TVK-Vijay: ಭಾರೀ ಟ್ರೋಲ್ ಆಗ್ತಿದೆ ಸಿಎಂ ವಿಜಯ್ ಆಪ್ತನ ನಡೆ! ಸಚಿವ ಮಾಡಿದ ಕೆಲಸದಿಂದ ದಳಪತಿಗೆ ಕಪ್ಪು ಚುಕ್ಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿಜಯ್


Last Updated:

Adhav Arjuna: ವಿಜಯ್ ಅವರ ಅತ್ಯಾಪ್ತನಿಂದಾಗಿ ದಳಪತಿಗೆ ಬಂತಾ ಮೊದಲ ಕಪ್ಪು ಚುಕ್ಕೆ? ಟಿವಿಕೆ ಶಾಸಕ ಮಾಡಿದ ಆ ಒಂದು ಕೆಲಸ ಭಾರೀ ಟ್ರೋಲ್.

ವಿಜಯ್
ವಿಜಯ್

ತಮಿಳುನಾಡಿನಲ್ಲಿ (Tamil Nadu) ವಿಜಯ್ (Vijay) ಅವರು ಸಿಎಂ ಆಗಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ (TVK) ಪಕ್ಷ ಮೆಜಾರಿಟಿ ಪಡೆದು ಅಧಿಕಾರ ವಹಿಸಿಕೊಂಡಿದೆ. ನಟ ವಿಜಯ್ ಅವರು ಈಗ ಸಿಎಂ ವಿಜಯ್ ಆಗಿದ್ದಾರೆ.

ವಿಜಯ್ ಅವರು ಸಿಎಂ ಆದಾಗಿನಿಂದ ಮಾಡಿದ ಬಹಳಷ್ಟು ಕೆಲಸಗಳು ವ್ಯಾಪಕವಾಗಿ ಮೆಚ್ಚುಗೆ ಗಳಸುತ್ತಲೇ ಇದೆ. ಶಾಲೆ, ಕಾಲೇಜು, ದೇವಸ್ಥಾನ, ಮಸೀದಿಗಳ ಸಮೀಪದ ಮದ್ಯದಂಗಡಿಗಳನ್ನು ಮುಚ್ಚುವುದು, ಮಾದಕವಸ್ತು ವಿರೋಧಿ ದಳ, ಹೆಣ್ಮಕ್ಕಳ ಸುರಕ್ಷತೆಗೆ ಸ್ಪೆಷಲ್ ಫೋರ್ಸ್ ಇವೆಲ್ಲವನ್ನೂ ಮೊದಲ ದಿನವೇ ದಳಪತಿ ಸೈನ್ ಮಾಡಿದ್ದಾರೆ.

ತಮ್ಮ ಕೆಲಸಗಳ ಮೂಲಕ ವ್ಯಾಪಕ ಮೆಚ್ಚುಗೆ ಗಳಸುತ್ತಿರುವ ವಿಜಯ್ ಅವರು ಪ್ರತಿ ಹೆಜ್ಜೆಯಲ್ಲೂ ಜೊತೆಗಿರುವವರ, ಜನರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಸಿಎಂ ಚೇರ್​​ನಲ್ಲಿರುವ ಬಿಳಿ ಟವಲ್ ತೆಗೆದಿದ್ದು, ಸಿಎಂ ಆದ ಮೇಲೆಯೂ ಮನೆ ಊಟವನ್ನೇ ಮಾಡುವುದು, ಅನಗತ್ಯ ಬೆಂಗಾಲು ವಾಹನ ತೆಗೆಯುವುದು ಇಂಥಹ ಹಲವಾರು ಮಾದರಿ ನಿರ್ಧಾರಗಳನ್ನು ಮಾಡಿದ್ದಾರೆ.

ಆದರೆ ಈಗ ಇತ್ತೀಚಿನ ಘಟನೆಯೊಂದರ ಮೂಲಕ ಟೀಕೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಟಿವಿಕೆ ಶಾಸಕ ಹಾಗೂ ವಿಜಯ್ ಅವರ ಅತ್ಯಾಪ್ತ ಆಧವ್ ಅರ್ಜುನ್ ಅವರು ಹಾಸ್ಟೆಲ್ ಒಂದಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಮಕ್ಕಳ ಜೊತೆ ಸಮಯ ಕಳೆದಿದ್ದು ಮಕ್ಕಳ ತಿಂಡಿ ಸಮಯದಲ್ಲಿ ಅವರು ಕೂಡಾ ಮಕ್ಕಳ ಜೊತೆ ಕುಳಿತಿದ್ದರು. ಮಕ್ಕಳು ಶಾಲೆಯಲ್ಲಿ ಇಡ್ಲಿ ಸಾಂಬಾರು ತಿಂದರೆ ಆಧವ್ ಅವರು ಬ್ರೆಡ್ ಜಾಮ್ ತಿಂದಿದ್ದಾರೆ.

ಆಧವ್ ಅರ್ಜುನ್ ಯಾಕೆ ಹಾಸ್ಟೆಲ್ ಊಟ ಮಾಡಿಲ್ಲ?

ಆಧವ್ ಅವರು ಯಾಕೆ ಹಾಸ್ಟೆಲ್ ಊಟ ಮಾಡಿಲ್ಲ? ಅವರದ್ದೇ ಸರ್ಕಾರ ಇರುವಾಗ ಹಾಸ್ಟೆಲ್ ಊಟ ಮಾಡಬಹುದಲ್ಲಾ? ಮಕ್ಕಳಿಗೆ ನೀಡುವ ಆಹಾರವನ್ನು ಅವರೇ ತಿನ್ನೋಕೆ ರೆಡಿ ಇಲ್ವಾ ಅಂತ ಜನರು ಪ್ರಶ್ನಿಸುತ್ತಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ಆಧವ್ ಅವರು ಬ್ಲ್ಯಾಕ್ ಶರ್ಟ್ ಧರಿಸಿಕೊಂಡಿದ್ದರು. ಬ್ರೆಡ್ ತೆಗೆದುಕೊಂಡು ಅದಕ್ಕೆ ಜಾಮ್ ಸವರಿ ಆಧವ್ ಅವರು ತಿನ್ನುತ್ತಿರುವ ದೃಶ್ಯ ಕಂಡು ಬಂತು.

ಟಿವಿಕೆ ಶಾಸಕ ಟ್ರೋಲ್

ಈಗ ಈ ವಿಚಾರವಾಗಿ ಆಧವ್ ಅರ್ಜುನ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ವಿಜಯ್ ಅವರ ಸರ್ಕಾರದಲ್ಲಿ ಖಾತೆ ಹಂಚಿಕೆ ಆಗಿದ್ದು ಸಚಿವರು ಆ್ಯಕ್ಟಿವ್ ಆಗಿದ್ದಾರೆ.

ಆದರೆ ತಮಿಳುನಾಡಿನಲ್ಲಿ ರಾಜಕೀಯ ಏರಿಳಿತಗಳ ಹೊರತಾಗಿಯೂ, ವಿಜಯ್ ನೇತೃತ್ವದ ಹೊಸ ತಮಿಳುಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ನಾಡು ನುಡಿ ನೆಲದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂಬುದನ್ನು ತೋರಿಸಿದೆ.

ಇದಕ್ಕೆ ಪೂರಕವಾಗಿ ತಮಿಳುನಾಡಿನಲ್ಲಿ ದೀರ್ಘಕಾಲದಿಂದ ಅನುಷ್ಠಾನದಲ್ಲಿ ಇರುವ ದ್ವಿಭಾಷಾ ನೀತಿಯಲ್ಲಿ (ತಮಿಳು ಮತ್ತು ಇಂಗ್ಲಿಷ್) ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಟಿವಿಕೆ ಸರ್ಕಾರ ಸ್ಪಷ್ಟಪಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed