Darshan: ದರ್ಶನ್ ಪಾಲಿಗೆ ಎಲ್ಲಾ ಬಾಗಿಲುಗಳು ಬಂದ್​; ‘ಮಾಫಿ ಸಾಕ್ಷಿ’ ನುಡಿದ್ರೆ ‘ಕಾಟೇರ’ನ ಕಥೆ ಏನಾಗುತ್ತೆ? | | ACTPnews

News18


Last Updated:

ಮಾಫಿ ಸಾಕ್ಷಿ ಹೇಳಿ ದಾಖಲಿಸಲು ಸೆ.28 ರಂದು ದಿನಾಂಕ ನಿಗದಿ ಮಾಡಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದ್ದು, ದರ್ಶನ್ ಹಾಗೂ ಪವಿತ್ರಾ ಗೌಡಗೂ ಟೆನ್ಷನ್ ಶುರುವಾಗಿದೆ. ಮಾಫಿ ಸಾಕ್ಷಿ ನುಡಿದ ಬಳಿಕ ದರ್ಶನ್​ ಕಥೆ ಏನಾಗುತ್ತೆ?

News18
News18

ಬೆಂಗಳೂರು (ಸೆ.24): ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy Case) ಫಿಟ್ ಆಗಿರೋ ನಟ ದರ್ಶನ್​​ಗೆ ಸಾಲು ಸಾಲು ಸಂಕಷ್ಟಗಳು ಎದುರಾಗ್ತಾನೆ ಇದೆ. ಜೈಲು ಸೇರಿ ವರ್ಷ ಕಳೆದ್ರೂ ಹೊರ ಬರೋಕೆ ಒಂದೇ ಒಂದು ಚಾನ್ಸ್​ ಕೂಡ ಸಿಗ್ತಿಲ್ಲ. ದರ್ಶನ್ (Darshan) ಪರವಾಗಿ ಪತ್ನಿ ವಿಜಯಲಕ್ಷ್ಮಿ ಅವರು ಮಾಡ್ತಿರೋ ಕಾನೂನು ಹೋರಾಟಗಳು ಕೂಡ ವಿಫಲವಾಗ್ತಿದೆ. ಈ ಬೆಳವಣಿಗೆಗಳ ನಡುವೆ ಆಪ್ತ ಹಾಗೂ ಆರೋಪಿ ಆಗಿರೋ ಪ್ರದೋಷ್ ದರ್ಶನ್​ಗೆ​ ‘ಮಾಫಿ ಸಾಕ್ಷಿ’ಯ ಶಾಕ್ ಕೊಟ್ಟಿದ್ದಾರೆ. ಇದೀಗ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಲು ಕೋರ್ಟ್​ ದಿನಾಂಕ್​ ಫಿಕ್ಸ್ ಮಾಡಿದ್ದು, ದರ್ಶನ್​ಗೆ ಢವಢವ ಶುರುವಾಗಿದೆ. ಪ್ರದೋಷ್ ತಪ್ಪೊಪ್ಪಿಕೊಂಡ್ರೆ ದರ್ಶನ್​​ಗೆ ಏನೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ದರ್ಶನ್​, ಪವಿತ್ರಾಗೆ ‘ಮಾಫಿ ಸಾಕ್ಷಿ’ ಢವಢವ

ಮಾಫಿ ಸಾಕ್ಷಿ ಮುಂದೂಡಿಕೆ ಮಾಡಲು ನಟ ದರ್ಶನ್ ಪರ ಪತ್ನಿ ವಿಜಯಲಕ್ಷ್ಮಿ 2 ಬಾರಿ ಹೈಕೋರ್ಟ್​ ಮೆಟ್ಟಿಲೇರಿದ್ರೂ ಪ್ರಯೋಜನವಾಗಿಲ್ಲ. ಅರ್ಜಿಗಳು ವಜಾಗೊಂಡು ಎಲ್ಲಾ ಪ್ರಯತ್ನಗಳು ನೀರಿನಲ್ಲಿ ಹುಳಿ ತೇಯ್ದಂತಾಗಿದೆ. ಇದರ ಬೆನ್ನಲ್ಲೇ  ಪ್ರದೂಷ್ ಹೇಳಿಕೆ ದಾಖಲಿಸಲು ನ್ಯಾಯಾಲಯ ಡೇಟ್ ಫಿಕ್ಸ್ ಮಾಡಿದೆ. ಮಾಫಿ ಸಾಕ್ಷಿ ಹೇಳಿ ದಾಖಲಿಸಲು ಸೆ.28 ರಂದು ದಿನಾಂಕ ನಿಗದಿ ಮಾಡಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದ್ದು, ದರ್ಶನ್ ಹಾಗೂ ಪವಿತ್ರಾ ಗೌಡಗೂ ಟೆನ್ಷನ್ ಶುರುವಾಗಿದೆ.

ಪ್ರದೋಷ್ ಹೇಳಿಕೆ ದರ್ಶನ್ ಪಾಲಿಗೆ ಕುಣಿಕೆ!

ರೇಣುಕಾಸ್ವಾಮಿ ಕೊಲೆ ಕೇಸ್​ನ 14ನೇ ಆರೋಪಿ ಪ್ರದೋಶ್​​ ಅಪ್ರೋವರ್ ಆಗೋದಾಗಿ ಮುಂದೆ ಬಂದಿದ್ದು, ಇದು ದರ್ಶನ್-ಪವಿತ್ರಾ ಸೇರಿದಂತೆ ಉಳಿದ ಆರೋಪಿಗಳಿಗೂ ದೊಡ್ಡ ತಲೆ ಬಿಸಿ ಆಗಿದೆ. ಕೊಲೆ ಕೇಸ್​​ನಲ್ಲಿ ಯಾರ ಪಾತ್ರ ಏನಿದೆ ಅನ್ನೋ ಅಸಲಿ ಸತ್ಯವನ್ನ ಪ್ರದೋಷ್ ಬಾಯ್ಬಿಟ್ಟರೆ ಉಳಿದ ಆರೋಪಿಗಳ ಕಥೆ ಏನಾಗುತ್ತೆ ಅನ್ನೋ ಟೆನ್ಷನ್​ ದರ್ಶನ್​​ಗೆ ತುಸು ಹೆಚ್ಚಾಗಿದೆ.

ಕೋರ್ಟ್ ಮುಂದೆ ಬಯಲಾಗಲಿದೆ ಅಸಲಿ ಸತ್ಯ!

ಕೊಲೆ ಕೇಸ್​ನಲ್ಲಿ ಪ್ರದೋಷ್ ಪ್ರಮುಖ ಆರೋಪಿ ಆಗಿದ್ದು, ದರ್ಶನ್ ಜೊತೆಯಲ್ಲೇ ಇದ್ದು ಎಲ್ಲಾ ಕೃತ್ಯಕ್ಕೂ ಸಾಕ್ಷಿ ಆಗಿದ್ದಾರೆ ಎನ್ನಲಾಗ್ತಿದೆ. ಇದೀಗ ಪ್ರದೋಷ್​ ತಾನು ಬಚಾವ್ ಆಗಲು ಮಾಫಿ ಸಾಕ್ಷಿ ಆಗ್ತಿದ್ದಾರೆ. ಕೇಸ್​​ನಲ್ಲಿ ನಡೆದ ಎಲ್ಲಾ ಅಸಲಿ ವಿಚಾರಗಳ ಕೋರ್ಟ್ ಮುಂದೆ ಬಿಚ್ಚಿಡಲಿದ್ದಾರೆ.

ಮಾಫಿ ಸಾಕ್ಷಿ ನುಡಿದ್ರೆ ದರ್ಶನ್ ಕಥೆ ಏನಾಗುತ್ತೆ?

ಪ್ರಕರಣಕ್ಕೆ ದೊಡ್ಡ ತಿರುವು:

ರೇಣುಕಾಸ್ವಾಮಿ ಕೊಲೆ ನಡೆದಿದ್ದು ಹೇಗೆ? ಸಂಚು ರೂಪಿಸಿದ್ದು ಯಾರು? ಹೇಗೆ? ಅದರಲ್ಲಿ ದರ್ಶನ್ ಪಾತ್ರ ಏನಿತ್ತು ಅನ್ನೋ ಎಲ್ಲಾ ಒಳ ಸತ್ಯಗಳು ನ್ಯಾಯಾಲಯದ ಮುಂದೆ ಅಧಿಕೃತವಾಗಿ ದಾಖಲಾಗಲಿದೆ.

ದರ್ಶನ್ ವಿರುದ್ಧ ಸಾಕ್ಷ್ಯಗಳ ಸಂಗ್ರಹ:

ಮಾಫಿ ಸಾಕ್ಷಿಯೇ ಘಟನೆಯ ಸಂಪೂರ್ಣ ವಿವರ ನೀಡುವುದ್ರಿಂದ, ಪೊಲೀಸರು ಕಲೆಹಾಕಿರುವ ಡಿಜಿಟಲ್ ಹಾಗೂ ಇತರ ಸಾಕ್ಷ್ಯಗಳಿಗೆ ಮತ್ತಷ್ಟು ಕಾನೂನು ಬಲ ಸಿಗುತ್ತೆ. ಇದು ದರ್ಶನ್ ವಿರುದ್ಧದ ಆರೋಪಗಳು ಸಾಬೀತಾಗಲು ನೆರವಾಗಲಿದೆ.

ದರ್ಶನ್ ಪಾಲಿಗೆ ಸಂಕಷ್ಟ: 

ಮಾಫಿ ಸಾಕ್ಷಿ ನುಡಿದ ವಿಚಾರಗಳು ದರ್ಶನ್ ವಿರುದ್ಧವಾಗಿದ್ರೆ ನಟನಿಗೆ ದೊಡ್ ಸಂಕಷ್ಟ ಎದುರಾಗಲಿದೆ. ಜಾಮೀನು ಸಿಗೋದೆ ಕಷ್ಟ ಕಷ್ಟವಾಗಲಿದೆ.

ಶಿಕ್ಷೆಯ ಪ್ರಮಾಣ ಹೆಚ್ಚಲಿದೆ: ನ್ಯಾಯಾಲಯದಲ್ಲಿ ಕೊಲೆ ಮತ್ತು ಸಂಚಿನ ಆರೋಪಗಳು ಸಾಬೀತಾದ್ರೆ ದರ್ಶನ್​ಗೆ ನೀಡುವ ಶಿಕ್ಷೆ ಪ್ರಮಾಣ ಕೂಡ ಹೆಚ್ಚುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed