Toxic Movie Teaser Review: ಲೇಡಿ ಪವರ್; ರಾಕಿ ಭಾಯ್ ಜೊತೆ ಅಬ್ಬರಿಸೋ ಸಿಂಹಿಣಿಯರು! | | ACTPnews

ಟಾಕ್ಸಿಕ್ ಚಿತ್ರದ ಲೇಡಿ ಪವರ್; ರಾಕಿ ಭಾಯ್ ಜತೆ ಅಬ್ಬರಿಸೋ ಸಿಂಹಿಣಿಯರು!


Last Updated:

ಟಾಕ್ಸಿಕ್ ಚಿತ್ರದಲ್ಲಿ ನಟಿಮಣಿಯರ ದೊಡ್ಡ ದಂಡೇ ಇದೆ. ಬಾಲಿವುಡ್, ಹಾಲಿವುಡ್ ಹಾಗೂ ದಕ್ಷಿಣದ ನಟಿಯರೂ ಈ ಚಿತ್ರದಲ್ಲಿದ್ದಾರೆ. ಇವರೆಲ್ಲರನ್ನ ಪರಿಚಯಿಸೋ ಟೀಸರ್ ಬಂದಿದೆ. ಇದರಲ್ಲಿ ಏನೆಲ್ಲ ಇದೆ ಅನ್ನೋ ವಿವರ ಇಲ್ಲಿದೆ ಓದಿ.

 ಟಾಕ್ಸಿಕ್ ಚಿತ್ರದ ಲೇಡಿ ಪವರ್; ರಾಕಿ ಭಾಯ್ ಜತೆ ಅಬ್ಬರಿಸೋ ಸಿಂಹಿಣಿಯರು!
ಟಾಕ್ಸಿಕ್ ಚಿತ್ರದ ಲೇಡಿ ಪವರ್; ರಾಕಿ ಭಾಯ್ ಜತೆ ಅಬ್ಬರಿಸೋ ಸಿಂಹಿಣಿಯರು!

ಟಾಕ್ಸಿಕ್ ಚಿತ್ರದಲ್ಲಿ (Toxic Movie) ನಟಿಮಣಿಯರ ದೊಡ್ಡ ದಂಡೇ ಇದೆ. ಬಾಲಿವುಡ್ ನಟಿರಾದ ಕಿಯರಾ ಅಡ್ವಾಣಿ, (Kiara Advani) ಹುಮಾ ಖುರೇಷಿ, ತಾರಾ ಸುತಾರಿಯಾ ಅಭಿನಯಿಸಿದ್ದಾರೆ. ಕನ್ನಡದ ರುಕ್ಮಣಿ ವಸಂತ್, (Rukmini Vasanth) ತಮಿಳಿನ ನಯನತಾರಾ (Nayanthara) ಸಹ ಈ ಚಿತ್ರದಲ್ಲಿದ್ದಾರೆ. ಹಾಲಿವುಡ್‌ನ ನಟಿಯರು ಈ ಸಿನಿಮಾದ ಪ್ರಮುಖ ಭಾಗವೇ ಆಗಿದ್ದಾರೆ. ಇವರೆಲ್ಲರನ್ನ ಪರಿಚಿಸೋ ಒಂದು ಟೀಸರ್ ರೆಡಿ ಆಗಿದೆ. ಜೂನ್-1 ರಂದು ಇದನ್ನ ರಿಲೀಸ್ ಮಾಡಲಾಗಿದೆ. ಇದರಲ್ಲಿ ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.

ಲೇಡೀಸ್ ಆ್ಯಂಡ್ ಲೇಡೀಸ್

ರಾಕಿಂಗ್ ಸ್ಟಾರ್ ಯಶ್ ಇಲ್ಲೂ ಒಂದು ಡೈಲಾಗ್ ಹೊಡೆದಿದ್ದಾರೆ. ಲೇಡೀಸ್ ಆ್ಯಂಡ್ ಲೇಡೀಸ್, ಒಬ್ಬೊಬ್ಬರೇ ಬರ್ತೀರಾ? ಇಲ್ಲ ಒಟ್ಟಿಗೆ ಬರ್ತಿರಾ? ಈ ರೀತಿ ಡೈಲಾಗ್ ಹೊಡೆದು ಕಪ್ಪು ಬಣ್ಣದ ಉಡುಪು ತೊಟ್ಟ ಮಾರ್ಷಲ್ ಆರ್ಟ್ಸ್ ಲೇಡಿ ಪಂಟರ್‌ಗಳ ಜೊತೆಗೆ ಅಷ್ಟೆ ಸ್ಪೂತ್ ಆಗಿಯೇ ರಾಕಿ ಭಾಯ್ ಇಲ್ಲಿ ಫೈಟ್ ಮಾಡಿದ್ದಾರೆ.
Rocking Star Yash Toxic Movie Actress Teaser Review

ಈ ಚಿತ್ರ ಮಕ್ಕಳಿಗೆ ತೋರಿಸ್ಬೇಡಿ

ಈ ಫೈಟ್ ಅಂತು ಸಖತ್ ಆಗಿಯೇ ಇದೆ. ಸಾಮಾನ್ಯ ಫೈಟ್ಸ್ ಅನಿಸೋದೇ ಇಲ್ಲ. ಪಕ್ಕಾ ಹಾಲಿವುಡ್ ರೇಂಜ್‌ಗೇನೆ ಇದೆ. ಇದನ್ನ ನೋಡಿದರೆ, ಕನ್ನಡ ಮಾತನಾಡೋ ಹಾಲಿವುಡ್ ಸಿನಿಮಾ ನೋಡಿದ ಹಾಗೆ ಅನಿಸುತ್ತದೆ ಬಿಡಿ.

ರಾಕಿ ಭಾಯ್ ಸಖತ್ ಲುಕ್

ರಾಕಿಂಗ್ ಸ್ಟಾರ್ ಲುಕ್ ಇಲ್ಲಿ ಕಂಪ್ಲೀಟ್ ವಿಭಿನ್ನವಾಗಿಯೇ ಇದೆ. ಯಂಗ್ ಲುಕ್ ರಾಯಾನಾ? ಅಥವಾ ಟಿಕೆಟ್ ಪಾತ್ರವೇ ಮುಂದೆ ಹೀಗೆ ಆಗುತ್ತಾ? ಈ ಪ್ರಶ್ನೆನೂ ಬರುತ್ತದೆ.

ಆದರೆ, ಇಲ್ಲಿ ಮ್ಯಾಟರ್ ಇದಲ್ಲ ಬಿಡಿ. ಚಿತ್ರದ ಲೇಡಿ ಪಾತ್ರಗಳಿಗೆ ಇಲ್ಲಿ ಅದೆಷ್ಟು ಮಹತ್ವ ಕೊಟ್ಟಿದ್ದಾರೆ ಅನ್ನೋದು ತಿಳಿಯುತ್ತದೆ. ಪ್ರತಿ ಪಾತ್ರಕ್ಕೂ ಇಲ್ಲಿ ಬೆಲೆ ಇದೆ, ಸ್ಪೇಸ್ ಕೂಡ ಇದೆ ನೋಡಿ.

Rocking Star Yash Toxic Movie Actress Teaser Review

ಆಗಸ್ಟ್-26 ಕ್ಕೆ ರಿಲೀಸ್
ಟಾಕ್ಸಿಕ್ ಸಿಂಹಿಣಿಯರು

ಟಾಕ್ಸಿಕ್ ಚಿತ್ರದಲ್ಲಿ ತಾರಾ ಸುತಾರಿಯಾ ಇದ್ದಾರೆ. ಹುಮಾ ಖುರೇಷಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ಅಭಿನಯಿಸಿದ್ದಾರೆ. ರುಕ್ಮಿಣಿ ವಸಂತ್ ನಟಿಸಿದ್ದಾರೆ. ನಯನತಾರಾ ಪಾತ್ರವೂ ಇಲ್ಲಿದೆ.

ಈ ಎಲ್ಲ ಪಾತ್ರಗಳ ಪರಿಯ ಸಖತ್ ಆಗಿಯೇ ಆಗಿದೆ. ಸುಮ್ನೆ ಯಾರನ್ನೂ ಇಲ್ಲಿ ತೋರಿಸಿಯೇ ಇಲ್ಲ. ಆಯಾ ಪಾತ್ರಕ್ಕೆ ಇರೋ ಗತ್ತು ಗಾಂಭೀರ್ಯವನ್ನ ಇಲ್ಲಿ ನೋಡಬಹುದು.

ಈ ಚಿತ್ರ ಮಕ್ಕಳಿಗೆ ತೋರಿಸ್ಬೇಡಿ

ಈ ಒಂದು ಮಾತು ಟೀಸರ್ ಆರಂಭದಲ್ಲಿಯೇ ಇದೆ. ಇದನ್ನ ಇಂಗ್ಲೀಷ್ ಅಲ್ಲಿಯೇ ಹೇಳಲಾಗಿದೆ. ಮಕ್ಕಳಿಗೆ ಈ ಚಿತ್ರ ತೋರಿಸಬೇಡಿ ಅನ್ನುವ ಮಾತೇ ಇಲ್ಲಿದೆ.

Rocking Star Yash Toxic Movie Actress Teaser Review

ಲೇಡೀಸ್ ಆ್ಯಂಡ್ ಲೇಡೀಸ್

ಮಕ್ಕಳು ಈ ಚಿತ್ರ ನೋಡದ ಹಾಗೆ ನೋಡಿಕೊಳ್ಳಿ ಅಂತ ಪೋಷಕರಿಗೂ ಇಲ್ಲಿ ಒಂದು ಸಲಹೆ ಇದೆ. ಅಜ್ಜಂದಿರು ತಮ್ಮ ಮೊಮ್ಮಕ್ಕಳು ಈ ಟೀಸರ್ ನೋಡದಂತೆ ನೋಡಿಕೊಳ್ಳಿ ಅಂತಲೂ ಇಲ್ಲಿ ಹೇಳಿದ್ದಾರೆ. ಮುತ್ತಜ್ಜಂದಿರು ನಿಮ್ಮ ರಿಸ್ಕ್ ಮೇಲೆ ಈ ಚಿತ್ರ ನೋಡಿ ಅಂತಲೂ ಇಲ್ಲಿಯೇ ಹೇಳಿದ್ದಾರೆ.

ಆಗಸ್ಟ್-26 ಕ್ಕೆ ರಿಲೀಸ್

ಟಾಕ್ಸಿಕ್ ಚಿತ್ರದ ಈ ಹಿಂದಿನ ಟೀಸರ್ ಬೇರೆ ಇವೆ. ಆದರೆ, ಈ ಟೀಸರ್ ಬೇರೇನೆ ಇದೆ. ಇಡೀ ಚಿತ್ರದ ನಟಿಮಣಿಯರು ಅದೆಷ್ಟು ಸ್ಟ್ರಾಂಗ್ ಅನ್ನೋದನ್ನು ಇಲ್ಲಿ ತೋರಿಸಿದ್ದಾರೆ.

ಗೀತು ಮೋಹನ್ ದಾಸ್ ಅವರ ನಿರ್ದೇಶನ ಈ ಚಿತ್ರ ಬಹು ಕೋಟಿ ವೆಚ್ಚದಲ್ಲಿಯೇ ರೆಡಿ ಆಗಿದೆ. ಆಗಸ್ಟ್-26 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಗೀತು ಮೋಹನ್‌ದಾಸ್ ಪತಿ ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports