Toxic Movie: ‘ಟಾಕ್ಸಿಕ್’ ಹೊಸ ಪೋಸ್ಟರ್ ರಿಲೀಸ್; ಕಿಯಾರಾ ಅಡ್ವಾಣಿಗೆ ಸಿಕ್ಕಿತು ಸ್ಪೆಷಲ್ ಸರ್ಪ್ರೈಸ್! | | ACTPnews

ಟಾಕ್ಸಿಕ್ ಹೊಸ ಪೋಸ್ಟರ್ ಔಟ್; ಕಿಯಾರಾ ಅಡ್ವಾಣಿಗೆ ಸ್ಪೆಷಲ್ ಗಿಫ್ಟ್!


Last Updated:

ಟಾಕ್ಸಿಕ್ ಚಿತ್ರದ ಹೊಸ ಪೋಸ್ಟರ್ ಹೊರ ಬಂದಿದೆ. ಕಿಯಾರಾ ಅಡ್ವಾಣಿ ಇದರಲ್ಲಿ ಹೊಳೆಯುತ್ತಿದ್ದಾರೆ. ಸ್ಟನಿಂಗ್ ಅನಿಸುತ್ತಿದ್ದಾರೆ. ಇದನ್ನ ರಿಲೀಸ್ ಮಾಡೋಕು ಒಂದು ಕಾರಣ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.

ಟಾಕ್ಸಿಕ್ ಹೊಸ ಪೋಸ್ಟರ್ ಔಟ್; ಕಿಯಾರಾ ಅಡ್ವಾಣಿಗೆ ಸ್ಪೆಷಲ್ ಗಿಫ್ಟ್!
ಟಾಕ್ಸಿಕ್ ಹೊಸ ಪೋಸ್ಟರ್ ಔಟ್; ಕಿಯಾರಾ ಅಡ್ವಾಣಿಗೆ ಸ್ಪೆಷಲ್ ಗಿಫ್ಟ್!

ಟಾಕ್ಸಿಕ್ ಚಿತ್ರದ (Toxic Movie) ಮತ್ತೊಂದು ಪೋಸ್ಟರ್ ಹೊರ ಬಂದಿದೆ. ಈ ಪೋಸ್ಟರ್ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ಅವರದ್ದೇ ಆಗಿದೆ. ಈ ಒಂದು ಪೋಸ್ಟರ್ (Poster) ಅನ್ನ ಜುಲೈ-31 ರಂದೇ ಬಿಡಲು ಕಾರಣವೂ ಇದೆ. ಅದನ್ನ ಹೇಳ್ತಾನೇ ಸಿನಿಮಾ ತಂಡ (Movie Team) ಸ್ಟನಿಂಗ್ ಫೋಟೋ ಒಂದನ್ನ ಇದೀಗ ಹಂಚಿಕೊಂಡಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಕಿಯಾರಾ ಸ್ಟನಿಂಗ್ ಪೋಸ್ಟರ್

ಟಾಕ್ಸಿಕ್ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಅದ್ಭುತ ಅನಿಸೋ ರೋಲ್ ಮಾಡಿದ್ದಾರೆ. ಅಷ್ಟೆ ಸುಂದರವಾಗಿಯೂ ಕಾಣಿಸುತ್ತಿದ್ದಾರೆ. ಯಶ್ ಜೊತೆಗೆ ಫಸ್ಟ್ ಟೈಮ್ ಕೆಲಸ ಮಾಡಿದ್ದಾರೆ. ಅಷ್ಟೆ ಬ್ಯೂಟಿಫುಲ್ ಆಗಿಯೂ ನಾಡಿಯಾ ಪಾತ್ರವನ್ನ ನಿರ್ವಹಿಸಿದ್ದಾರೆ.
toxic movie kiara advani special photo release on her birthday

35ಕ್ಕೆ ಕಾಲಿಟ್ಟ ಕಿಯಾರಾ

ಚಿತ್ರದಲ್ಲಿ ಹಲವು ಕಲಾವಿದೆಯರೂ ಇದ್ದಾರೆ. ಆದರೆ, ಇವರ ನಡುವೆ ನಾಡಿಯಾ ಪಾತ್ರ ವಿಶೇಷ ಅನಿಸುತ್ತದೆ. ನಾಯಕ ನಟ ಯಶ್ ಅವರ ನಾಯಕಿ ಆಗಿಯೇ ಈ ಪಾತ್ರ ಇದೆ ಅನ್ನೋದು ಗೊತ್ತಾಗಿದೆ. ಈ ಒಂದು ಪಾತ್ರದ ಹೊಸ ಪೋಸ್ಟರ್ ಈಗ ರಿಲೀಸ್ ಆಗಿದೆ. ಇದು ಎಲ್ಲರ ಗಮನ ಸೆಳೆಯುವಂತೇನೆ ಇದೆ.

ಈ ಪೋಸ್ಟರ್ ಈಗ ಯಾಕೆ

ಚಿತ್ರದ ಪ್ರಚಾರವೇನೋ ಶುರು ಆಗಿದೆ. ಈ ಮೊದಲೇ ಚಿತ್ರದ ನಟಿಮಣಿಯರ ಪಾತ್ರಗಳ ಪೋಸ್ಟರ್ ಬಂದಿವೆ. ಆದರೆ, ಇದು ಯಾಕೆ ಅನ್ನುವ ಕುತೂಹಲ ಜಾಸ್ತಿನೇ ಇದೆ.

35ಕ್ಕೆ ಕಾಲಿಟ್ಟ ಕಿಯಾರಾ

ಕಿಯಾರಾ ಅಡ್ವಾಣಿ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ವರ್ಷ ಜುಲೈ-31 ರಂದು 35 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ಟಾಕ್ಸಿಕ್ ಚಿತ್ರ ತಂಡ ನಾಯಕಿ ಕಿಯಾರಾ ಅಡ್ವಾಣಿ ಅವರ ಪೋಸ್ಟರ್ ಬಿಟ್ಟಿದೆ. ಈ ಪೋಸ್ಟರ್ ಅಲ್ಲಿ ಕಿಯಾರಾ ಅಡ್ವಾಣಿ ಅವರ ಕ್ಲೋಸ್‌ಅಪ್ ಫೋಟೋ ಇದೆ.

toxic movie kiara advani special photo release on her birthday

ಆಗಸ್ಟ್-26 ರಂದು ಚಿತ್ರ ರಿಲೀಸ್

ಇದು ಅಷ್ಟೆ ಕಲರ್ ಫುಲ್ ಆಗಿಯೇ ಇದೆ. ಈ ಒಂದು ಫೋಟೋ ಮೂಲಕವೇ ಟಾಕ್ಸಿಕ್ ಚಿತ್ರ ತಂಡ ಕಿಯಾರಾ ಅಡ್ವಾಣಿ ಅವರಿಗೆ ಹುಟ್ಟುಹ್ಬದ ಶುಭಾಶಯ ತಿಳಿಸಿದೆ.

ಆಗಸ್ಟ್-26 ರಂದು ಚಿತ್ರ ರಿಲೀಸ್

ಆಗಸ್ಟ್-26 ರಂದು ಟಾಕ್ಸಿಕ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ವಿಶ್ವಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ.

ಗೀತುಮೋಹನ್‌ ದಾಸ್ ಪತಿ ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಮಾಡಿದ್ದಾರೆ. ವಿಶಾಲ್ ಮಿಶ್ರಾ ಸೇರಿದಂತೆ ನವ ಸಂಗೀತ ನಿರ್ದೇಶಕರು ಈ ಚಿತ್ರಕ್ಕೆ ಒಂದೊಂದು ಹಾಡು ಕೂಡ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed