Last Updated:
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಓಂ ಚಿತ್ರದ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಚಿತ್ರದ ಕಥೆ ಓಕೆ ಆದ್ಮೇಲೂ ಉಪೇಂದ್ರ ಅವರು ಒಂದು ತಿಂಗಳು ಟೈಮ್ ಕೇಳಿದ್ದರು. ಯಾಕೆ ಅನ್ನುವ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ.
ಓಂ ಚಿತ್ರದ (OM Movie) ಕಥೆ ಫೈನಲ್ ಆಗಿತ್ತು. ರಾಜಕುಮಾರ್ (Rajkumar) ಅವರು ಒಪ್ಪಿಕೊಂಡಿದ್ದರು. ರಾಜಕುಮಾರ್ ಅವರ ಸಹೋದರ ವರದಪ್ಪನವರು ಓಕೆ ಹೇಳಿದ್ದರು. ಪಾರ್ವತಮ್ಮನವರೂ ಓಂ ಚಿತ್ರದ ಕಥೆ ಮೆಚ್ಚಿಕೊಂಡಿದ್ದರು. ಆದರೂ, ಉಪೇಂದ್ರ (Upendra) ಒಂದು ತಿಂಗಳು ಟೈಮ್ ತೆಗೆದುಕೊಂಡರು. ಚಿತ್ರದ ಕಥೆ ಮೇಲೆ ಒಂದಷ್ಟು ಕೆಲಸ ಮಾಡ್ಬೇಕು ಅಂತ ಟೈಮ್ ತೆಗೆದುಕೊಂಡಿದ್ದರು. ಕೆಲಸವನ್ನು ಮಾಡ್ತಾ ಇದ್ದರು. ತಮ್ಮ ಮನದಲ್ಲಿದ್ದ ಡೌಟ್ಸ್ ಅನ್ನ ಕ್ಲಿಯರ್ ಮಾಡಿಕೊಳ್ಳುತ್ತಿದ್ದರು. ಆದರೆ, ವರದಪ್ಪನವರು ಒಂದು ಪ್ರಶ್ನೆ ಕೇಳಿದರು. ಆ ಪ್ರಶ್ನೆ ಕೇಳಿದ್ಮೇಲೆ ಉಪೇಂದ್ರ (Upendra) ಅವರು ಶಾಕ್ ಆದರು. ಅದೇನು ಅನ್ನೋದು ಮುಂದೆ ಇದೆ.
ಓಂ ಚಿತ್ರದಲ್ಲಿ ರಾಜಕುಮಾರ್ ಅವರು ಹಾಡಿರೋ ಒಂದು ಹಾಡಿದೆ. ಈ ಹಾಡಿನಲ್ಲಿ ಓ ಗುಲಾಬಿಯೇ ಅನ್ನುವ ಪದವು ಇದೆ. ಈ ಗೀತೆ ಇಡೀ ಚಿತ್ರದ ಪ್ರಮುಖ ಘಟ್ಟದಲ್ಲಿಯೇ ಬರುತ್ತದೆ.
ಓ ಗುಲಾಬಿಯೇ…
ಉಪೇಂದ್ರ ಅವರು ಓ ಗುಲಾಬಿ ಹಾಡು ವಿಚಾರದಲ್ಲಿಯೇ ಸ್ಟಕ್ ಆಗಿದ್ದರು. ಇದನ್ನ ಯಾರಿಗೂ ಹೇಳಿರಲಿಲ್ಲ. ಆದರೆ, ವರದಪ್ಪನವರು ಬಂದು ಹೇಳಿದರು.
ನನಗೆ ಗೊತ್ತು ನೀವು ಚಿತ್ರದ ಕಥೆಯ ಯಾವ ಜಾಗದಲ್ಲಿ ಸ್ಟಕ್ ಆಗಿದ್ದಿರಾ ಅಂತ? ಅದು ಓ ಗುಲಾಬಿಯೇ ಹಾಡಿನ ಜಾಗದಲ್ಲಿಯೇ ಅಲ್ವೇ? ಅಂತಲೇ ಕೇಳಿದರು. ಈ ಮಾತು ಕೇಳಿದ ಉಪೇಂದ್ರ ಅವರಿಗೆ ಶಾಕ್ ಕೂಡ ಆಗಿತ್ತು. ನನ್ನ ಮನಸ್ಸಿನಲ್ಲಿರೋದು ಇವರಿಗೆ ಹೇಗೆ ಗೊತ್ತಾಯಿತು ಅಂತಲೂ ಯೋಚನೆ ಮಾಡಿದರು.
ಓಂ ಚಿತ್ರದ ಓ ಗುಲಾಬಿ ಹಾಡು ಬರುವ ಮುಂಚೆ ಒಂದು ಸೀನ್ ಇಟ್ಟರು. ಕಥೆ ಡ್ರಾಪ್ ಆಗದ ರೀತಿನೇ ಈ ಸೀನ್ ಇತ್ತು.ಈ ದೃಶ್ಯ ಆದ್ಮೇಲೆ ಓ ಗುಲಾಬಿ ಹಾಡು ಶುರು ಆಗುತ್ತದೆ.
ಉಪ್ಪಿ “ಓ ಗುಲಾಬಿ” ಟಾಕ್; ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ?
ಈ ಹಾಡು ನಿಜಕ್ಕೂ ಚೆನ್ನಾಗಿತ್ತು. ಚಿತ್ರದ ಇತರ ಹಾಡುಗಳು ಜನರಿಗೆ ಇಷ್ಟ ಆದವು. ಚಿತ್ರದ ಈ ಒಂದು ವಿಷಯವನ್ನ ಉಪೇಂದ್ರ ಅವರು ರಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯಸ್ ಪಾಡ್‌ಕಾಸ್ಟ್ ಅಲ್ಲಿ ಹಂಚಿಕೊಂಡಿದ್ದಾರೆ.
ಓಂ ಚಿತ್ರದ ಟೈಟಲ್ ಹೇಗೆ ಬಂದು ಅನ್ನುವ ಕುತೂಹಲ ಇದ್ದೇ ಇದೆ. ಆದರೆ, ಉಪೇಂದ್ರ ಅವರು ತಮ್ಮ ಈ ಚಿತ್ರಕ್ಕೆ “ಸತ್ಯ” ಅನ್ನುವ ಟೈಟಲ್ ಇಡಬೇಕು ಅಂತ ಅಂದುಕೊಂಡಿದ್ದರು.
ರಾಜಕುಮಾರ್ ಅವರು ಓಂ ಚಿತ್ರದ ಚಿತ್ರಕಥೆಯ ಮೇಲೆ ಓಂ ಅಂತ ಕುಂಕುಮದಿಂದ ಬರೆದರು. ಇಡೀ ತಂಡಕ್ಕೆ ಮನಸಾರೆ ಶುಭ ಕೋರಿದರು.
ಈ ಒಂದು ಓಂ ಅನ್ನೋದನ್ನ ನೋಡಿದ ಉಪೇಂದ್ರ ಅವರು, ಇದೇ ಟೈಟಲ್ ಅಂತ ಫೈನಲ್ ಮಾಡಿದರು. ಹೀಗೆ ಓಂ ಅನ್ನುವ ಹೆಸರು ಚಿತ್ರಕ್ಕೆ ಬಂತು ಅನ್ನುವ ಮಾಹಿತಿನೂ ಸಿಗುತ್ತದೆ.
ಹಾಗೆ ಓಂ ಕನ್ನಡದ ಮಾಸ್ಟರ್ ಪೀಸ್ ಸಿನಿಮಾನೇ ಆಗಿದೆ. ಇಲ್ಲಿವರೆಗೂ ಕನ್ನಡದಲ್ಲಿ ಬಂದ ರೌಡಿಸಂ ಚಿತ್ರಗಳಿಗೆ ಈ ಚಿತ್ರ ಸ್ಪೂರ್ತಿ ಅಂದರೆ ತಪ್ಪೇ ಇಲ್ಲ ಅಂತಲೆ ಹೇಳಬಹುದು.
Bangalore [Bangalore],Bangalore,Karnataka













