Team India: ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದರೂ ಮತ್ತೆ ಮತ್ತೆ ಚಾನ್ಸ್! ಈ ಆಟಗಾರನ ಮೇಲೆ ಏಕಿಷ್ಟು ಗಂಭೀರ್​​ಗೆ ಒಲವು? | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:

ಟೀಮ್ ಇಂಡಿಯಾದ ದೌರ್ಬಲ್ಯಗಳು ಈಗ ಸ್ಪಷ್ಟವಾಗಿ ಕಾಣಿಸುತ್ತಿವೆ. ಕಳೆದ ಐದು ಟಿ20 ಪಂದ್ಯಗಳಲ್ಲಿ ತಂಡ ಕಳಪೆ ಪ್ರದರ್ಶನ ನೀಡಿ ಸೋಲುಗಳನ್ನು ಅನುಭವಿಸಿದೆ. ಈಗ ಎಲ್ಲರೂ ಈ ಒಬ್ಬ ಆಟಗಾರನ ಪ್ರದರ್ಶನವನ್ನು ಪ್ರಶ್ನಿಸುತ್ತಿದ್ದಾರೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಭಾರತ (India) ಕ್ರಿಕೆಟ್ (Cricket) ತಂಡ ಐರ್ಲೆಂಡ್ (Ireland) ವಿರುದ್ಧ 0-2 ಅಂತರದಿಂದ ಸೋತ ನಂತರ, ಇಂಗ್ಲೆಂಡ್ (England) ವಿರುದ್ಧದ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ 0-2 ಹಿನ್ನಡೆಯಲ್ಲಿದೆ. ಎಲ್ಲಾ ಪಂದ್ಯಗಳಲ್ಲೂ ತಂಡ ಕಳಪೆ ಪ್ರದರ್ಶನ ನೀಡಿದೆ. ಈ ನಡುವೆ ಹೊಸ ಉಪನಾಯಕ ತಿಲಕ್ ವರ್ಮಾ (Tilak Varma) ಅವರನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ನಿರಂತರ ಕಳಪೆ ಆಟವಾಡುತ್ತಿದ್ದರೂ ತಂಡದಲ್ಲೇ ಉಳಿದಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾರಣ ಕೇಳುತ್ತಿದ್ದಾರೆ.

ಐಸಿಸಿ 2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ತಿಲಕ್ ವರ್ಮಾ ಒಂದೇ ಒಂದು ಅರ್ಧಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಅವರ ಅತ್ಯುತ್ತಮ ಸ್ಕೋರ್ ಕೇವಲ 44 ರನ್‌ಗಳಷ್ಟೇ. ಐಪಿಎಲ್ 2026ರಲ್ಲಿ ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ನೀಡಿದ್ದರೂ, ಈಗ ಟೀಮ್ ಇಂಡಿಯಾ ಪರ ಟಿ20 ಪಂದ್ಯಗಳಲ್ಲಿ ಮತ್ತೆ ನಿರಾಶಾದಾಯಕ ಪ್ರದರ್ಶನ ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ.

ತಂಡದ ಮೇಲೆ ಪರಿಣಾಮ ಹೇಗೆ?

ತಿಲಕ್ ವರ್ಮಾ ಅವರ ಅತಿದೊಡ್ಡ ದೌರ್ಬಲ್ಯವೆಂದರೆ ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್. 2026ರಲ್ಲಿ ಟೀಮ್ ಇಂಡಿಯಾ ಪರ ಟಿ20 ಪಂದ್ಯಗಳಲ್ಲಿ ಸ್ಪಿನ್ನರ್‌ಗಳ ವಿರುದ್ಧ 98 ಎಸೆತಗಳಲ್ಲಿ ಕೇವಲ 90 ರನ್ ಗಳಿಸಿದ್ದಾರೆ. ತಿಲಕ್ ವರ್ಮಾ ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುವುದರಿಂದ, ಇನ್ನೊಂದು ತುದಿಯಲ್ಲಿರುವ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಅವರು ತಪ್ಪು ಹೊಡೆತಗಳನ್ನು ಆಡಿ ವಿಕೆಟ್ ಕಳೆದುಕೊಳ್ಳುತ್ತಾರೆ. ಇದು ತಂಡದ ಮೇಲೂ ದೊಡ್ಡ ಒತ್ತಡ ಹೇರುತ್ತದೆ.

ಏಕಿಷ್ಟು ಒಲವು?

ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿರುವ ತಿಲಕ್ ವರ್ಮಾ ಅವರನ್ನು ತಂಡದಿಂದ ಕೈಬಿಡುವಂತೆ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಟೀಮ್ ಇಂಡಿಯಾ ಪರ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದರೂ ಮತ್ತೆ ಮತ್ತೆ ತಿಲಕ್ ವರ್ಮಾ ಅವರಿಗೆ ಅವಕಾಶ ನೀಡುತ್ತಿರುವ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಆದರೆ, ತಿಲಕ್ ವರ್ಮಾ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮಹತ್ವದ ಕಾರಣವಿದೆ.

2025 ರಲ್ಲಿ ಉದಯೋನ್ಮುಖ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದರು. ಅದಕ್ಕಾಗಿಯೇ ಟೀಮ್ ಇಂಡಿಯಾ ಅವರಿಗೆ ಬೆಂಬಲ ನೀಡುತ್ತಲೇ ಇದೆ. ಏಷ್ಯಾ ಕಪ್ ಫೈನಲ್‌ನಲ್ಲಿ ಅವರ ಇನ್ನಿಂಗ್ಸ್ ಅವರನ್ನು ಭವಿಷ್ಯದ ತಾರೆ ಎಂದು ಪ್ರಶಂಸಿಸಲು ಕಾರಣವಾಗಿದೆ. 2026ರ ಋತುವಿಗೆ ತಂಡ ಘೋಷಣೆಯೊಂದಿಗೆ ಅವರನ್ನು ಟಿ20 ತಂಡದ ಉಪನಾಯಕನನ್ನಾಗಿ ನೇಮಿಸಲಾಯಿತು. ಆದ್ದರಿಂದ ಟೀಮ್ ಇಂಡಿಯಾ ಈಗ ತನ್ನ ಉಪನಾಯಕನನ್ನು ಆಡುವ ಹನ್ನೊಂದರಿಂದ ಹೊರಗಿಡುವುದು ಕಷ್ಟ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed