Pramod Panju: ಅಖಿಲ್ ಅಕ್ಕಿನೇನಿಯನ್ನ ಪ್ರಭಾಸ್‌ಗೆ ಹೋಲಿಸಿದ ಪ್ರಮೋದ್ ಪಂಜು! ಯಾಕೆ ಗೊತ್ತಾ? | | ACTPnews

ಅಖಿಲ್ ಅಕ್ಕಿನೇನಿಯನ್ನ ಪ್ರಭಾಸ್‌ಗೆ ಹೋಲಿಸಿದ ಪ್ರಮೋದ್ ಪಂಜು! ಯಾಕ್ ಗೊತ್ತಾ?


Last Updated:

ಕನ್ನಡದ ನಾಯಕ ನಟ ಪ್ರಮೋದ್ ಪಂಜು ಟಾಲಿವುಡ್ ಅಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಲೆನಿನ್ ಚಿತ್ರದ ಪ್ರಮೋದ್ ಪಂಜು ಪಾತ್ರದ ಕ್ರೇಜ್ ಅಲ್ಲಿ ಜಾಸ್ತಿನೇ ಇದೆ. ಇದೇ ಚಿತ್ರದ ಸಕ್ಸಸ್ ಇವೆಂಟ್ ಅಲ್ಲಿ ಪ್ರಮೋದ್ ಪಂಜು ಚಿತ್ರದ ನಾಯಕ ಅಖಿಲ್ ಅಕ್ಕಿನೇನಿಯನ್ನ ಕೊಂಡಾಡಿದ್ದಾರೆ. ಡಾರ್ಲಿಂಗ್ ಪ್ರಭಾಸ್‌ಗೂ ಹೋಲಿಸಿದ್ದಾರೆ. ಇದರ ವಿವರ ಇಲ್ಲಿದೆ ಓದಿ.

ಅಖಿಲ್ ಅಕ್ಕಿನೇನಿಯನ್ನ ಪ್ರಭಾಸ್‌ಗೆ ಹೋಲಿಸಿದ ಪ್ರಮೋದ್ ಪಂಜು! ಯಾಕ್ ಗೊತ್ತಾ?
ಅಖಿಲ್ ಅಕ್ಕಿನೇನಿಯನ್ನ ಪ್ರಭಾಸ್‌ಗೆ ಹೋಲಿಸಿದ ಪ್ರಮೋದ್ ಪಂಜು! ಯಾಕ್ ಗೊತ್ತಾ?

ಟಾಲಿವುಡ್‌ (Tollywood) ಅಲ್ಲಿ ಲೆನಿನ್ ಚಿತ್ರದ (Lenin Movie) ಅಬ್ಬರ ಜೋರಾಗಿದೆ. ಈ ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ (Akkineni Akhil) ಅಭಿನಯವನ್ನು ಜನ ಕೊಂಡಾಡಿದ್ದಾರೆ. ಕನ್ನಡಿಗ ಪ್ರಮೋದ್ ಪಂಜು ಅಭಿನಯವನ್ನು ಜನ ಮೆಚ್ಚಿಕೊಂಡಿದ್ದಾರೆ. ಅಖಿಲ್ ಅಕ್ಕಿನೇನಿ ತಂದೆ ನಾಗಾರ್ಜುನ್ ಅಕ್ಕಿನೇನಿ ಕೂಡ ಪ್ರಮೋದ್ ಪಂಜು (Pramod Panju) ಕೆಲಸವನ್ನ ಮೆಚ್ಚಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಸಕ್ಸಸ್ ಸೆಲೆಬ್ರೇಷನ್ ಜೋರಾಗಿದೆ. ಗುಂಟೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಟ ಪ್ರಮೋದ್ ಪಂಜು ಮನಸಾರೆ ಅಖಿಲ್ ಅಕ್ಕಿನೇನಿಯನ್ನ ಹೊಗಳಿದ್ದಾರೆ. ಪ್ರಭಾಸ್‌ಗೂ ಹೋಲಿಕೆ ಮಾಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ರಾಯಲ್ ಸ್ಟಾರ್‌….

ಅಖಿಲ್ ಅಕ್ಕಿನೇನಿ ಅವರನ್ನ ಪ್ರಮೋದ್ ಪಂಜು ಮನಸಾರೆ ಹೊಗಳಿದ್ದಾರೆ. ಈ ಹಿಂದಿನ ಸಲಾರ್ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಜೊತೆಗೆ ಕೆಲಸ ಮಾಡಿದ್ದೇನೆ.
lenin success celebration pramod panju compares akhil akkineni to prabhas

ವಸಂತ್ ಅನ್ನುವ ರೋಲ್

(ಚಿತ್ರ ಕೃಪೆ: ಪ್ರಮೋದ್ ಪಂಜು ಇನ್‌ಸ್ಟಾಗ್ರಾಮ್)

ಆದರೆ, ಈ ಸಲ ಲೆನಿನ್ ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಜೊತೆಗೆ ಕೆಲಸ ಮಾಡಿದ್ದೇನೆ. ಪ್ರಭಾಸ್ ಮತ್ತು ಅಖಿಲ್ ಅಕ್ಕಿನೇನಿ ಇಬ್ಬರೂ ಒಂದೇ ರೀತಿನೇ ಇದ್ದಾರೆ.

ಇಬ್ಬರು ಒಳ್ಳೆ ಮನಸ್ಸಿನ ವ್ಯಕ್ತಿಗಳೇ ಆಗಿದ್ದಾರೆ. ಪ್ರಭಾಸ್ ಅವರನ್ನ ಡಾರ್ಲಿಂಗ್ ಅಂತೀವಿ. ಹಾಗೆ ಅಖಿಲ್ ಅಕ್ಕಿನೇನಿಯನ್ನ ರಾಯಲ್ ಸ್ಟಾರ್ ಅಂತೀನಿ ಅಂತಲೇ ಪ್ರಮೋದ್ ಪಂಜು ಹೇಳಿಕೊಂಡಿದ್ದಾರೆ.

ಲೆನಿನ್ ಆ ಒಂದು ಸೀನ್

ಲೆನಿನ್ ಚಿತ್ರದಲ್ಲಿ ಒಂದು ಸೀನ್ ಬರುತ್ತದೆ. ಅದರಲ್ಲಿ ನಾನು ಮನಸ್ಸೋ ಇಚ್ಛೆ ವರ್ತನೆ ಮಾಡುತ್ತಲೇ ಇರುತ್ತೇನೆ. ಆಗ ಅಖಿಲ್ ಅಕ್ಕಿನೇನಿ ಬರ್ತಾರೆ.

ಒಂದೇ ಒಂದು ಮಾತನ್ನ ಹೇಳ್ತಾರೆ. ಕಣ್ಣಲ್ಲಿ ನೀರು ಇರುತ್ತದೆ. “ಎಲ್ಲಿ ಹೋದ ನನ್ನ ವಸಂತ” ಅನ್ನುವ ಈ ಲೈನ್ ಹಾರ್ಟ್‌ಗೆ ಟಚ್ ಆಯಿತು.

ಆಗಲೇ ನಾನು ಅಖಿಲ್ ಬ್ರೋಗೆ ಹೇಳಿದ್ದೆ, ನಿಮ್ಮ ಈ ಚಿತ್ರ ದೊಡ್ಡಮಟ್ಟಕ್ಕೆ ಹೋಗುತ್ತದೆ ಅಂತ ಹೇಳಿದ್ದೇ ಅನ್ನೋದನ್ನ ಪ್ರಮೋದ್ ಪಂಜು ಇಲ್ಲಿ ನೆನಪಿಸಿಕೊಂಡಿದ್ದಾರೆ.

lenin success celebration pramod panju compares akhil akkineni to prabhas

ರಾಯಲ್ ಸ್ಟಾರ್‌….

(ಚಿತ್ರ ಕೃಪೆ: ಪ್ರಮೋದ್ ಪಂಜು ಇನ್‌ಸ್ಟಾಗ್ರಾಮ್)

ವಸಂತ್ ಅನ್ನುವ ರೋಲ್

ಕನ್ನಡದ ಪ್ರತಿಭಾವಂತ ನಟ ಪ್ರಮೋದ್ ಪಂಜು ಈ ಚಿತ್ರದಲ್ಲಿ ವಸಂತ್ ಅನ್ನುವ ರೋಲ್ ಮಾಡಿದ್ದಾರೆ. ಈ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜುಲೈ-10 ರಂದು ಚಿತ್ರ ರಿಲೀಸ್

ಲೆನಿನ್ ಚಿತ್ರ ಜುಲೈ-10 ರಂದು ರಿಲೀಸ್ ಆಗಿದೆ. ಮುರಳಿ ಕೃಷ್ಣ ಅಬ್ಬೂರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಲಿಯಾನ್ ಬ್ರಿಟ್ಟೋ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.

ಎಸ್ ಥಮನ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಅಖಿಲ್ ಅಕ್ಕಿನೇನಿ, ಭಾಗ್ಯಶ್ರೀ ಬೋರ್ಸ್, ಪ್ರಮೋದ್ ಪಂಜು ಸೇರಿದಂತೆ ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಸಕ್ಸಸ್ ಆಗಿದೆ. ಈ ಖುಷಿಯನ್ನೆ ಇಡೀ ತಂಡ ಇದೀಗ ಸೆಲೆಬ್ರೇಟ್ ಮಾಡುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed