Last Updated:
ಮಾಫಿ ಸಾಕ್ಷಿ ಢವಢವದ ನಡುವೆಯೇ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರೋ ಪವಿತ್ರಾ ಗೌಡಗೆ ಹೊಸ ಸಂಕಷ್ಟ ಶುರುವಾಗಿದೆ.
ಬೆಂಗಳೂರು (ಸೆ.03): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ನಟ ದರ್ಶನ್ ಜೊತೆ ಗೆಳತಿ ಹಾಗೂ ನಟಿ ಪವಿತ್ರಾ ಗೌಡ (Pavithra Gowda) ಕೂಡ ಜೈಲು ಸೇರಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾದ ಹಿನ್ನೆಲೆ ಸದ್ಯ ದರ್ಶನ್ (Darshan) ಹಾಗೂ ಪವಿತ್ರಾಗೆ ಜೈಲೇ ಗತಿಯಾಗಿದೆ. ಮಾಫಿ ಸಾಕ್ಷಿ ಢವಢವದ ನಡುವೆಯೇ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರೋ (Jail) ಪವಿತ್ರಾ ಗೌಡಗೆ ಹೊಸ ಸಂಕಷ್ಟ ಶುರುವಾಗಿದೆ. ನನ್ನನ್ನು ಇಲ್ಲಿಂದ ಶಿಫ್ಟ್ ಮಾಡಿ ಅಂತ ಕೋರ್ಟ್ (Court) ಮೊರೆ ಹೋಗಿದ್ದಾರೆ ದಾಸನ ಗೆಳತಿ..














