Toxic Movie: ಟಾಕ್ಸಿಕ್ ಚಿತ್ರದ ಹುಮಾ ಖುರೇಷಿ ಬ್ಯೂಟಿಫುಲ್ ಪೋಸ್ಟರ್ ಔಟ್; ಯಾಕೆ ಗೊತ್ತಾ? | | ACTPnews

ಟಾಕ್ಸಿಕ್ ಚಿತ್ರದ ಹುಮಾ ಖುರೇಷಿ ಬ್ಯೂಟಿಫುಲ್ ಪೋಸ್ಟರ್ ಔಟ್; ಯಾಕೆ ಗೊತ್ತಾ?


Last Updated:

ಟಾಕ್ಸಿಕ್ ಚಿತ್ರದ ಮತ್ತೊಂದು ಹೊಸ ಪೋಸ್ಟರ್ ರಿಲೀಸ್ ಆಗಿದೆ. ಮೊನ್ನೆ ಯಶ್ ಪಾತ್ರದ ಪೋಸ್ಟರ್ ಬಂದಿತ್ತು. ಈಗ ನಟಿ ಹುಮಾ ಖುರೇಷಿ ಅವರ ಬ್ಯೂಟಿಫುಲ್ ಪೋಸ್ಟರ್ ರಿಲೀಸ್ ಆಗಿದೆ. ಯಾಕೆ ಅನ್ನೋ ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಚಿತ್ರದ ಹುಮಾ ಖುರೇಷಿ ಬ್ಯೂಟಿಫುಲ್ ಪೋಸ್ಟರ್ ಔಟ್; ಯಾಕೆ ಗೊತ್ತಾ?
ಟಾಕ್ಸಿಕ್ ಚಿತ್ರದ ಹುಮಾ ಖುರೇಷಿ ಬ್ಯೂಟಿಫುಲ್ ಪೋಸ್ಟರ್ ಔಟ್; ಯಾಕೆ ಗೊತ್ತಾ?

ಟಾಕ್ಸಿಕ್ ಚಿತ್ರ (Toxic Movie) ತಂಡ ವಿಶೇಷ ಪೋಸ್ಟರ್ ರಿಲೀಸ್ (Poster Release) ಮಾಡಿದೆ. ಚಿತ್ರದಲ್ಲಿ ಎಲಿಜಬೆತ್ (Elizabeth) ಪಾತ್ರಧಾರಿ ಹುಮಾ ಖುರೇಷಿ (Huma Qureshi) ಅವರ ಪೋಸ್ಟರ್ ಇದಾಗಿದೆ. ಜುಲೈ-28 ರಂದು ಹುಮಾ ಖುರೇಷಿ ಜನ್ಮದಿನ ಇದೆ. ಈ ಹಿನ್ನೆಲೆಯಲ್ಲಿಯೇ ಚಿತ್ರದ ಒಂದು ಬ್ಯೂಟಿಫುಲ್ ಪೋಸ್ಟರ್ ರಿಲೀಸ್ ಆಗಿದೆ. ಈ ಮೂಲಕ ಟಾಕ್ಸಿಕ್ ತಂಡ ನಟಿ ಹುಮಾ ಖುರೇಷಿ ಅವರಿಗೆ ಶುಭಾಶಯ ತಿಳಿಸಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

40 ನೇ ಜನ್ಮ ದಿನ

ಹುಮಾ ಖುರೇಷಿ ಅವರಿಗೆ 40 ಆಯಿತು ನೋಡಿ. 40 ನೇ ಜನ್ಮ ದಿನದ ಸಂಭ್ರಮದಲ್ಲಿರೋ ಹುಮಾ ಖುರೇಷಿ ಅವರಿಗೆ ಟಾಕ್ಸಿಕ್ ಚಿತ್ರ ತಂಡ ಸ್ಪೆಷಲ್ ಆಗಿಯೇ ವಿಶ್ ಮಾಡಿದೆ.
toxic movie huma qureshi elizabeth role poster release on her birthday

ಗೀತು ಮೋಹನ್‌ದಾಸ್ ಸಿನಿಮಾ

ಚಿತ್ರದಲ್ಲಿ ಇವರು ಎಲಿಜಬೆತ್ ಅನ್ನುವ ಪಾತ್ರ ಮಾಡಿದ್ದಾರೆ. ಈ ಒಂದು ಪಾತ್ರ ಅಷ್ಟೆ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಅನಿಸುತ್ತದೆ. ಹಾಗಾಗಿಯೇ ಈ ಚಿತ್ರದ ಒಂದು ಚೆಂದದ ಫೋಸ್ಟರ್ ಅನ್ನ ರಿಲೀಸ್ ಮಾಡಲಾಗಿದೆ.

ಪೋಸ್ಟರ್ ಮೂಲಕ ವಿಶ್

ಈಗಾಗಲೇ ಹೇಳಿದಂತೆ ಟಾಕ್ಸಿಕ್ ಚಿತ್ರ ತಂಡ ಹುಮಾ ಖುರೇಷಿ ಅವರಿಗೆ ವಿಶ್ ಮಾಡಿದೆ. ಚಿತ್ರದ ಪೋಸ್ಟರ್ ರಿಲೀಸ್ ಮಾಡೋ ಮೂಲಕವೇ ಈ ಒಂದು ವಿಶ್ ತಿಳಿಸಿದೆ.

ಈ ಕಲಾವಿದೆಯರ ದಂಡಿನಲ್ಲಿ ಹುಮಾ ಖುರೇಷಿ ಕೂಡ ಇದ್ದಾರೆ. ಇವರ ಪಾತ್ರಕ್ಕೂ ಅಷ್ಟೆ ಮಹತ್ವ ಇದೆ. ಅದು ಈ ಪೋಸ್ಟರ್ ಅಲ್ಲೂ ತಿಳಿಯುತ್ತಿದೆ.

ಆಗಸ್ಟ್-26 ಕ್ಕೆ ಟಾಕ್ಸಿಕ್ ರಿಲೀಸ್

ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದನ್ನ ಚಿತ್ರ ತಂಡ ಹೇಳಿಕೊಂಡಿದೆ. ಅಧಿಕೃತವಾಗಿಯೇ ಈ ವಿಷಯ ಹೊರ ಬಂದಿದೆ. ಈ ಚಿತ್ರ ರಿಲೀಸ್ ಆಗುವುದಕ್ಕೆ ಇನ್ನು ಒಂದು ತಿಂಗಳು ಮಾತ್ರ ಉಳಿದಿದೆ.

toxic movie huma qureshi elizabeth role poster release on her birthday

40 ನೇ ಜನ್ಮ ದಿನ

ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರವು ಶುರು ಆಗಿದೆ. ಮೊನ್ನೆ ಜುಲೈ-26 ರಂದು ಚಿತ್ರದ ಒಂದು ಪೋಸ್ಟರ್ ರಿಲೀಸ್ ಆಯಿತು. ಇದು ಯಶ್ ಅವರ ಪೋಸ್ಟರ್ ಆಗಿತ್ತು. ಈ ಮೂಲಕ ಚಿತ್ರ ರಿಲೀಸ್‌ಗೆ ಬರೋಬ್ಬರಿ ಒಂದು ತಿಂಗಳು ಬಾಕಿ ಅನ್ನೋದು ಗೊತ್ತಾಗಿತ್ತು.

ಗೀತು ಮೋಹನ್‌ದಾಸ್ ಸಿನಿಮಾ

ಟಾಕ್ಸಿಕ್ ಚಿತ್ರವನ್ನ ಯಶ್ ಹಾಗೂ ಗೀತು ಮೋಹನ್‌ದಾಸ್ ಒಟ್ಟಿಗೆ ಸೇರಿಯೇ ಬರೆದಿದ್ದಾರೆ. ಡೈರೆಕ್ಷನ್ ಅಂತ ಬಂದ್ರೆ ಅದನ್ನ ಗೀತು ಮೋಹನ್‌ದಾಸ್ ಮಾಡಿದ್ದಾರೆ.

ಯಶ್ ಅವರ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಪ್ರಮೋದ್ ಮರವಂತೆ ಹಾಗೂ ಯೋಗರಾಜ್ ಭಟ್ ಈ ಚಿತ್ರದ ಕನ್ನಡ ಹಾಡು ಬರೆದಿದ್ದಾರೆ. ಹಾಡುಗಳ ಮ್ಯೂಸಿಕ್ ಅಂತ ಬಂದಾಗ ವಿಶಾಲ್ ಮಿಶ್ರಾ ಸೇರಿದಂತೆ ಯುವ ನಿರ್ದೇಶಕರು ಒಂದೊಂದು ಹಾಡು ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed