Toxic Song Release: ಮುತ್ತಲ್ಲ, ‘ಮತ್ತಿನ’ ಮಳೆಗೈದ ಯಶ್! ರಾಕಿ ಬಾಯ್-ಕಿಯಾರ ‘ತಬಾಹಿ’ ಹಾಡಿಗೆ ಇಂಟರ್‌ನೆಟ್ ಶೇಕ್! | | ACTPnews

News18


Last Updated:

ಟಾಕ್ಸಿಕ್ ಚಿತ್ರದ ತಬಾಹಿ ಹಾಡಿನ ವಿಡಿಯೋ ಕೊನೆಗೂ ರಿಲೀಸ್ ಆಗಿದೆ. ಈ ಹಿಂದೇನೆ ಈ ಹಾಡಿನ ಆಡಿಯೋ ಮಾತ್ರ ಹೊರ ಬಂದಿತ್ತು. ಇದೀಗ ವಿಡಿಯೋ ರಿಲೀಸ್ ಆಗಿದೆ. ಇದು ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

News18
News18

ಟಾಕ್ಸಿಕ್ ಚಿತ್ರದ (Toxic Movie) ತಬಾಹಿ ವಿಡಿಯೋ ಸಾಂಗ್ (Tabaahi Video Song) ರಿಲೀಸ್ ಆಗಿದೆ. ಈ ಹಿಂದಿನೇ ಈ ಹಾಡಿನ ಆಡಿಯೋ ಮಾತ್ರ ಹೊರ ಬಂದಿತ್ತು. ಬಾಲಿವುಡ್ (Bollywood) ಗಾಯಕ ವಿಶಾಲ್ ಮಿಶ್ರಾ (Vishal Mishra) ಸಂಗೀತದ ಮತ್ತು ಗಾಯನದ ಈ ಹಾಡು ಆಡಿಯೋ ಮೂಲಕವೇ ಮೋಡಿ ಮಾಡಿತ್ತು. ಆದರೆ, ಇದೀಗ ವಿಡಿಯೋ ಹಾಡು ಹೊರ ಬಂದಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಪ್ರಣಯದ ಉತ್ತುಂಗ…

ತಬಾಹಿ ಸಾಂಗ್ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದೆ. ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಈ ಸಾಂಗ್ ಪ್ರಣಯದ ಉತ್ತುಂಗದ ಕತೆ ಹೇಳುತ್ತದೆ.
toxic movie yash kiara advani tabaahi song release

ಪ್ರಣಯದ ಉತ್ತುಂಗ…

ಸಮುದ್ರ ತೀರದ ಪ್ರಣಯದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಆ ರೀತಿಯ ಈ ಹಾಡು ವಿಷ್ಯೂಲ್ ರಿಚ್ ಆಗಿದೆ. ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ಸಿಕ್ಕಾಪಟ್ಟೆ ವರ್ಕ್ ಆಗಿದೆ.

ಪ್ರೀತಿ-ಪ್ರೇಮದ ತಬಾಹಿ

ಈ ಒಂದು ಹಾಡಿನ ಬಗ್ಗೆ ಸಾಕಷ್ಟು ಟಾಕ್ ಇತ್ತು. ಇದರಲ್ಲಿ ಕಿಯಾರಾ ಹಾಗೂ ಯಶ್ ರೋಮ್ಯಾನ್ಸ್ ಭಯಂಕರವಾಗಿಯೇ ಇದೆ ಅನ್ನುವ ಮಾತೇ ಇತ್ತು.

ಅದು ನಿಜ ಅಂತಲೇ ಈ ಒಂದು ಹಾಡಿನ ವಿಡಿಯೋ ಹೇಳುತ್ತಿದೆ. ಈ ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಪಾತ್ರದ ಪ್ರಣಯ ಎಲ್ಲವನ್ನೂ ದಾಟಿದಂತೇನೆ ಇದೆ. ಇಡೀ ಹಾಡಿನಲ್ಲಿ ಅದೆಷ್ಟೊ ಕಿಸ್ಸಿಂಗ್ ಸೀನ್‌ಗಳಿವೆ, ಆಲಿಂಗನದ ದೃಶ್ಯಗಳು ಕಾಮನ್ ಬಿಡಿ. ತಬಾಹಿ ಅನ್ನೋ ಪದಕ್ಕೆ ಸೂಕ್ತವಾದ ದೃಶ್ಯವೇ ಇಲ್ಲಿದೆ.

ಯೋಗರಾಜ್ ಭಟ್ರ ಸಾಹಿತ್ಯ

ಯೋಗರಾಜ್ ಭಟ್ರು ಈ ಒಂದು ಹಾಡನ್ನ ಬರೆದಿದ್ದಾರೆ. ಇವರ ಸಾಲುಗಳಲ್ಲಿ ಇಡೀ ಹಾಡು ರಸವತ್ತಾಗಿಯೇ ಬಂದಿದೆ. ಇದನ್ನ ನೋಡ್ತಾ ಹೋದ್ರೆ ಪಡ್ಡೆಗಳ ದಿಲ್ ಝಲ್ ಅನುತ್ತದೆ. ಆ ರೀತಿನೇ ಇದೆ.

toxic movie yash kiara advani tabaahi song release

ಪ್ರೀತಿ-ಪ್ರೇಮದ ತಬಾಹಿ

ಒಂದು ಇಂಗ್ಲಿಷ್ ಚಿತ್ರಕ್ಕೆ ಬೇಕಿರೋ ಆ ಬೋಲ್ಡ್ ರೋಮ್ಯಾನ್ಸ್‌ನ ಚಿತ್ರಣ ಈ ಹಾಡಿನಲ್ಲಿದೆ. ಬಾಲಿವುಡ್ ಗಾಯಕ ವಿಶಾಲ್ ಮಿಶ್ರಾ ಈ ಗೀತೆನ್ನ ಹಾಡಿದ್ದಾರೆ, ಕಂಪೋಸ್ ಮಾಡಿದ್ದಾರೆ. ಇದು ಅವರ ಧ್ವನಿಯಲ್ಲಿ ಅಷ್ಟೆ ಚೆನ್ನಾಗಿ ಕೇಳುತ್ತಿದೆ.

ಟಾಕ್ಸಿಕ್ ಕಿಕ್ ಸ್ಟಾರ್

ಈ ಒಂದು ಹಾಡಿನ ಮೂಲಕವೇ ಚಿತ್ರದ ಪ್ರಚಾರವೂ ಶುರು ಆದಂತೆ ಇದೆ. ಈ ಒಂದು ಗೀತೆಯಲ್ಲಿ ಕಿಯಾರಾ ಹಾಗೂ ಯಶ್ ರೋಮ್ಯಾನ್ಸ್ ಸಿಕ್ಕಾಪಟ್ಟೆ ವರ್ಕ್ ಆಗಿದೆ.

ಆಗಸ್ಟ್ -26 ಕ್ಕೆ ರಿಲೀಸ್

ಆಗಸ್ಟ್-26 ಕ್ಕೆ ಟಾಕ್ಸಿಕ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅತಿ ದೊಡ್ಡ ನಿರೀಕ್ಷೆಯನ್ನು ಇದು ಹುಟ್ಟುಹಾಕುತ್ತಿದೆ. ಡೈರೆಕ್ಟರ್ ಗೀತು ಮೋಹನ್‌ದಾಸ್ ಕಲ್ಪನೆಯ ಈ ಚಿತ್ರದ ಮ್ಯಾಜಿಕ್ ಬೇರೆ ಇದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports