Kichcha Sudeep: ಮ್ಯಾಂಗೋ ಪಚ್ಚ ಚಿತ್ರಕ್ಕೆ ಸುದೀಪ್ ಸಾಥ್, ಖಡಕ್ ಧ್ವನಿಯ ಅದ್ಭುತ ನಿರೂಪಣೆಯೇ ಹೈಲೈಟ್ | | ACTPnews

ಮ್ಯಾಂಗೋ ಪಚ್ಚ ಚಿತ್ರಕ್ಕೆ ಸುದೀಪ್ ಸಾಥ್; ಖಡಕ್ ಧ್ವನಿಯ ಅದ್ಭುತ ನಿರೂಪಣೆ ಹೈಲೈಟ್!


Last Updated:

ಮ್ಯಾಂಗೋ ಪಚ್ಚ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಕಿಚ್ಚನ ಖಡಕ್ ಧ್ವನಿಯ ಸ್ಪರ್ಶ ಇದೆ. ಈ ಮೂಲಕ ಸುದೀಪ್ ಈ ಚಿತ್ರದ ಕಥೆಯನ್ನ ಮತ್ತು ಪಾತ್ರಗಳನ್ನ ಪರಿಚಯಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮ್ಯಾಂಗೋ ಪಚ್ಚ ಚಿತ್ರಕ್ಕೆ ಸುದೀಪ್ ಸಾಥ್; ಖಡಕ್ ಧ್ವನಿಯ ಅದ್ಭುತ ನಿರೂಪಣೆ ಹೈಲೈಟ್!
ಮ್ಯಾಂಗೋ ಪಚ್ಚ ಚಿತ್ರಕ್ಕೆ ಸುದೀಪ್ ಸಾಥ್; ಖಡಕ್ ಧ್ವನಿಯ ಅದ್ಭುತ ನಿರೂಪಣೆ ಹೈಲೈಟ್!

ಮ್ಯಾಗೋ ಪಚ್ಚ ಚಿತ್ರಕ್ಕೆ (Mango Pachcha Movie) ಸುದೀಪ್ (Sudeepa) ಸಾಥ್ ಕೊಟ್ಟಿದ್ದಾರೆ. ಚಿತ್ರದ ನಾಯಕನ ಪರಿಚಯ ಮತ್ತು ಕಥೆಯ ನಿರೂಪಣೆ ಎರಡನ್ನೂ ಇವರು ತಮ್ಮ ಕಂಚಿನ ಕಂಠದ ಮೂಲಕವೇ ಮಾಡಿದ್ದಾರೆ. 2002 ರಲ್ಲಿ ಮೈಸೂರು ಮತ್ತು ಟೈಮ್ ಎರಡೂ ಚೇಂಜ್ ಆಗ್ತಾ ಇತ್ತು. ಈ ಸಮಯದಲ್ಲಿ ಪದ್ಮ, ಶ್ಯಾಮ್, ನಾಗಪ್ಪ, ಶ್ರೀಧರ್ ಇವರಿಲ್ಲದೆ ಈ ಕಥೇನೆ ಇಲ್ಲ. ಆದರೆ, ಇದು ಈ ಪಚ್ಚನ ಕಥೆ…ಹೀಗೆ ಕಿಚ್ಚ ಸುದೀಪ್ (Kichcha Sudeepa) ಈ ಸಿನಿಮಾವನ್ನ ನಿರೂಪಣೆ ಮಾಡಿದ್ದಾರೆ. ಆದರೆ, ಇದು ಟೀಸರ್ (Teaser) ಅಷ್ಟೆ ಆಗಿದೆ. ಆದಷ್ಟು ಬೇಗ ಟ್ರೈಲರ್ ಬರುತ್ತದೆ ಅಂತ ಕೂಡ ಇದೇ ಟೀಸರ್ ಅಲ್ಲಿ ಹೇಳಲಾಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಖಡಕ್ ಧ್ವನಿ…

ಕಿಚ್ಚ ಸುದೀಪ್ ಧ್ವನಿಯಲ್ಲಿ ಮ್ಯಾಂಗೋ ಪಚ್ಚನ ಕಥೆಯ ನಿರೂಪಣೆ ಆಗಿದೆ. ಚಿತ್ರದಲ್ಲಿ ಬರುವ ಶ್ರೀಧರ್, ನಾಗಪ್ಪ, ಶ್ಯಾಮ್, ಪದ್ಮ, ಹೀಗೆ ಚಿತ್ರದ ಪ್ರಮುಖ ಪಾತ್ರಗಳನ್ನ ಸುದೀಪ್ ಪರಿಚಯ ಮಾಡಿದ್ದಾರೆ. ತಮ್ಮ ಕಂಚಿನ ಕಂಠದಲ್ಲಿಯೇ ಇವರ ಬಗ್ಗೆ ಹೇಳಿದ್ದಾರೆ.
Kichcha Sudeepa Narrated Mango Pachcha Movie Teaser Release

ಖಡಕ್ ಧ್ವನಿಯ ಅದ್ಭುತ ನಿರೂಪಣೆ ಹೈಲೈಟ್

ಮ್ಯಾಂಗೋ ಪಚ್ಚ ಪಾತ್ರಧಾರಿ ಸಂಚಿತ್ ಸಂಜೀವ್ ರೋಲ್ ಅನ್ನು ಅಷ್ಟೆ ಖಡಕ್ ಆಗಿಯೇ ಪರಿಚಯ ಮಾಡಿದ್ದಾರೆ. ಈ ಚಿತ್ರದಲ್ಲಿ ಈ ಪಚ್ಚನ ಕಥೆ ಇದೆ ಅಂತಲೂ ಹೇಳಿದ್ದಾರೆ.

ಯಾರು ಯಾವ ಪಾತ್ರ

ಚಿತ್ರದಲ್ಲಿ ಮ್ಯಾಂಗೋ ಪಚ್ಚ ಪಾತ್ರವನ್ನ ಸಂಚಿತ್ ಸಂಜೀವ್ ಮಾಡಿದ್ದಾರೆ. ಪದ್ಮ ಅನ್ನುವ ಪಾತ್ರವನ್ನ ಹರಿಣಿ ಶ್ರೀಕಾಂತ್ ಮಾಡಿದ್ದಾರೆ. ಕಾಜಲ್ ಕುಂದರ್ ಇಲ್ಲಿ ಸೂಜಿ ಅನ್ನುವ ರೋಲ್ ಮಾಡಿದ್ದಾರೆ.

ವಿಜಯ್ ರಾಘವೇಂದ್ರ ಅಳಿಯ ಜೈ ಇಲ್ಲಿ ಶ್ಯಾಮ್ ಅನ್ನುವ ಪಾತ್ರ ಮಾಡಿದ್ದಾರೆ. ಮಯೂರ್ ಪಟೇಲ್ ಪಾತ್ರದ ಹೆಸರು ನಾಗಪ್ಪ ಅಂತಲೇ ಇದೆ. ಮ್ಯಾಕ್ಸ್ ಮಂಜು ಇಲ್ಲಿ ಶ್ರೀಧರ್ ಅನ್ನುವ ರೋಲ್ ಮಾಡಿದ್ದಾರೆ. ಪ್ರಶಾಂತ್ ಹಿರೇಮಠ್ ಇಲ್ಲಿ ಮಹೇಂದ್ರ ಅನ್ನುವ ಪಾತ್ರ ಮಾಡಿದ್ದಾರೆ.

ಶೀಘ್ರದಲ್ಲಿ ಟ್ರೈಲರ್ ರಿಲೀಸ್

ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್ ರಿಲೀಸ್ ಆಗಿಲ್ಲ. ಅದನ್ನ ಆದಷ್ಟು ಬೇಗ ರಿಲೀಸ್ ಮಾಡ್ತೀವಿ ಅಂತ ಸಿನಿಮಾ ತಂಡ ಹೇಳಿದೆ. ಅದು ಇದೇ ಟೀಸರ್ ಅಲ್ಲಿಯೇ ಗೊತ್ತಾಗುತ್ತದೆ.

Kichcha Sudeepa Narrated Mango Pachcha Movie Teaser Release

ಮ್ಯಾಂಗೋ ಪಚ್ಚ ಚಿತ್ರಕ್ಕೆ ಸುದೀಪ್ ಸಾಥ್

ಈ ಚಿತ್ರದ ಇತರ ವಿವರಕ್ಕೆ ಬಂದ್ರೆ, ಈಗಾಗಲೇ ಹೇಳಿದಂತೆ ಕಿಚ್ಚ ಸುದೀಪ್ ಈ ಚಿತ್ರದ ನಿರೂಪಣೆ ಮಾಡಿದ್ದಾರೆ. ನವ ನಿರ್ದೇಶಕ ವಿವೇಕ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಹಾಗೂ ಸ್ವಾಮಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದಾರೆ.

ಜೂನ್-5 ರಂದು ಚಿತ್ರ ರಿಲೀಸ್

ಜೂನ್-5 ರಂದು ಮ್ಯಾಂಗೋ ಪಚ್ಚ ರಿಲೀಸ್ ಆಗುತ್ತಿದೆ. ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಈ ಚಿತ್ರದ ಮೂಲಕವೇ ಕನ್ನಡ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ.

Kichcha Sudeepa Narrated Mango Pachcha Movie Teaser Release

ಜೂನ್-5 ರಂದು ಚಿತ್ರ ರಿಲೀಸ್

ಚಿತ್ರದ ಟೀಸರ್ ಮತ್ತು ಹಾಡುಗಳಲ್ಲಿ ಭರವಸೆ ಮೂಡಿಸಿದ್ದಾರೆ. ಇಡೀ ಸಿನಿಮಾ ಹೇಗೆ ಇರುತ್ತದೆ ಅನ್ನುವ ಕುತೂಹಲವೂ ಜಾಸ್ತಿ ಆಗಿದೆ. ಸಾನ್ವಿ ಸುದೀಪ್ ಈ ಚಿತ್ರದಲ್ಲೂ ಒಂದು ಹಾಡನ್ನ ಹಾಡಿದ್ದಾರೆ. ಅರಗಿಣಿಯೇ ಅನ್ನುವ ಹಾಡನ್ನ ಇಲ್ಲಿ ಹಾಡಿದ್ದಾರೆ.

ಸುಪ್ರಿಯಾನ್ವಿ ನಿರ್ಮಾಣದ ಚಿತ್ರ

ಕಿಚ್ಚ ಸುದೀಪ್ ತಮ್ಮ ಸುಪ್ರಿಯಾನ್ವಿ ಚಿತ್ರ ನಿರ್ಮಾಣ ಸಂಸ್ಥೆ ಮೂಲಕವೇ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ .ಜಿ ರಾಜ್ ಅವರು ಕೆ.ಆರ್.ಜಿ ಮೂಲಕವೇ ಈ ಚಿತ್ರ ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports