Bank Jobs: ಭಾರತದ ಪ್ರತಿಷ್ಠಿತ ಬ್ಯಾಂಕಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಿ, 1,100 ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ! | ಉದ್ಯೋಗ ಸುದ್ದಿ | ACTPnews

ಬ್ಯಾಂಕಿಂಗ್ ಉದ್ಯೋಗಗಳು


Last Updated:

ಬ್ಯಾಂಕ್ ಆಫ್ ಬರೋಡಾ ಒಟ್ಟು 1,100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಅಕ್ಟೋಬರ್ 16, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಬ್ಯಾಂಕಿಂಗ್ ಉದ್ಯೋಗಗಳು
ಬ್ಯಾಂಕಿಂಗ್ ಉದ್ಯೋಗಗಳು

ಬ್ಯಾಕಿಂಗ್ (Banking) ಕ್ಷೇತ್ರದಲ್ಲಿ ಉದ್ಯೋಗ (Job) ಪಡೆದು ಭದ್ರವಾದ ವೃತ್ತಿಜೀವನ ರೂಪಿಸಿಕೊಳ್ಳಲು ಕಾಯುತ್ತಿರುವ ನಿರುದ್ಯೋಗಿ ಯುವಜನತೆ ಹಾಗೂ ಅರ್ಹ ಪದವೀಧರರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಬ್ಯಾಂಕ್ ಆಫ್ ಬರೋಡಾ (Bank of Baroda – BOB) ಅಖಿಲ ಭಾರತ ಮಟ್ಟದಲ್ಲಿ ಖಾಲಿ ಇರುವ ಒಟ್ಟು 1,100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಾಲಿಸ್ಟ್ (C & IC) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ (Application) ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ

ಈ ನೇಮಕಾತಿಯಡಿ ವಿವಿಧ ಹುದ್ದೆಗಳಿಗೆ ಆಕರ್ಷಕ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.

ವೆಲ್ತ್ ಎಕ್ಸಿಕ್ಯೂಟಿವ್ : ಒಟ್ಟು 1,000 ಹುದ್ದೆಗಳಿದ್ದು, ಆರಂಭಿಕ ವೇತನವು ತಿಂಗಳಿಗೆ 48,480 ಇರಲಿದೆ.

ಕ್ರೆಡಿಟ್ ಅನಾಲಿಸ್ಟ್: ಒಟ್ಟು 100 ಹುದ್ದೆಗಳಿದ್ದು, ಆಕರ್ಷಕವಾಗಿ ತಿಂಗಳಿಗೆ 64,820/- ವರೆಗೆ ವೇತನ ಸಿಗಲಿದೆ.

ವಿದ್ಯಾರ್ಹತೆ ಹಾಗೂ ವಯೋಮಿತಿ ವಿವರ

ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ಕ್ರೆಡಿಟ್ ಅನಾಲಿಸ್ಟ್ ಹುದ್ದೆಗೆ: ಸಿಎ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು.

ವಯೋಮಿತಿ: ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 22 ರಿಂದ 32 ವರ್ಷ ಹಾಗೂ ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳಿಗೆ 21 ರಿಂದ 33 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ನಿಯಮಗಳನ್ವಯ OBC, SC, ST ಹಾಗೂ PwBD ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿಶೇಷ ಸಡಿಲಿಕೆ ಅನ್ವಯಿಸಲಿದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ

ಅರ್ಜಿ ಶುಲ್ಕ: ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ ₹850/- ಹಾಗೂ SC, ST, PwBD ಮತ್ತು ESM ಅಭ್ಯರ್ಥಿಗಳಿಗೆ ₹175/- ಶುಲ್ಕವಿರುತ್ತದೆ. ಇದನ್ನು ಆನ್‌ಲೈನ್ ಮೂಲಕ (UPI, ಡೆಬಿಟ್/ಕ್ರೆಡಿಟ್ ಕಾರ್ಡ್) ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಅರ್ಜಿಗಳ ಶಾರ್ಟ್‌ಲಿಸ್ಟಿಂಗ್, ಆನ್‌ಲೈನ್ ಪರೀಕ್ಷೆ, ಮನೋಮಾಪನ ಪರೀಕ್ಷೆ (Psychometric Test), ಗುಂಪು ಚರ್ಚೆ (GD) ಹಾಗೂ ವೈಯಕ್ತಿಕ ಸಂದರ್ಶನ (PI) ಮುಖಾಂತರ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 04-09-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-10-2026

ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ (bankofbaroda.in) ಮೂಲಕ ಕೊನೆಯ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed