ ಅವರು ಹೊಟ್ಟೆಗೆ ಹೊಡೆಯುವ ದೃಶ್ಯವೂ ಇತ್ತು.
ಆದರೆ, ಮೊದಲು ಒಂದೆರಡು ಬಾರಿ ಇವರು ನಿಧಾನಕ್ಕೆ ಹೊಡೆದರು. ಆದರೆ, 5 ಮತ್ತು 6 ಅಂತ ಕೌಂಟ್ ಬಂದಾಗ ಏಟು ಜೋರಾಗಿಯೇ ಬಿತ್ತು ಅನ್ನೋದನ್ನ ಹೇಳಿಕೊಂಡಿದ್ದಾರೆ.
ಗ್ರಾಮಾಯಣ ಚಿತ್ರದಲ್ಲಿ ರಂಗಭೂಮಿಯ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಇವರ ಅಭಿನಯ ನೋಡಿಯೇ ವಿನಯ್ ಮತ್ತು ಲೂಸ್ ಮಾದ ಯೋಗಿ ಶಾಕ್ ಆಗಿದ್ದರು.
ಇವರ ಮುಂದೆ ನಾವು ಏನೂ ಅಲ್ಲ. ಇವರೆಲ್ಲ ನಮ್ಮನ್ನ ತಿಂದು ಹಾಕ್ತಾರೆ ಅಂತಲೇ ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯವನ್ನ ಸುದ್ದಿ ಮನೆ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿಯೇ ಇವರೆಲ್ಲ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













