Shiva Rajkumar: ಪೆದ್ದಿ ಸಿನಿಮಾ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? | | ACTPnews

ಪೆದ್ದಿ ಚಿತ್ರ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ?


Last Updated:

ಪೆದ್ದಿ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿರೋ ಶಿವರಾಜ್ ಕುಮಾರ್ ಅವರೂ ವೇಟ್ ಮಾಡುತ್ತಿದ್ದಾರೆ. ಆದರೆ, ಹೀಗೆ ಕಾಯುತ್ತಿರೋದಕ್ಕೆ ಒಂದು ಕಾರಣವೂ ಇದೆ. ಅದನ್ನ ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ಪೆದ್ದಿ ಚಿತ್ರ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ?
ಪೆದ್ದಿ ಚಿತ್ರ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ?

ಪೆದ್ದಿ ಚಿತ್ರ (Peddi Cinema) ನೋಡೋಕೆ ಎಲ್ಲರೂ ಕಾಯುತ್ತಿದ್ದಾರೆ. ಕನ್ನಡದ ಪ್ರೇಕ್ಷಕರೂ ಈ ಚಿತ್ರ ನೋಡುವ ಉತ್ಸಾಹದಲ್ಲಿಯೇ ಇದ್ದಾರೆ. ಕಾರಣ, ಪೆದ್ದಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ (Shiva Rajkumar) ನಟಿಸಿದ್ದಾರೆ. ಗೌರ್ ನಾಯ್ಡು (Gour Naidu) ಅನ್ನುವ ಪ್ರಮುಖ ಪಾತ್ರವನ್ನೆ ಶಿವಣ್ಣ ಈ ಚಿತ್ರದಲ್ಲಿ ಮಾಡಿದ್ದಾರೆ. ಆದರೆ, ಇಲ್ಲಿ ಇನ್ನು ವಿಶೇಷ ಅಂದ್ರೆ ಎಲ್ಲ ಅಭಿಮಾನಿಗಳ ತರವೇ ಶಿವಣ್ಣ (Shivanna) ಈ ಪೆದ್ದಿ ಚಿತ್ರಕ್ಕಾಗಿಯೇ ಕಾಯುತ್ತಿದ್ದಾರೆ. ಕಾರಣ ಏನು ಅನ್ನೋದನ್ನು ಸ್ವತಃ ಶಿವಣ್ಣ ಹೇಳಿಕೊಂಡಿದ್ದಾರೆ. ಇವರ ಈ ಬಗೆಗಿನ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪೆದ್ದಿಗಾಗಿ ಕಾಯ್ತಿರೋ ಶಿವಣ್ಣ

ಪೆದ್ದಿ ಚಿತ್ರದಲ್ಲಿ ಶಿವಣ್ಣ ಖಡಕ್ ರೋಲ್ ಮಾಡಿದ್ದಾರೆ. ಗೌರ್ ನಾಯ್ಡು ಅನ್ನುವ ಈ ರೋಲ್ ಅದ್ಭುತಾಗಿದೆ. ಶಿವಣ್ಣ ಇದನ್ನ ಚೆನ್ನಾಗಿಯೆ ಕ್ಯಾರಿ ಮಾಡಿದ್ದಾರೆ.
kannada actor Shiva Rajkumar waiting to watch peddi movie just like a fan

ಪೆದ್ದಿಗಾಗಿ ಕಾಯ್ತಿರೋ ಶಿವಣ್ಣ

ಕನ್ನಡದ ಜನತೆ ಈ ಪಾತ್ರವನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ತೆಲುಗು ಆಡಿಯನ್ಸ್ ಕೂಡ ಇದನ್ನ ಮೆಚ್ಚುಕೊಳ್ಳುವುದು ಪಕ್ಕಾನೇ ಬಿಡಿ. ಆ ರೀತಿನೇ ಶಿವಣ್ಣ ಇಲ್ಲಿ ನಟಿಸಿದ್ದಾರೆ. ಇವರ ಅಭಿನಯದ ಝಲಕ್ ಟ್ರೈಲರ್ ಅಲ್ಲಿಯೆ ರಿವೀಲ್ ಆಗಿದೆ.

ಶಿವಣ್ಣ ಯಾಕ್ ಕಾಯ್ತಾ ಇದ್ದಾರೆ

ಶಿವಣ್ಣ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಬಹುತೇಕ ವಿಷಯ ಇವರಿಗೆ ಗೊತ್ತೆ ಇದೆ. ಆದರೂ ಶಿವಣ್ಣ ಈ ಸಿನಿಮಾವನ್ನ ನೋಡ್ಬೆಕು ಅಂತ ಕಾಯುತ್ತಿದ್ದಾರೆ.

ಅಭಿಮಾನಿಯಂತೆ ವೇಟಿಂಗ್

ಈ ಒಂದು ಮಾತನ್ನ ಸ್ವತಃ ಶಿವಣ್ಣ ಹೇಳಿಕೊಂಡಿದ್ದಾರೆ. ಆ್ಯಂಕರ್ ಅನುಶ್ರೀ ಅವರ ಸಂದರ್ಶನದಲ್ಲಿ ಇದನ್ನ ಹೇಳಿದ್ದಾರೆ. ಈ ಮಾತು ಹೇಳುವಾಗ ಪಕ್ಕದಲ್ಲಿ ರಾಮ್ ಚರಣ್ ಇದ್ದರು. ಇನ್ನೊಂದು ಪಕ್ಕದಲ್ಲಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಇದ್ದರು.

kannada actor Shiva Rajkumar waiting to watch peddi movie just like a fan

ಪೆದ್ದಿಗಾಗಿ ಕಾಯ್ತಿರೋ ಶಿವಣ್ಣ

ಬೆಂಗಳೂರಿಗೆ ಪೆದ್ದಿ ಚಿತ್ರದ ಪ್ರಚಾರಕ್ಕೆ ಬಂದಾಗಲೇ ಈ ಒಂದು ಸಂದರ್ಶನ ಮಾಡಲಾಗಿದೆ. ಆಗಲೇ ಶಿವಣ್ಣ ಪೆದ್ದಿ ಚಿತ್ರದ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜಾನ್ವಿ ಕಪೂರ್ ಜೊತೆಗೆ ಎರಡು ಸಿಕ್ವೆನ್ಸ್ ಇವೆ ಅಂತಲೇ ಹೇಳಿದ್ದಾರೆ.

ಅಪ್ಪು ಕಂಡ ಶಿವಣ್ಣ

ಈ ಒಂದು ಮಾತನ್ನ ಶಿವಣ್ಣ ಹೇಳಿದ್ದಾರೆ. ರಾಮ್ ಚರಣ್ ಜೊತೆಗೆ ಕೆಲಸ ಮಾಡುವಾಗ ತುಂಬಾನೆ ಖುಷಿ ಆಗಿದೆ. ಇವರೊಟ್ಟಿಗೆ ನಟಿಸುವಾಗ ಅಪ್ಪು ಜೊತೆಗೆ ಕೆಲಸ ಮಾಡಿರೋ ಫೀಲ್ ಆಯಿತು. ರಾಮ್ ಚರಣ್ ಒಂದು ರೀತಿ ನನಗೆ ಪುನೀತ್ ಇದ್ದ ಹಾಗೆ ಅಂತಲೂ ಹೇಳಿದ್ದಾರೆ.

ಹಳೆ ಕ್ಷಣ ರೀ-ಕ್ರಿಯೇಟ್

ಒಂದು ಹಳೆ ಫೋಟೋದಲ್ಲಿ ರಾಜಕುಮಾರ್ ಇದ್ದಾರೆ. ಇನ್ನೊಂದು ಕಡೆಗೆ ಮೆಗಾ ಸ್ಟಾರ್ ಚಿರಂಜೀವಿ ಅವರೂ ಇದ್ದಾರೆ. ಆತ್ಮೀಯವಾಗಿಯೇ ಇವರು ಪರಸ್ಪರ ಹಗ್ ಮಾಡಿದ್ದಾರೆ. ಇದೇ ಫೋಟೋದಲ್ಲಿಯೇ ರಾಜಕುಮಾರ್ ಅವರು ಚಿರಂಜೀವಿ ಅವರಿಗೆ ಪ್ರೀತಿಯಿಂದ ಮುತ್ತು ಕೊಡುವ ದೃಶ್ಯವೂ ಇದೆ.

ಆದರೆ, ಆ್ಯಂಕರ್ ಅನುಶ್ರೀ ಇಲ್ಲಿ ಇದನ್ನ ರೀ-ಕ್ರಿಯೇಟ್ ಮಾಡಿಸಿದ್ದಾರೆ. ರಾಮ್ ಚರಣ್ ಹಾಗೂ ಶಿವರಾಜ್ ಕುಮಾರ್ ಅವರು ಪರಸ್ಪರ ಹಗ್ ಮಾಡಿದ್ದಾರೆ. ರಾಮ್ ಚರಣ್ ಕೆನ್ನೆಗೆ ಶಿವಣ್ಣ ಪ್ರೀತಿಯಿಂದ ಮುತ್ತು ಕೊಟ್ಟಿದ್ದಾರೆ. ಇದು ಈ ಕಲಾವಿದರ ಬಾಂಡಿಂಗ್‌ಗೂ ಒಂದು ಸಾಕ್ಷಿ ಆಗಿತ್ತು ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports