Tirumala: ದಯಮಾಡಿ ಅಲ್ಲಿವರೆಗೂ ತಿರುಮಲಕ್ಕೆ ಬರಬೇಡಿ, ಭಕ್ತರಿಗೆ ಟಿಟಿಡಿ ವಿಶೇಷ ಮನವಿ; ತಿಮ್ಮಪ್ಪನ ದರ್ಶನಕ್ಕೆ ಬರೋಬ್ಬರಿ 30 ಗಂಟೆಗಳ ಕಾಲ ಕಾಯಲೇಬೇಕು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಬುಧವಾರ ಒಂದು ದಿನ 86,315 ಮಂದಿ ಭಕ್ತರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದು, 44,107 ಮಂದಿ ಮುಡಿ ಅರ್ಪಿಸಿದ್ದಾರೆ. ಒಂದು ದಿನ ಹುಂಡಿ ಆದಾಯ 3.94 ಕೋಟಿ ರೂಪಾಯಿ ದಾಖಲಾಗಿದೆ.

News18
News18

Tirumala: ಪವಿತ್ರ ಪುಣ್ಯಕ್ಷೇತ್ರ ಕೋಟಿ ಕೋಟಿ ಭಕ್ತರು ವೈಕುಂಠವಾಗಿ (Vaikuntha) ಭಾವಿಸಿ ಆಗಮಿಸುವ ತಿರುಮಲ ಕ್ಷೇತ್ರ (TTD) ಭಕ್ತರೊಂದಿಗೆ ತುಂಬಿ ತುಳುಕುತ್ತಿದೆ. ಬೇಸಿಗೆ ರಜೆ, ವಿದ್ಯಾರ್ಥಿಗಳಿಗೆ (Parents and Children) ಪರೀಕ್ಷೆ ಪೂರ್ತಿ ಆಗಿರುವುದು, ಪರೀಕ್ಷಾ ಫಲಿತಾಂಶಗಳು ಬಿಡುಗಡೆಯಾಗಿರುವ ಕಾರಣ ಲಕ್ಷಾಂತರ ಮಂದಿ ಭಕ್ತರು ತಿರುಮಲಕ್ಕೆ (Devotees) ಆಗಮಿಸುತ್ತಿದ್ದಾರೆ. ಇದರೊಂದಿಗೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಮಹತ್ವದ ಆದೇಶಗಳನ್ನು ನೀಡಿದೆ.

ಸುಮಾರು 25-30 ಗಂಟೆ ವರೆಗೂ ತಿರುಮಲದಲ್ಲಿ ಭಕ್ತರು ಕಾಯಬೇಕಿದೆ. ಆದ್ದರಿಂದ ಮಕ್ಕಳು, ವೃದ್ಧರು ಆಗಮಿಸಬಾರದು ಎಂದು ಸೂಚನೆ ನೀಡಿದೆ. ಒಂದು ಕಡೆ ಬೇಸಿಗೆಯ ತೀವ್ರತೆ ಕೂಡ ಹೆಚ್ಚಾಗಿದೆ. ಮತ್ತೊಂದು ಕಡೆ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಟಿಟಿಡಿ ಮಹತ್ವದ ಮುನ್ನೆಚ್ಚರಿಕೆ ಕೈಗೊಂಡಿದ್ದು, ಭಕ್ತರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಶ್ರಿವಾರಿ ದರ್ಶನಕ್ಕೆ ಕನಿಷ್ಠ 30 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.

ತಿರುಮಲದಲ್ಲಿ ಬೇಸಿಗೆ ಎಫೆಕ್ಟ್!

ತಿರುಮಲದಲ್ಲಿ ಭಕ್ತರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಬೇಸಿಗೆ ರಜೆ, ಪರೀಕ್ಷೆಗಳು ಮುಕ್ತಾಯ ಆಗುತ್ತಿರುವುದರಿಂದ ದೇಶದ ಮೂಲೆ ಮೂಲೆಯಿಂದ ಶ್ರೀವಾರಿ ಭಕ್ತರು ಆಗಮಿಸುತ್ತಿದ್ದಾರೆ. ಇದರೊಂದಿಗೆ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಕ್ಯೂ ಲೈನ್​ಗಳು ಹಾಗೂ ರಸ್ತೆಗಳು ಸಂಪೂರ್ಣವಾಗಿ ಭಕ್ತರಿಂದ ತುಂಬಿ ಹೋಗಿದೆ. ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಯಾವುದೇ ಶಿಫಾರಸ್ಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ಟಿಟಿಡಿ ಹೇಳಿದೆ. ಇದರೊಂದಿಗೆ ಸಾಮಾನ್ಯ ಭಕ್ತರೊಂದಿಗೆ ಆಗಮಿಸುತ್ತಿರುವ ವಾಹನಗಳು ಅಲಿಪಿಡಿ ಟೋಲ್ ಗೇಟ್​​ನಿಂದ ಗರುಡ ಸರ್ಕಲ್ ವರೆಗೂ ವಾಹನಗಳು ಟ್ರಾಫಿಕ್ ಕೂಡ ಹೆಚ್ಚಾಗುತ್ತಿದೆ.

ದರ್ಶನಕ್ಕೆ 30 ಗಂಟೆ ಸಮಯ

ಬುಧವಾರ ಮಧ್ಯಾಹ್ನ ಭಕ್ತರ ಸಂಖ್ಯೆ ಒಂದೇ ಬಾರಿಗೆ ಹೆಚ್ಚಾಗಿದ್ದು, ಟಿಟಿಡಿ ಅಧಿಕಾರಿಗಳು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 08 ವರೆಗೂ ಸರ್ವದರ್ಶನ ಕ್ಯೂ ಲೈನ್​ಗಳನ್ನು ತಾತ್ಕಾಲಿಕವಾಗಿ ಕ್ಲೋಸ್ ಮಾಡಿದ್ದಾರೆ. ಮತ್ತೆ ರಾತ್ರಿ 8 ಗಂಟೆಗೆ ಭಕ್ತರಿಗೆ ಕ್ಯೂ ಲೈನ್​​ಗೆ ಎಂಟ್ರಿಯಾಗಲು ಅವಕಾಶ ನೀಡಿದ್ದರು. ಇಂದು ಬೆಳಗ್ಗೆ ವೇಳೆಗೆ ವೈಕುಂಠ ಕ್ಯೂ ಕಾಂಪ್ಲೆಕ್ಸ್‌ನಲ್ಲಿರುವ ಎಲ್ಲಾ ಕಾಂಪ್ಲೆಕ್ಸ್​ಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಕ್ಯೂ ಲೈನ್ ಆಕ್ಟೋಪಸ್ ಭವನದ ವರೆಗೂ ಸಾಗುತ್ತಾ ಬಂದಿವೆ.

ಕ್ಯೂ ಲೈನ್​​ನಲ್ಲಿ ಭಕ್ತರಿಗೆ ಸಂಕಷ್ಟ!

ಸದ್ಯ ಸರ್ವದರ್ಶನ ಟೋಕನ್​ಗಳು ಇಲ್ಲದೇ ಬರುವ ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಲು 30 ಗಂಟೆ ತೆಗೆದುಕೊಳ್ಳುತ್ತಿದೆ. ಟೋಕನ್​ಗಳು ಇರುವವರಿಗೆ 6 ರಿಂದ 7 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. 300 ರೂಪಾಯಿ ಪ್ರತ್ಯೇಕ ದರ್ಶನಕ್ಕೆ 4-5 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿ: Bengaluru: ತಲೆ ಮೇಲೆ ಐಫೋನ್, ಬೆಂಗಳೂರು ತರಕಾರಿ ವ್ಯಾಪಾರಿಗೆ ಎಐ ಕೆಲಸ; ಗಂಟೆಗೆ Rs 350 ಸಂಬಳ!

ಬುಧವಾರ ಒಂದು ದಿನ 86,315 ಮಂದಿ ಭಕ್ತರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದು, 44,107 ಮಂದಿ ಮುಡಿ ಅರ್ಪಿಸಿದ್ದಾರೆ. ಒಂದು ದಿನ ಹುಂಡಿ ಆದಾಯ 3.94 ಕೋಟಿ ರೂಪಾಯಿ ದಾಖಲಾಗಿದ್ದು, ಭಕ್ತರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಟಿಟಿಡಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ಕ್ಯೂನಲ್ಲಿ ನಿಂತಿರುವ ಭಕ್ತರಿಗೆ ಸಮಸ್ಯೆ ಎದುರಾಗದಂತೆ ನೀರು, ಆಹಾರ ವ್ಯವಸ್ಥೆಗಳನ್ನು ನೀಡುತ್ತಿದ್ದು, ಬೇಸಿಗೆಯ ತೀವ್ರತೆ ಹೆಚ್ಚಾಗಿರುವ ಕಾರಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ದೇಶ-ವಿದೇಶ/

Tirumala: ದಯಮಾಡಿ ಅಲ್ಲಿವರೆಗೂ ತಿರುಮಲಕ್ಕೆ ಬರಬೇಡಿ, ಭಕ್ತರಿಗೆ ಟಿಟಿಡಿ ವಿಶೇಷ ಮನವಿ; ತಿಮ್ಮಪ್ಪನ ದರ್ಶನಕ್ಕೆ ಬರೋಬ್ಬರಿ 30 ಗಂಟೆಗಳ ಕಾಲ ಕಾಯಲೇಬೇಕು!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed