Trump Zaidi Handshake: ಇರಾಕ್‌ ಇರಾನ್‌ಗೆ ಮಿತ್ರನೋ? ಶತ್ರುವೋ? ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಟ್ರಂಪ್ ಭೇಟಿಯಾದ PM ಅಲ್‌-ಜೈದಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಗೆ ಇರಾಕ್ ಕೂಡ ಭಾಗವಹಿಸಿತ್ತು, ಆದರೆ ಈಗ ಅಮೆರಿಕದೊಂದಿಗೆ ಇರಾಕ್ ಸ್ನೇಹಪರ ನಿಲುವನ್ನು ತೆಗೆದುಕೊಂಡಿದೆ. ಇರಾಕಿ ಪ್ರಧಾನಿ ಅಲಿ ಅಲ್-ಜೈದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದು, ಈ ಸಭೆಯು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

News18
News18

ನವದೆಹಲಿ: ಅಮೆರಿಕ ಮತ್ತು ಇರಾನ್ (America iran Crisis) ನಡುವೆ ಉದ್ವಿಗ್ನತೆ ಕಮ್ಮಿಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇರಾನ್ ಇತ್ತೀಚೆಗೆ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ (Ayatollah Ali Khamenei) ಅವರ ಅಂತ್ಯಕ್ರಿಯೆ ನಡೆಸಿತು.

ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಗೆ ಇರಾಕ್ ಕೂಡ ಭಾಗವಹಿಸಿತ್ತು, ಆದರೆ ಈಗ ಅಮೆರಿಕದೊಂದಿಗೆ ಇರಾಕ್ ಸ್ನೇಹಪರ ನಿಲುವನ್ನು ತೆಗೆದುಕೊಂಡಿದೆ. ಇರಾಕಿ ಪ್ರಧಾನಿ ಅಲಿ ಅಲ್-ಜೈದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದು, ಈ ಸಭೆಯು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅಲ್-ಜೈದಿ ಅವರನ್ನು ಭೇಟಿಯಾದ ನಂತರ ಡೊನಾಲ್ಡ್ ಟ್ರಂಪ್ ಅವರನ್ನು ಹೊಗಳಿದರು. ‘ಅಲ್-ಜೈದಿ ಬಹಳ ಕಡಿಮೆ ಸಮಯದಲ್ಲಿ ಇರಾಕ್‌ನ ದಿಕ್ಕನ್ನು ಬದಲಾಯಿಸಿದ್ದಾರೆ. ಇರಾಕ್‌ನಲ್ಲಿ ಅಧಿಕಾರ ಪರಿವರ್ತನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ ಟ್ರಂಪ್ ಅಲ್-ಜೈದಿಯನ್ನು ಬಲಿಷ್ಠ ನಾಯಕ ಎಂದು ಅಮೆರಿಕ ಅಧ್ಯಕ್ಷ ಬಣ್ಣಿಸಿದರು.

ಅಮೆರಿಕ-ಇರಾಕ್ ಒಪ್ಪಂದ ಸಾಧ್ಯತೆ

ಇರಾಕ್ ಅಪಾರ ತೈಲ ನಿಕ್ಷೇಪಗಳು ಮತ್ತು ಅಗಾಧ ಆರ್ಥಿಕ ಸಾಮರ್ಥ್ಯವನ್ನು ಹೊಂದಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಮತ್ತು ಇರಾಕ್ ನಡುವಿನ ಪ್ರಮುಖ ತೈಲ ಹೂಡಿಕೆ ಮತ್ತು ಪಾಲುದಾರಿಕೆ ಒಪ್ಪಂದಗಳನ್ನು ಶೀಘ್ರದಲ್ಲೇ ಘೋಷಿಸಬಹುದು ಎಂದು ಅವರು ಸುಳಿವು ನೀಡಿದರು. ಇಂಧನ ವಲಯದಲ್ಲಿನ ಪಾಲುದಾರಿಕೆಗಳು ಎರಡೂ ದೇಶಗಳ ನಡುವಿನ ಅತಿದೊಡ್ಡ ಒಪ್ಪಂದಗಳಲ್ಲಿ ಒಂದಾಗಬಹುದು ಎಂದು ಟ್ರಂಪ್ ಹೇಳಿದರು.

ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಅಪಾಯಕಾರಿಯಾಗಿ ಬೆಳೆದಿದೆ. ಎರಡೂ ದೇಶಗಳು ನಿರಂತರವಾಗಿ ಪರಸ್ಪರ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ. ಇರಾನ್ ಹಲವಾರು ಅಮೆರಿಕದ ಮಿಲಿಟರಿ ನೆಲೆಗಳನ್ನು ನಾಶಪಡಿಸಿದೆ ಮತ್ತು ಅಮೆರಿಕವು ಹಲವಾರು ಇರಾನಿನ ನೆಲೆಗಳನ್ನು ಹಾನಿಗೊಳಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed