Last Updated:
ಸೈನಿಕ ಚಿತ್ರದ ನಾಯಕ ನಟ ಸಿ.ಪಿ.ಯೋಗೀಶ್ವರ್ 25 ವರ್ಷದ ಬಳಿಕ ಬಣ್ಣ ಹಚ್ಚಿದ್ದಾರೆ. ಇಷ್ಟು ವರ್ಷದ ನಂತರ ಸೈನಿಕ-2 ಚಿತ್ರ ಮಾಡುತ್ತಿದ್ದಾರೆ. ಪುತ್ರ ಧ್ಯಾನ್ ಯೋಗೀಶ್ವರ್ ಅವರನ್ನು ಕರೆದುಕೊಂಡು ಬರ್ತಿದ್ದಾರೆ. ಈ ಸಿನಿಮಾದ ಜೊತೆಗೆ ಇನ್ನೂ ಒಂದು ಚಿತ್ರಕ್ಕೂ ಮುಹೂರ್ತ ಆಗಿದೆ. ಇದರ ಮಾಹಿತಿನೂ ಇಂಟ್ರಸ್ಟಿಂಗ್ ಆಗಿದೆ. ಈ ಎರಡೂ ಸಿನಿಮಾಗಳ ವಿವರ ಇಲ್ಲಿದೆ.
ಸೈನಿಕ್ ಚಿತ್ರ (Sainika Movie) ಬಂದು 25 ವರ್ಷ ಆಗಿದೆ. ಈ ಚಿತ್ರದ ನಾಯಕ ನಟ ಸಿ.ಪಿ.ಯೊಗೀಶ್ವರ್ (C.P. Yogeshwar) 25 ವರ್ಷದ ಬಳಿಕ ಮತ್ತೆ ಬಂದಿದ್ದಾರೆ. ಆದರೆ, ಈ ಸಲ ತಾವೊಬ್ಬರೇ ಬಂದಿಲ್ಲ. ಪುತ್ರ ಧ್ಯಾನ್ ಯೋಗೀಶ್ವರ್ ಅವರನ್ನು ಕರೆದುಕೊಂಡಿದ್ದಾರೆ. ಧ್ಯಾನ್ ಯೋಗೀಶ್ವರ್ ನಟನೆಯ ಸೈನಿಕ್-2 ಚಿತ್ರಕ್ಕೆ ಸಿ.ಎಂ.ಡಿ.ಕೆ.ಶಿವಕುಮಾರ್ ಕ್ಲಾಪ್ ಮಾಡಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ ಈ ದಿನ ಧ್ಯಾನ್ ಯೋಗೀಶ್ವರ್ (Dhyan Yogeshwar) ಅವರ ಮತ್ತೊಂದು ಚಿತ್ರ ಬರ್ತಿದೆ. ಇದು ಇಮ್ಮಡಿ ಪುಲಕೇಶಿಯ (Immadi Pulakeshi) ಮೇಲೆ ತೆಗೆಯುತ್ತಿರೋ ಚಿತ್ರವೇ ಆಗಿದೆ. ಈ ಎರಡೂ ಸಿನಿಮಾಗಳು ಒಂದೇ ದಿನ ಲಾಂಚ್ ಆಗಿವೆ. ಈ ಚಿತ್ರಗಳ ಇನ್ನಷ್ಟು ಮಾಹಿತಿ ಮುಂದೆ ಇದೆ ಓದಿ.
ಮೊನ್ನೇನೆ ಈ ಚಿತ್ರಗಳ ಮಾಹಿತಿ ಅಧಿಕೃತವಾಗಿ ಬಂದಿತ್ತು. ಆ ಪ್ರಕಾರ ಭಾನುವಾರ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ಅಲ್ಲಿ ಈ ಚಿತ್ರಗಳು ಲಾಂಚ್ ಆಗಿವೆ. “ಕರ್ಣಾಟಬಲಂ ಅಜೇಯಂ” ಚಿತ್ರದಲ್ಲಿ ಧ್ಯಾನ್ ಯೋಗೀಶ್ವರ್ ಪಾತ್ರ ಏನು ಅನ್ನೋದು ಕೂಡ ರಿವೀಲ್ ಆಗಿದೆ.
ಸೈನಿಕ-2 ಟೀಸರ್ ರಿಲೀಸ್
ಈ ಚಿತ್ರದಲ್ಲಿ ಇಮ್ಮಡಿ ಪುಲಕೇಶಿ ಪಾತ್ರವನ್ನೆ ಧ್ಯಾನ್ ಯೋಗೀಶ್ವರ್ ಮಾಡುತ್ತಿದ್ದಾರೆ. ಇದಕ್ಕೆ ಬೇಕಿರೋ ಫಿಜಿಕ್ ಕೂಡ ರೆಡಿ ಮಾಡಿಕೊಂಡಿದ್ದಾರೆ. ಸಂಗೊಳ್ಳಿ ರಾಯಣ್ಣ ಮತ್ತು ಕುರುಕ್ಷೇತ್ರ ಚಿತ್ರಗಳ ಡೈರೆಕ್ಷನ್ ಮಾಡಿರೋ ಹಿರಿಯ ನಿರ್ದೇಶಕ ನಾಗಣ್ಣ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ.
ಇದರಲ್ಲಿ ಧ್ಯಾನ್ ಯೊಗೀಶ್ವರ್ ಕಮಾಂಡೋ ರೋಲ್ ಮಾಡಿದ್ದಾರೆ. ತಂದೆ ಸಿ.ಪಿ.ಯೋಗೀಶ್ವರ್ ಕೂಡ ಈ ಚಿತ್ರದಲ್ಲಿದ್ದಾರೆ. ಇವರು ಇಲ್ಲಿ ಸೈನಿಕನಾಗಿಯೇ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸೈನಿಕರ ಈ ಚಿತ್ರಕ್ಕೆ ಈಗಾಗಲೇ ಹೇಳಿದಂತೆ ಸೈನಿಕ-2 ಅಂತ ಹೆಸರು ಇಟ್ಟಿದ್ದಾರೆ.
ಸೈನಿಕ-2 ಚಿತ್ರದ ಟೀಸರ್ ಇಂಟ್ರಸ್ಟಿಂಗ್ ಆಗಿದೆ. ಧ್ಯಾನ್ ಯೋಗೀಶ್ವರ್ ಈ ಒಂದು ಟೀಸರ್ ಅಲ್ಲಿ ಸಖತ್ ಆಗಿಯೇ ಕಾಣಿಸಿದ್ದಾರೆ. ಸೂಪರ್ ಕಮಾಂಡೋ ಅನ್ನುವ ಹಾಗೆ ಇಲ್ಲಿ ಫೈಟ್ ಮಾಡಿದ್ದಾರೆ.
ಕರ್ಣಾಟಬಲಂ ಅಜೇಯಂ ಟೀಸರ್
ಕಮಾಂಡೋ ಪಾತ್ರಕ್ಕಾಗಿಯೇ ಒಳ್ಳೆ ಫಿಜಿಕ್ ಮಾಡಿಕೊಂಡಿದ್ದಾರೆ. ಒಳ್ಳೆ ಹೈಟ್ ಕೂಡ ಇದೆ. ತಂದೆ ಸಿ.ಪಿ.ಯೋಗೀಶ್ವರ್ ಅವರಿಗಿಂತಲೂ ಎತ್ತರ ಇದ್ದಾರೆ.
ಈ ಒಂದು ಟೀಸರ್ ಅಲ್ಲಿ ಸಿ.ಪಿ.ಯೋಗೀಶ್ವರ್ ಎಂಟ್ರಿ ಕೂಡ ಭರ್ಜರಿ ಆಗಿದೆ. ಇಬ್ಬರೂ ಒಟ್ಟಿಗೆ ಒಂದು ಮಿಷನ್ ಕಂಪ್ಲೀಟ್ ಮಾಡ್ತಾರೆ. ಬ್ಲಾಸ್ಟಿಂಗ್ ಎಲ್ಲ ಸೂಪರ್ ಆಗಿಯೇ ಮಾಡಿದ್ದಾರೆ. ಇದು ಹೊಸ ಭರವಸೆ ಮೂಡಿಸುತ್ತಿದೆ.
ಕರ್ಣಾಟಬಲಂ ಅಜೇಯಂ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಚಿತ್ರದ ಮುಹೂರ್ತದ ದಿನವೇ ಇದು ರಿಲೀಸ್ ಆಗಿದೆ. ಇದರಲ್ಲಿ ಇಮ್ಮಡಿ ಪುಲಕೇಶಿಯ ಕತೆ ಇದೆ. ಇಮ್ಮಡಿ ಪುಲಕೇಶಿ ಆಗಿಯೇ ಧ್ಯಾನ್ ಯೋಗೀಶ್ವರ್ ನಟಿಸಿದ್ದಾರೆ.
ಈ ಪಾತ್ರದಲ್ಲೂ ಧ್ಯಾನ್ ಯೋಗೀಶ್ವರ್ ಈ ಪಾತ್ರಕ್ಕಾಗಿಯೂ ಒಳ್ಳೆ ತಯಾರಿನೇ ಮಾಡಿಕೊಂಡಿದ್ದಾರೆ. ಧ್ಯಾನ್ ಯೋಗೀಶ್ವರ್ ಅವರ ಎರಡು ಚಿತ್ರಗಳು ಒಟ್ಟಿಗೆ ಅನೌನ್ಸ್ ಆಗಿವೆ.
ಸಿ.ಪಿ.ಯೋಗೀಶ್ವರ್ 25 ವರ್ಷದ ಬಳಿಕ ಬಣ್ಣ ಹಚ್ಚಿದ್ದಾರೆ. ಮಗನೊಟ್ಟಿಗೆ ವಾಪಾಸ್ ಬರ್ತಿದ್ದಾರೆ. ಮಗನ ಈ ಎರಡೂ ಚಿತ್ರದಲ್ಲಿ ಸಿ.ಪಿ.ಯೋಗೀಶ್ವರ್ ನಟಿಸಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 05, 2026 10:04 PM IST













