Last Updated:
ಬಿಎಂಟಿಸಿ ತುಮಕೂರು ಬೆಂಗಳೂರು ನಡುವೆ ಹೊಸ ವಜ್ರ ವಿಸ್ತಾರ ವೋಲ್ವೋ ಎಸಿ ಬಸ್ ಆರಂಭ, 10 ಬಸ್ 54 ಟ್ರಿಪ್, 20 ನಿಮಿಷಕ್ಕೊಂದು ಬಸ್, ದರ ಗರಿಷ್ಠ 120, ವಿದ್ಯಾರ್ಥಿ ಉದ್ಯೋಗಿಗಳಿಗೆ ಅನುಕೂಲ
ಬೆಂಗಳೂರು: ತುಮಕೂರು (Tumakuru) ಮತ್ತು ಬೆಂಗಳೂರು (Bengaluru) ನಡುವೆ ನಿತ್ಯ ಓಡಾಡುವ ಸಾವಿರಾರು ಪ್ರಯಾಣಿಕರಿಗೆ ಬಿಎಂಟಿಸಿ ದೊಡ್ಡ ಉಡುಗೊರೆ ನೀಡಿದೆ. ಹೊಸ ವಜ್ರ ವಿಸ್ತಾರ ವೋಲ್ವೋ ಎಸಿ ಬಸ್ (Volvo Bus Service) ಸೇವೆ ಈಗ ಈ ಮಾರ್ಗದ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕ, ವೇಗವಾದ ಮತ್ತು ಸುರಕ್ಷಿತವಾಗಿಸಿದೆ.
ಈ ಹೊಸ ಸೇವೆಯಲ್ಲಿ ಪ್ರತಿದಿನ 10 ಬಸ್‌ಗಳು ಬೆಂಗಳೂರು–ತುಮಕೂರು ನಡುವೆ 54 ಟ್ರಿಪ್‌ಗಳು ಸಂಚರಿಸಲಿವೆ. ಪ್ರತಿ 20 ನಿಮಿಷಕ್ಕೊಂದು ಬಸ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ನಿರಂತರ ಸಂಪರ್ಕ ಸಿಗಲಿದೆ. ಮಾರ್ಗದಲ್ಲಿ ಒಟ್ಟು 8 ನಿಲ್ದಾಣಗಳು ಇರಲಿದ್ದು, ದರವನ್ನು ದೂರಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ.
ಈ ಹೊಸ ಸೇವೆಯಲ್ಲಿನ ಟಿಕೆಟ್ ದರಗಳು ಹೀಗಿವೆ
- ನವರಂಗ್ – ₹25
- ಗೋವರ್ಧನ್ ಟಾಕೀಸ್ – ₹35
- ಗೊರಗುಂಟೆಪಾಳ್ಯ – ₹35
- ಜಾಲಹಳ್ಳಿ ಕ್ರಾಸ್ – ₹40
- ಟಿ. ದಾಸರಹಳ್ಳಿ – ₹40
- 8ನೇ ಮೈಲಿ – ₹40
- ವೀಡಿಯಾ ನಿಲ್ದಾಣ – ₹50
- ಕ್ಯಾತಸಂದ್ರ – ₹120
- ತುಮಕೂರು – ₹120
ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಹೆಬ್ಬಾಳ, ಯಲಹಂಕ ಮತ್ತು ದೇವನಹಳ್ಳಿ ಮಾರ್ಗವಾಗಿ ಜಂಗಮಕೋಟೆಯ ವಿಜಯಪುರ ಬಸ್ ಸ್ಟ್ಯಾಂಡ್‌ಗೆ ಸಂಪರ್ಕ ಕಲ್ಪಿಸುವ ಬಸ್ ಸೇವೆ (ವಿಶೇಷವಾಗಿ EX-298M ಎಕ್ಸ್‌ಪ್ರೆಸ್ ಮತ್ತು 293-ZA) ಪ್ರಯಾಣಿಕರಿಗೆ ಅತ್ಯಂತ ಸಹಕಾರಿಯಾಗಿದೆ. ಈ ಮಾರ್ಗದಲ್ಲಿ ಒಟ್ಟು 8 ಬಸ್ಸುಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಎರಡೂ ದಿಕ್ಕುಗಳಲ್ಲಿ ಸೇರಿ 47 ಕ್ಕೂ ಹೆಚ್ಚು ಏಕಮುಖ ಟ್ರಿಪ್‌ಗಳನ್ನು ಹೊಡೆಯುತ್ತವೆ. ಮೆಜೆಸ್ಟಿಕ್‌ನಿಂದ ಮೊದಲ ಬಸ್ ಬೆಳಗ್ಗೆ 6:20ಕ್ಕೆ ಆರಂಭವಾದರೆ, ಕೊನೆಯ ಬಸ್ ರಾತ್ರಿ 9:30ಕ್ಕೆ ಹೊರಡುತ್ತದೆ. ಹಾಗೆಯೇ ವಿಜಯಪುರದಿಂದ ಬೆಳಗ್ಗೆ 6:10ಕ್ಕೆ ಮೊದಲ ಸೇವೆ ಮತ್ತು ರಾತ್ರಿ 9:00 ಗಂಟೆಗೆ ಕೊನೆಯ ಬಸ್ ಲಭ್ಯವಿರುತ್ತದೆ.
ನಂದಿ ಬೆಟ್ಟಕ್ಕೆ ಹೋಗೋದು ಇನ್ನೂ ಸುಲಭ!
ದೇವನಹಳ್ಳಿಯಿಂದ ಆವತಿ ಮತ್ತು ವೆಂಕಟಗಿರಿ ಕೋಟೆ ಮಾರ್ಗವಾಗಿ ನಂದಿ ಕ್ರಾಸ್‌ಗೆ ಸಂಪರ್ಕಿಸುವ 298-MW ಬಸ್ ರೂಟ್ ಸ್ಥಳೀಯ ಸಂಚಾರ ವ್ಯವಸ್ಥೆಯನ್ನು ಬಲಪಡಿಸಿದೆ. ಅತ್ಯಂತ ಸುಲಭ ಹಾಗೂ ವೇಗದ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಕೇವಲ 3 ಬಸ್ಸುಗಳು ದಿನವಿಡೀ ನಿರಂತರವಾಗಿ ಬರೋಬ್ಬರಿ 60 ಟ್ರಿಪ್‌ಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ಅತ್ಯುತ್ತಮ ಫ್ರೀಕ್ವೆನ್ಸಿ ಒದಗಿಸುತ್ತಿವೆ. ಸಮಯದ ವಿಷಯಕ್ಕೆ ಬಂದರೆ, ದೇವನಹಳ್ಳಿಯಿಂದ ಮೊದಲ ಬಸ್ ಬೆಳಗ್ಗೆ 6:40ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 7:55ಕ್ಕೆ ಲಭ್ಯವಿದ್ದರೆ, ನಂದಿ ಕ್ರಾಸ್‌ನಿಂದ ಬೆಳಗ್ಗೆ 7:20ಕ್ಕೆ ಮೊದಲ ಬಸ್ ಹಾಗೂ ರಾತ್ರಿ 8:35ಕ್ಕೆ ಕೊನೆಯ ಬಸ್ ಸಂಚರಿಸುತ್ತದೆ. ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು, ದೈನಂದಿನ ಕೆಲಸ ಕಾರ್ಯಗಳಿಗೆ ಓಡಾಡುವ ಸಾರ್ವಜನಿಕರು ಹಾಗೂ ಏರ್‌ಪೋರ್ಟ್ ಸುತ್ತಮುತ್ತಲಿನ ಭಾಗದ ಸ್ಥಳೀಯ ನಿವಾಸಿಗಳಿಗೆ ಈ ಬಸ್ ಸೇವೆ ಅತ್ಯಂತ ಉಪಯುಕ್ತವಾಗಿದ್ದು, ದಿನನಿತ್ಯದ ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ.
Bangalore [Bangalore],Bangalore,Karnataka













