Traffic Jam: ಇಂದಿನಿಂದ 7 ದಿನದವರೆಗೆ ಬೆಂಗಳೂರಿನ ಸಂಚಾರದಲ್ಲಿ ಭಾರೀ ವ್ಯತ್ಯಯ; ಈ ವಾಹನಗಳಿಗೆ ಪ್ರವೇಶ ನಿಷೇಧ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಸಂಚಾರ ನಿಷೇಧ


Last Updated:

ಬಿಎಲ್‌ಆರ್ ಏರ್‌ಪೋರ್ಟ್ ಟ್ರಂಪೆಟ್ ರಸ್ತೆ ಬಳಿ ಜೂನ್ 7ರವರೆಗೆ ಟ್ರಾಫಿಕ್ ಡೈವರ್ಷನ್, ಇಂದು ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ಮಾರತ್ತಹಳ್ಳಿ ಬ್ರಿಡ್ಜ್ ಬಳಿ ಹೆಚ್‌ಜಿವಿ ಸಂಚಾರ ನಿಷೇಧ

ಸಂಚಾರ ನಿಷೇಧ
ಸಂಚಾರ ನಿಷೇಧ

ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದ (Traffic Problem) ಹೈರಾಣಾಗಿರುವ ಸಿಲಿಕಾನ್ ಸಿಟಿ ಜನತೆಗೆ ಮತ್ತೊಂದು ಶಾಕ್! ನೀವು ವಿಮಾನ ನಿಲ್ದಾಣಕ್ಕೆ ಹೋಗುವ ಪ್ಲಾನ್ (Plan) ಮಾಡುತ್ತಿದ್ದೀರಾ? ಅಥವಾ ಇಂದು ರಾತ್ರಿ ಮಾರತ್ತಹಳ್ಳಿ ಕಡೆ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಾದರೆ ಟ್ರಾಫಿಕ್ ಪೊಲೀಸರು (Police) ಮತ್ತು ಅಧಿಕಾರಿಗಳು ಹೊರಡಿಸಿರುವ ಈ ಹೊಸ ಮಾರ್ಗಸೂಚಿಗಳನ್ನು ತಿಳಿಯದಿದ್ದರೆ ರಸ್ತೆಯಲ್ಲೇ (Road) ಸಿಲುಕಿಕೊಳ್ಳುವುದು ಖಚಿತ!

ಏರ್‌ಪೋರ್ಟ್ ಪ್ರಯಾಣಿಕರಿಗೆ ಬಿಗ್ ಶಾಕ್! ಬದಲಾಯ್ತು ರೂಟ್!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BLR Airport) ಹೋಗುವವರು ಮತ್ತು ಬರುವವರು ಗಮನಿಸಲೇಬೇಕಾದ ಮಾಹಿತಿ ಇದು.

ಇಂದಿನಿಂದ (ಮೇ 30) ಜೂನ್ 7, 2026 ರವರೆಗೆ ಟ್ರಂಪೆಟ್ ರಸ್ತೆ (Trumpet Road) ಮೇಲ್ಸೇತುವೆಗಳ ಬಳಿ ತಾತ್ಕಾಲಿಕ ಸಂಚಾರ ಬದಲಾವಣೆ (Traffic diversions) ಮಾಡಲಾಗಿದೆ. ನಿಗದಿತ ನಿರ್ವಹಣಾ ಕಾಮಗಾರಿಯ (scheduled maintenance work) ಕಾರಣದಿಂದಾಗಿ ಈ ಹಠಾತ್ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ದಾರಿ ತಪ್ಪದಿರಲು, ವಿಮಾನ ನಿಲ್ದಾಣಕ್ಕೆ ಹೋಗುವಾಗ ಮತ್ತು ಬರುವಾಗ ಸೂಚನಾ ಫಲಕಗಳನ್ನು (signages) ಕಡ್ಡಾಯವಾಗಿ ಗಮನಿಸಿಕೊಂಡು ಹೋಗುವಂತೆ ವಿನಂತಿಸಲಾಗಿದೆ.

ಇಂದು ರಾತ್ರಿ ಮಾರತ್ತಹಳ್ಳಿ, ವೈಟ್‌ಫೀಲ್ಡ್ ಕಡೆ ಹೋಗುವ ಲಾರಿ, ಟ್ರಕ್‌ಗಳಿಗೆ ಬ್ರೇಕ್!

ನಮ್ಮ ಮೆಟ್ರೋ (BMRCL) ಕಾಮಗಾರಿಯ ಪ್ರಯುಕ್ತ ಟ್ರಾಫಿಕ್ ಪೊಲೀಸರು ಮಹತ್ವದ ಆದೇಶ ಹೊರಡಿಸಿದ್ದಾರೆ. ಎಚ್.ಎ.ಎಲ್ (HAL) ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರತ್ತಹಳ್ಳಿ ಬ್ರಿಡ್ಜ್ ಬಳಿಯ ವರ್ತೂರು ಮುಖ್ಯ ರಸ್ತೆಯಲ್ಲಿ ಭಾರಿ ಸರಕು ವಾಹನಗಳ (Heavy Goods Vehicles – HGV) ಸಂಚಾರವನ್ನು ನಿಷೇಧಿಸಲಾಗಿದೆ. ಇಂದು ರಾತ್ರಿ 11:00 ಗಂಟೆಯಿಂದ ನಾಳೆ ಮುಂಜಾನೆ 06:00 ಗಂಟೆಯವರೆಗೆ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ.
ಯಾವ ರಸ್ತೆಗಳು ಬಂದ್?

ಎಚ್.ಎ.ಎಲ್ (HAL) ನಿಂದ ವರ್ತೂರು ಮತ್ತು ವೈಟ್‌ಫೀಲ್ಡ್ ಕಡೆಗೆ ಮಾರತ್ತಹಳ್ಳಿ ಬ್ರಿಡ್ಜ್ ಮೂಲಕ ಸಾಗುವ ವರ್ತೂರು ಮುಖ್ಯ ರಸ್ತೆಯಲ್ಲಿ ಭಾರಿ ಸರಕು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ವರ್ತೂರು ಮತ್ತು ವೈಟ್‌ಫೀಲ್ಡ್‌ನಿಂದ ಎಚ್.ಎ.ಎಲ್ ಕಡೆಗೆ ಮಾರತ್ತಹಳ್ಳಿ ಬ್ರಿಡ್ಜ್ ಮೂಲಕ ಸಾಗುವ ವರ್ತೂರು ಮುಖ್ಯ ರಸ್ತೆಯಲ್ಲೂ ಭಾರಿ ಸರಕು ವಾಹನಗಳಿಗೆ ಪ್ರವೇಶವಿಲ್ಲ.
ಹಾಗಾದರೆ ಪರ್ಯಾಯ ಮಾರ್ಗ ಯಾವುದು?

ಎಚ್.ಎ.ಎಲ್ ನಿಂದ ವರ್ತೂರು/ವೈಟ್‌ಫೀಲ್ಡ್ ಕಡೆಗೆ ಹೋಗುವ ವಾಹನಗಳಿಗೆ

ಭಾರಿ ಸರಕು ವಾಹನಗಳು ವರ್ತೂರು ಮುಖ್ಯ ರಸ್ತೆ ಮುಖಾಂತರ ಸಾಗಬೇಕು. ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್ ಬಳಿ ಎಡ ತಿರುವು ಪಡೆಯಬೇಕು. ಅಶ್ವತ್ಥನಗರ ಸರ್ವೀಸ್ ರಸ್ತೆ ಮೂಲಕ ಹೊರ ವರ್ತುಲ ರಸ್ತೆ (Outer Ring Road) ತಲುಪಬೇಕು. ಕಾರ್ತಿಕ್ ನಗರ ಜಂಕ್ಷನ್ ಬಳಿ ಯು-ಟರ್ನ್ (U-turn) ಪಡೆದು ಮುಂದುವರೆಯಬೇಕು. ಕಲಾ ಮಂದಿರ ಜಂಕ್ಷನ್ ತಲುಪಿ, ಮುಂದುವರೆದು ಸರ್ವೀಸ್ ರಸ್ತೆ ಮೂಲಕ ವರ್ತೂರು ಮುಖ್ಯ ರಸ್ತೆ ಸೇರಬೇಕು.  ಅಲ್ಲಿಂದ ಎಡ ತಿರುವು ಪಡೆದು ವೈಟ್‌ಫೀಲ್ಡ್ ಮತ್ತು ವರ್ತೂರು ಕಡೆಗೆ ಸಂಚರಿಸಬಹುದು.

ವರ್ತೂರು/ವೈಟ್‌ಫೀಲ್ಡ್ ನಿಂದ ಎಚ್.ಎ.ಎಲ್ ಕಡೆಗೆ ಹೋಗುವ ವಾಹನಗಳಿಗೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed