Last Updated:
ಟಾಕ್ಸಿಕ್ ಚಿತ್ರದ ತಬಾಹಿ ಹಾಡಿನ ವಿಡಿಯೋ ಕೊನೆಗೂ ರಿಲೀಸ್ ಆಗಿದೆ. ಈ ಹಿಂದೇನೆ ಈ ಹಾಡಿನ ಆಡಿಯೋ ಮಾತ್ರ ಹೊರ ಬಂದಿತ್ತು. ಇದೀಗ ವಿಡಿಯೋ ರಿಲೀಸ್ ಆಗಿದೆ. ಇದು ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ತಬಾಹಿ ವಿಡಿಯೋ ಸಾಂಗ್ (Tabaahi Video Song) ರಿಲೀಸ್ ಆಗಿದೆ. ಈ ಹಿಂದಿನೇ ಈ ಹಾಡಿನ ಆಡಿಯೋ ಮಾತ್ರ ಹೊರ ಬಂದಿತ್ತು. ಬಾಲಿವುಡ್ (Bollywood) ಗಾಯಕ ವಿಶಾಲ್ ಮಿಶ್ರಾ (Vishal Mishra) ಸಂಗೀತದ ಮತ್ತು ಗಾಯನದ ಈ ಹಾಡು ಆಡಿಯೋ ಮೂಲಕವೇ ಮೋಡಿ ಮಾಡಿತ್ತು. ಆದರೆ, ಇದೀಗ ವಿಡಿಯೋ ಹಾಡು ಹೊರ ಬಂದಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಪ್ರಣಯದ ಉತ್ತುಂಗ…
ಸಮುದ್ರ ತೀರದ ಪ್ರಣಯದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಆ ರೀತಿಯ ಈ ಹಾಡು ವಿಷ್ಯೂಲ್ ರಿಚ್ ಆಗಿದೆ. ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ಸಿಕ್ಕಾಪಟ್ಟೆ ವರ್ಕ್ ಆಗಿದೆ.
ಈ ಒಂದು ಹಾಡಿನ ಬಗ್ಗೆ ಸಾಕಷ್ಟು ಟಾಕ್ ಇತ್ತು. ಇದರಲ್ಲಿ ಕಿಯಾರಾ ಹಾಗೂ ಯಶ್ ರೋಮ್ಯಾನ್ಸ್ ಭಯಂಕರವಾಗಿಯೇ ಇದೆ ಅನ್ನುವ ಮಾತೇ ಇತ್ತು.
ಅದು ನಿಜ ಅಂತಲೇ ಈ ಒಂದು ಹಾಡಿನ ವಿಡಿಯೋ ಹೇಳುತ್ತಿದೆ. ಈ ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಪಾತ್ರದ ಪ್ರಣಯ ಎಲ್ಲವನ್ನೂ ದಾಟಿದಂತೇನೆ ಇದೆ. ಇಡೀ ಹಾಡಿನಲ್ಲಿ ಅದೆಷ್ಟೊ ಕಿಸ್ಸಿಂಗ್ ಸೀನ್ಗಳಿವೆ, ಆಲಿಂಗನದ ದೃಶ್ಯಗಳು ಕಾಮನ್ ಬಿಡಿ. ತಬಾಹಿ ಅನ್ನೋ ಪದಕ್ಕೆ ಸೂಕ್ತವಾದ ದೃಶ್ಯವೇ ಇಲ್ಲಿದೆ.
ಯೋಗರಾಜ್ ಭಟ್ರು ಈ ಒಂದು ಹಾಡನ್ನ ಬರೆದಿದ್ದಾರೆ. ಇವರ ಸಾಲುಗಳಲ್ಲಿ ಇಡೀ ಹಾಡು ರಸವತ್ತಾಗಿಯೇ ಬಂದಿದೆ. ಇದನ್ನ ನೋಡ್ತಾ ಹೋದ್ರೆ ಪಡ್ಡೆಗಳ ದಿಲ್ ಝಲ್ ಅನುತ್ತದೆ. ಆ ರೀತಿನೇ ಇದೆ.
ಪ್ರೀತಿ-ಪ್ರೇಮದ ತಬಾಹಿ
ಒಂದು ಇಂಗ್ಲಿಷ್ ಚಿತ್ರಕ್ಕೆ ಬೇಕಿರೋ ಆ ಬೋಲ್ಡ್ ರೋಮ್ಯಾನ್ಸ್ನ ಚಿತ್ರಣ ಈ ಹಾಡಿನಲ್ಲಿದೆ. ಬಾಲಿವುಡ್ ಗಾಯಕ ವಿಶಾಲ್ ಮಿಶ್ರಾ ಈ ಗೀತೆನ್ನ ಹಾಡಿದ್ದಾರೆ, ಕಂಪೋಸ್ ಮಾಡಿದ್ದಾರೆ. ಇದು ಅವರ ಧ್ವನಿಯಲ್ಲಿ ಅಷ್ಟೆ ಚೆನ್ನಾಗಿ ಕೇಳುತ್ತಿದೆ.
ಈ ಒಂದು ಹಾಡಿನ ಮೂಲಕವೇ ಚಿತ್ರದ ಪ್ರಚಾರವೂ ಶುರು ಆದಂತೆ ಇದೆ. ಈ ಒಂದು ಗೀತೆಯಲ್ಲಿ ಕಿಯಾರಾ ಹಾಗೂ ಯಶ್ ರೋಮ್ಯಾನ್ಸ್ ಸಿಕ್ಕಾಪಟ್ಟೆ ವರ್ಕ್ ಆಗಿದೆ.
ಆಗಸ್ಟ್-26 ಕ್ಕೆ ಟಾಕ್ಸಿಕ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅತಿ ದೊಡ್ಡ ನಿರೀಕ್ಷೆಯನ್ನು ಇದು ಹುಟ್ಟುಹಾಕುತ್ತಿದೆ. ಡೈರೆಕ್ಟರ್ ಗೀತು ಮೋಹನ್ದಾಸ್ ಕಲ್ಪನೆಯ ಈ ಚಿತ್ರದ ಮ್ಯಾಜಿಕ್ ಬೇರೆ ಇದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jul 08, 2026 11:55 AM IST













