Theft Case: ಬೆತ್ತಲೆಯಾಗಿ ಹೋಟೆಲ್‌ಗೆ ನುಗ್ಗಿ, 12 ಮೊಟ್ಟೆ ಆಮ್ಲೆಟ್ ತಿಂದ ಕಳ್ಳ ಪೊಲೀಸ್ ಬಲೆಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Naked Thief Busted in Kerala: ಮಾಹಿತಿ ಪ್ರಕಾರ, ಆತ ಐದು ಮನೆಗಳಿಂದ ಕಳ್ಳತನ ಮಾಡಿದ್ದ. ಅಲ್ಲದೇ, ಆತ ಬೆತ್ತಲೆಯಾಗಿಯೇ ಮನೆಗಳಿಗೆ ನುಗ್ಗುವ ಖಯಾಲಿ ಹೊಂದಿದ್ದ. ಎರಡು ಬೈಕ್‌ಗಳು, ಚಿನ್ನ ಮತ್ತು ಹಣವನ್ನು ಕದ್ದಿದ್ದ ಆತ ಒಂದು ಮನೆಯಿಂದ ಒಂದು ಛತ್ರಿಯನ್ನೂ ಕದ್ದಿದ್ದ ಎನ್ನಲಾಗಿದೆ.

News18
News18

ಆಲಪ್ಪುಳ: ಜಗತ್ತಿನಲ್ಲಿ ಏನೇನೋ ಕಳ್ಳತನ ಮಾಡೋರಿದ್ದಾರೆ. ಬೆಲೆ ಬಾಳುವ ಚಿನ್ನಾಭರಣಗಳಿಂದ ಹಿಡಿದು ಮಹಿಳೆಯರ ಒಳ ಉಡುಪುಗಳ ತನಕ ಕಳ್ಳತನ (Theft Case) ಮಾಡೋರು ಇದ್ದಾರೆ. ಆದರೆ ಇಲ್ಲೊಬ್ಬ ಕಳ್ಳ ತನ್ನ ವಿಚಿತ್ರ ವರ್ತನೆಯಿಂದಾಗಿ ಸುದ್ದಿಯಾಗಿದ್ದಾನೆ.

ಬೆತ್ತಲೆಯಾಗಿ ಹೋಟೆಲ್‌ಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ತಿರುವನಂತಪುರಂನ ಪೋಥೆನ್‌ಕೋಡ್ ಮೂಲದ ಬಿಜು ಸೆಬಾಸ್ಟಿಯನ್ ಬಂಧಿತ ಆರೋಪಿಯಾಗಿದ್ದು, ಈತ ಆಲಪ್ಪುಳದ ಚೆಂಗನ್ನೂರಿನಲ್ಲಿ ಕಳ್ಳತನ ಮಾಡುತ್ತಿದ್ದ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆತನನ್ನು ಬಲೆಗೆ ಕೆಡವಿದ್ದಾರೆ.

ಮಾಹಿತಿ ಪ್ರಕಾರ, ಆತ ಐದು ಮನೆಗಳಿಂದ ಕಳ್ಳತನ ಮಾಡಿದ್ದ. ಅಲ್ಲದೇ, ಆತ ಬೆತ್ತಲೆಯಾಗಿಯೇ ಮನೆಗಳಿಗೆ ನುಗ್ಗುವ ಖಯಾಲಿ ಹೊಂದಿದ್ದ. ಎರಡು ಬೈಕ್‌ಗಳು, ಚಿನ್ನ ಮತ್ತು ಹಣವನ್ನು ಕದ್ದಿದ್ದ ಆತ ಒಂದು ಮನೆಯಿಂದ ಒಂದು ಛತ್ರಿಯನ್ನೂ ಕದ್ದಿದ್ದ ಎನ್ನಲಾಗಿದೆ.

ಬೈಕ್ ನಂಬರ್ ಮೇಲೆ ಕೇಂದ್ರೀಕರಿಸಿದ ತನಿಖೆಯ ನಂತರ ಶಂಕಿತನನ್ನು ವರ್ಕಳದಲ್ಲಿ ಬಂಧಿಸಲಾಯಿತು. ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ ಎಂದು ಪೊಲೀಸ್ ಮಾಹಿತಿಗಳು ತಿಳಿಸಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports